ಡಿಸಿಜಿ ನ್ಯೂಸ್ ವರದಿ ಪರಿಣಾಮ : OXFORD PATIL’S TALENT SEARCH EXAM; 21 ವಿದ್ಯಾರ್ಥಿಗಳಿಗೆ ಸಂಪೂರ್ಣ ವಸತಿ ಸಮೇತ ಉಚಿತ ಶಿಕ್ಷಣ

ಡಿಸಿಜಿ ನ್ಯೂಸ್ ವರದಿ ಪರಿಣಾಮ : OXFORD PATIL’S TALENT SEARCH EXAM; 21 ವಿದ್ಯಾರ್ಥಿಗಳಿಗೆ ಸಂಪೂರ್ಣ ವಸತಿ ಸಮೇತ ಉಚಿತ ಶಿಕ್ಷಣ

ಮುದ್ದೇಬಿಹಾಳ : ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯಿAದ 21 ವಿದ್ಯಾರ್ಥಿಗಳಿಗೆ ಎರಡು ವರ್ಷದ ಸಂಪೂರ್ಣ ಉಚಿತ ಶಿಕ್ಷಣ, 20 ವಿದ್ಯಾರ್ಥಿಗಳಿಗೆ ಎರಡು ವರ್ಷದ ಉಚಿತ ಶಿಕ್ಷಣ,ಇನ್ನುಳಿದ 40 ವಿದ್ಯಾರ್ಥಿಗಳಿಗೆ ಶಿಕ್ಷಣದ ಶುಲ್ಕದಲ್ಲಿ ರಿಯಾಯತಿ ನೀಡಲಾಗುವುದು ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ್ ಹೇಳಿದರು.
ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನಲ್ಲಿ ರವಿವಾರ ನಡೆದ ಟ್ಯಾಲೆಂಟ್ ಸರ್ಚ್ ಅವಾರ್ಡ್-2025ರ ಅಂತಿಮ ಸುತ್ತಿನ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಲೇಜಿನಲ್ಲಿ ಈಚೇಗೆ ಆಯೋಜಿಸಿದ್ದ ಟ್ಯಾಲೆಂಟ್ ಅವಾರ್ಡ್-2025ರ ಪರೀಕ್ಷೆಯಲ್ಲಿ 3555 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.ಆದರೆ ಸಂಸ್ಥೆಯಿAದ ಮುಂಚಿತವಾಗಿ ನಿಗದಿ ಪಡಿಸಿದ್ದ ಅಂಕಗಳನ್ನು ಯಾರೊಬ್ಬರೂ ಗಳಿಸದ ಕಾರಣ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲರ ಸೂಚನೆಯಂತೆ ಅದರಲ್ಲಿಯೇ ಅತೀ ಹೆಚ್ಚು ಅಂಕ ಪಡೆದ 220 ವಿದ್ಯಾರ್ಥಿಗಳನ್ನು ಅಂತಿಮ ಆಯ್ಕೆ ಸುತ್ತಿಗೆ ಪರಿಗಣಿಸಲಾಗಿದ್ದು ಅಂತಿಮವಾಗಿ ಮತ್ತೊಂದು ಪರೀಕ್ಷೆ ನಡೆಸಿದ್ದು ಅದರಲ್ಲಿ ಮೊದಲ 80 ಸ್ಥಾನ ಪಡೆದವರ ಫಲಿತಾಂಶ ಪ್ರಕಟಿಸಿದ್ದೇವೆ ಎಂದು ತಿಳಿಸಿದರು.

ತಾಳಿಕೋಟಿ ಶಿಕ್ಷಕ ಎಸ್.ಎಸ್.ಸಜ್ಜನ,ಪ್ರಮುಖರಾದ ರಾಮನಗೌಡ ಬಿರಾದಾರ,ಕೆ.ಎಸ್.ಕರೇಕಲ್ಲ, ಆಂಗ್ಲಮಾಧ್ಯಮ ಶಾಲೆಯ ಇಸ್ಮಾಯಿಲ್ ಮನಿಯಾರ್, ಮಂಜು ಮಂಕಣಿ, ರಾಜಶೇಖರ ಹಿರೇಮಠ, ರವಿ ನಾಯಕ, ಸಂಗಮೇಶ ಬಡಿಗೇರ, ರೇವಣಸಿದ್ದ ಮುರಾಳ ಮೊದಲಾದವರು ಇದ್ದರು.

ಎರಡು ವರ್ಷದ ಪೂರ್ಣ ವಸತಿ ಉಚಿತ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು :
ಶಹಾಪೂರ ಆರ್.ಎಂ.ಎಸ್.ಎ ಶಾಲೆಯ ಅಮನ್, ಶಹಾಪೂರದ ದುದುಪುಡಿ ಶಾಲೆ ನಿಸರ್ಗ ಪೊಲೀಸಪಾಟೀಲ್,ಹುಮನಾಬಾದ ಚೆನ್ನಬಸವೇಶ್ವರ ಶಾಲೆಯ ವೈಷ್ಣವಿ ರೆಡ್ಡಿ, ಮುದ್ದೇಬಿಹಾಳ ಬಿ.ಎಸ್ ಸೆಂಟ್ರಲ್ ಶಾಲೆಯ ಮೊಹ್ಮದ ಜಿಹಾಮ್,ಮೈಲೇಶ್ವರ ಬ್ರಿಲಿಯಂಟ್ ಶಾಲೆಯ ಕಾರ್ತಿಕ ಕನಕರೆಡ್ಡಿ,ಹುಮನಾಬಾದ ಚನ್ನಬಸವೇಶ್ವರ ಶಾಲೆಯ ತ್ರಿಷಾ ಕೃಷ್ಣರೆಡ್ಡಿ, ಲಿಂಗಸುಗೂರು ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ನಿಖಿತಾ ವಸ್ತçದ,ಸಿಂದಗಿ ಆರ್.ಎಂ.ಎಸ್.ಎ ಶಾಲೆಯ ಶರಧಿ ಹಿರೇಮಠ, ಬೀಸಲದಿನ್ನಿ ಎಸ್.ಎಸ್.ಪಿ.ಎಸ್ ಶಾಲೆಯ ನವೀನಕುಮಾರ ಗೌಡರ, ಜಮಖಂಡಿ ತುಂಗಳ ಶಾಲೆಯ ಸೌಮ್ಯಾ ಉತ್ನಾಳ, ಕೊರ್ಲಹಳ್ಳಿ ಆರ್,ಎಂ.ಎಸ್.ಎ ಶಾಲೆಯ ಕಾವ್ಯಾ ಉಪ್ಪಾರ , ವಿಜಯಪುರ ಶ್ರೀರಾಮಕೃಷ್ಣ ಶಾಲೆಯ ಪ್ರೀತಮ ಪತ್ತಾರ, ಯಾದಗಿರ ಜೆಎನ್‌ವಿ ಶಾಲೆಯ ಸಿದ್ದೇಶ್ವರ ಎ.ಟಿ., ಬೀಳಗಿ ವಿವೇಕಾನಂದ ಇಂಟರ್‌ನ್ಯಾಶನಲ್ ಶಾಲೆಯ ಅನನ್ಯಾ ಕೊಕಟನೂರ,ರಕಬವಿ ಪದ್ಮಾವತಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಸುಕೃತ ಸಜ್ಜನ, ಆದವೈಭವಿ ಕೆ.ಆರ್.ಸಿ.ಆರ್ ಶಾಲೆ ಶ್ರೇಯಾ ಸೊಮ್ಲೆಪ್ಪ, ಶಹಾಪೂರ ಆರ್.ಎಂ.ಎಸ್.ಎ ಶಾಲೆಯ ಪ್ರವೀಣಕುಮಾರ ದಂಡಪ್ಪ, ಯಾದಗಿರಿಯ ಜೆಎನ್‌ವಿ ಶಾಲೆ ರೇವಣಸಿದ್ದ ಆಲ್ಯಾಳ, ಕೊಲ್ಹಾರ ಜೆಎನ್‌ವಿ ಶಾಲೆಯ ತರುಣ ಕೊಲ್ಹಾರ,ರಾಜಲಬಂಡಾ ಎಂಡಿಆರ್‌ಎಸ್ ಶಾಲೆ ನಾಗರಾಜ ಅವರು ಮೊದಲ 20 ಸ್ಥಾನಗಳಲ್ಲಿ ಆಯ್ಕೆಯಾಗಿದ್ದು ಅವರಿಗೆ ವಸತಿ ಸಮೇತ ಉಚಿತ ಶಿಕ್ಷಣ,ಇನ್ನುಳಿದಂತೆ 20-40 ವಿದ್ಯಾರ್ಥಿಗಳಿಗೆ ಎರಡು ವರ್ಷದ ಶಿಕ್ಷಣ ಉಚಿತ, 40-60 ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 90 ಸಾವಿರ ರೂ. ಶುಲ್ಕ ರಿಯಾಯಿತಿ,60-80 ನೇ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಎರಡು ವರ್ಷದ ಶುಲ್ಕದಲ್ಲಿ 25 ಸಾವಿರ ರೂ.ರಿಯಾಯಿತಿ ಘೋಷಣೆ ಮಾಡಲಾಯಿತು.


ವರದಿ ಮಾಡಿದ್ದು ನಿಮ್ಮ ಡಿಸಿಜಿ ನ್ಯೂಸ್ :
ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ ನಡೆಸಿದ್ದ ಸಂಸ್ಥೆಯವರು ಅಂದು 3550 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದರೂ ಬಹುಮಾನಕ್ಕೆ ಯಾರನ್ನೂ ಆಯ್ಕೆ ಮಾಡಿರಲಿಲ್ಲ.ಇದನ್ನು ನಿಮ್ಮ ಡಿಸಿಜಿ ನ್ಯೂಸ್ ವರದಿ ಮಾಡಿತ್ತು.ಅಲ್ಲದೇ ಸಾರ್ವತ್ರಿಕವಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಕಿವಿಮಾತನ್ನು ಸಂಸ್ಥೆಯವರ ಗಮನಕ್ಕೆ ತಂದಿತ್ತು.ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ್ ಅವರು ಪ್ರತ್ಯೇಕ ಸಮಾರಂಭವ,ಸ್ಪರ್ಧೆ ಏರ್ಪಡಿಸಿ ಯಾರಿಗೂ ಅನ್ಯಾಯವಾಗದಂತೆ ವಿದ್ಯಾರ್ಥಿಗಳ ಸ್ನೇಹಿ ನಿರ್ಧಾರ ಕೈಗೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Latest News

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ :                 ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ : ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿ ಹಾಗೂ ಒಳ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಆದ್ಯತೆ ನೀಡುತ್ತಿದೆ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ಮುದ್ದೇಬಿಹಾಳ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ:   ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮುದ್ದೇಬಿಹಾಳ : ಹೋಳಿ ಹಬ್ಬದ ಅಂಗವಾಗಿ ಇಲ್ಲಿನ ಸಮಾನ ಮನಸ್ಕರ ಯುವ ಬಳಗದ ಸಹಯೋಗದಲ್ಲಿ 4 ರಂದು ಬೆಳಗ್ಗೆ 8 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಪಟ್ಟಣದ ಹುಡ್ಕೋದಲ್ಲಿರುವ ಗವಿಸಿದ್ದೇಶ್ವರ ವೇದಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮುದ್ದೇಬಿಹಾಳದ ಎಲ್ಲಾ ಬಾಂಧವರು ತಮ್ಮ ಮಕ್ಕಳನ್ನು ಕರೆತಂದು ಈ ಕಾರ್ಯಕ್ರಮದಲ್ಲಿ ತೊಡಗಿಸಿ ಹೋಳಿ ಆಚರಣೆ ಯಶಸ್ವಿಗೊಳಿಸುವಂತೆ ಬಳಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಮುದ್ದೇಬಿಹಾಳ : ಪಟ್ಟಣಕ್ಕೆ ಕುಡಿವ ನೀರು ಪೂರೈಕೆ ಎರಡು ದಿನ ವಿಳಂಬವಾಗಿದ್ದು ಮಾ.3 ರಿಂದ ಯತಾಸ್ಥಿತಿಯಲ್ಲಿ ವಿವಿಧ ವಾರ್ಡಗಳಿಗೆ ಸರದಿ ಮೇಲೆ ಪೂರೈಕೆ ಆಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕುಡಿವ ನೀರು ಪೂರೈಕೆ ವಿಭಾಗದ ಉಸ್ತುವಾರಿ, ಪುರಸಭೆ ಆರೋಗ್ಯ ನಿರೀಕ್ಷಕ ಜಾವೇದ ನಾಯ್ಕೋಡಿ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡು ದಿನಗಳಿಂದ ಇಲ್ಲಿನ ಜ್ಞಾನ ಭಾರತಿ ಶಾಲೆ ಮುಂದೆ ಮುಖ್ಯ ಕೊಳವೆ ಪೈಪ್‌ನಲ್ಲಿ ಸೋರಿಕೆ ಕಂಡು ಬಂದಿತ್ತು.ಅದನ್ನು