ಮುದ್ದೇಬಿಹಾಳ : ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಬೇಕಾದ ಜಾತಿ ಪ್ರಮಾಣ ಪತ್ರವನ್ನು ನಿಗದಿತ ಅವಧಿಯಲ್ಲಿ ಸಲ್ಲಿಸದೇ ಅವಧಿ ಮುಗಿದ ಬಳಿಕ ಸಲ್ಲಿಸಲು ಮುಂದಾದ ಅಭ್ಯರ್ಥಿಯ ಪ್ರಮಾಣ ಪತ್ರ ಪಡೆದುಕೊಳ್ಳಲು ಮುಂದಾದ ಚುನಾವಣಾಧಿಕಾರಿಯೊಂದಿಗೆ ಇನ್ನೋರ್ವ ಅಭ್ಯರ್ಥಿಯ ಬೆಂಬಲಿಗರು ವಾಗ್ವಾದ ನಡೆಸಿದ ಘಟನೆ ತಾಲ್ಲೂಕಿನ ಕುಂಟೋಜಿಯಲ್ಲಿ ಮಂಗಳವಾರ ನಡೆದಿದೆ.
ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯ ಮೂರನೇ ವಾರ್ಡ್’ನ ಒಂದು ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು ನ.12 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. 3ಬಿ ವರ್ಗ ಮಹಿಳಾ ಮೀಸಲಾತಿಗೆ ಸಿಮೀತವಾಗಿದ್ದ ಸ್ಥಾನಕ್ಕೆ ಕುಂಟೋಜಿಯ ಶಾಂತಾ ವೀರೇಶ ಮದರಿ ಹಾಗೂ ಕವಿತಾ ಹಣಮಂತ್ರಾಯ ಶಿರಗುಪ್ಪಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಕವಿತಾ ಶಿರಗುಪ್ಪಿ ಅವರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸುವ ವೇಳೆ ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸದೇ ಇರುವುದು ಕಂಡು ಬಂದಿದೆ. ನಾಮಪತ್ರ ಸ್ವೀಕಾರದ ಅವಧಿ ಮುಗಿದ ನಂತರ ಜಾತಿ ಪ್ರಮಾಣ ಪತ್ರವನ್ನು ಅಭ್ಯರ್ಥಿ ಕವಿತಾ ಅವರು ತಮ್ಮ ಬೆಂಬಲಿಗರಿಂದ ಪಡೆದು ಚುನಾವಣಾಧಿಕಾರಿಗೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಂತಾ ಮದರಿ ಹಾಗೂ ಬೆಂಬಲಿಗರು ಚುನಾವಣಾಧಿಕಾರಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಂತಾ ಮದರಿ ಬೆಂಬಲಿಗರಾದ ಗುರುಲಿಂಗಪ್ಪ ಸುಲ್ಲಳ್ಳಿ, ವೀರೇಶ ಮದರಿ,ಚಂದ್ರಶೇಖರ ಪಾಟೀಲ್ ಮತ್ತಿತರರು, ಅವಧಿ ಮುಗಿದ ನಂತರ ದಾಖಲೆಗಳನ್ನು ಸ್ವೀಕರಿಸಬಾರದು ಎಂದು ಚುನಾವಣಾಧಿಕಾರಿಯೊಂದಿಗೆ ವಾಗ್ವಾದ ಮಾಡಿದ್ದೇವೆ.ನಾಮಪತ್ರ ಸಲ್ಲಿಕೆ ಅವಧಿಯ ಒಳಗಡೆ ಸಲ್ಲಿಸಿದ ದಾಖಲೆಗಳನ್ನು ಮಾತ್ರ ಪರಿಗಣಿಸಬೇಕು.ನಿಯಮಾನುಸಾರ ಜಾತಿ ಪ್ರಮಾಣ ಪತ್ರ ಸಲ್ಲಿಸದ ಶಿರಗುಪ್ಪಿ ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ತಡಸದ, ಗುರು ಹೊನ್ನಳ್ಳಿ, ಬಸವರಾಜ ಮದರಿ, ಆದೇಶ ಕೋಳೂರು ಇದ್ದರು.
ನಿಷ್ಪಕ್ಷಪಾತ ಚುನಾವಣೆಗೆ ಆಗ್ರಹ :ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಯೊಂದಿಗೆ ಜಟಾಪಟಿ
ನಿಷ್ಪಕ್ಷಪಾತ ಚುನಾವಣೆಗೆ ಆಗ್ರಹ :ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಯೊಂದಿಗೆ ಜಟಾಪಟಿ
Latest News
ಪತ್ರಕರ್ತ ಮುರಾಳಗೆ ರಾಜ್ಯಮಟ್ಟದ ಮಹಾಂತ ಶ್ರೀ ಪ್ರಶಸ್ತಿ
ಮುದ್ದೇಬಿಹಾಳ : ರಾಯಚೂರಿನ ಸಿದ್ದರಾಮ ಜಮ್ಮಲದಿನ್ನಿ ಕಲ್ಯಾಣ ಮಂಟಪದಲ್ಲಿ ನಡೆದ ಮಾತೋಶ್ರೀ ಮಹಾಂತಮ್ಮ ಶಿವಬಸ್ಸಪ್ಪ
ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ : ಶಿಕ್ಷಣ ಸಂಸ್ಥೆ ಬೆಳೆಸುವುದು ಸಾಹಸದ ಕಾರ್ಯ-ಧಮ್ಮೂರಮಠ
ಮುದ್ದೇಬಿಹಾಳ : ನಗರ ಪ್ರದೇಶಗಳಲ್ಲಾದರೆ ಸಂಸ್ಥೆಗಳು ಕೇಳಿದಷ್ಟು ಶುಲ್ಕ ಕೊಡಲು ಪಾಲಕರು ಸಿದ್ಧರಿರುತ್ತಾರೆ.ಅಲ್ಲಿ ಶಿಕ್ಷಣ
ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಕದನಕ್ಕೆ ಮಹೂರ್ತ ಫಿಕ್ಸ್..
ಬೆಂಗಳೂರು: ರಾಜ್ಯದಲ್ಲಿ ಇಬ್ಬರು ಶಾಸಕರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ
ಟಗರಿನ ಕಾಳಗ ಪ್ರಮುಖ ಆಕರ್ಷಣೆ: ಮುದ್ದೇಬಿಹಾಳ : ಮಾ.18 ರಂದು ಪಿಲೇಕೆಮ್ಮ ದೇವಿ ಜಾತ್ರಾ ಮಹೋತ್ಸವ
ಮುದ್ದೇಬಿಹಾಳ : ಪಟ್ಟಣದ ಪಿಲೇಕೆಮ್ಮ ನಗರದಲ್ಲಿರುವ ಪಿಲೇಕೆಮ್ಮ ದೇವಿ ಜಾತ್ರಾಮಹೋತ್ಸವ ಮಾ.18 ಹಾಗೂ 19ರಂದು
ಪತ್ರಕರ್ತರಾದ ದಫೇದಾರ,ಉಕ್ಕಲಿ,ಹೋರಾಟಗಾರ ನಾಟೀಕಾರ ಸೇರಿ 30 ಜನ ಆಯ್ಕೆ
ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ಗ್ರಾಮದ ಚೆನ್ನಬಸವ ಶ್ರೀ ಏಜ್ಯೂಕೇಷನ ರೂರಲ್ ಕಲ್ಚರಲ್ ಸೊಸೈಟಿಯಿಂದ ಪ್ರತಿ ವರ್ಷ ಕೊಡಮಾಡುವ ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿಗೆ ಮಾಧ್ಯಮ, ಸಂಕೀರ್ಣ,ಶಿಕ್ಷಣ,ಸಾಮಾಜಿಕ ಹೋರಾಟ ಕ್ಷೇತ್ರಗಳಿಂದ ಒಟ್ಟು 30 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುದ್ದೇಬಿಹಾಳ ತಾಲ್ಲೂಕಿನ ಹಂಡರಗಲ್ದಲ್ಲಿ ತ್ರಿಕೂಟೇಶ್ವರ ದೇವಸ್ಥಾನದ ಉಳಿವು,ಜೀರ್ಣೋದ್ಧಾರಕ್ಕೆ ಹೋರಾಟ ಮಾಡಿದ ಕುಮಾರಸ್ವಾಮಿ ಹಿರೇಮಠ, ಮಾಧ್ಯಮ ಕ್ಷೇತ್ರದಲ್ಲಿ
ಒಲೆಯ ಮೇಲೆ ರೊಟ್ಟಿ ಬೇಯಿಸಿ ಪ್ರತಿಭಟನೆ: ಪ್ರಧಾನಿ ಮೋದಿ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ
ಮುದ್ದೇಬಿಹಾಳ : ದೇಶವನ್ನು ಆಳುತ್ತಿರುವ ಪ್ರಧಾನ ನರೇಂದ್ರ ಮೋದಿ ಅವರಿಗೆ ಬಡವರು,ಮಧ್ಯಮ ವರ್ಗದವರದ್ದು ಆಲೋಚನೆ ಇಲ್ಲ.ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಇದುವರೆಗೂ ಏನೂ ಮಾಡಿಲ್ಲ.ಸಿಲಿಂಡರ್ ದೊರೆಯದಂತಹ ಪರಿಸ್ಥಿತಿ ತಂದಿಟ್ಟಿದ್ದು ತುರ್ತು ಸ್ಥಿತಿ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಸಚೀನಗೌಡ ಪಾಟೀಲ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎನ್.ಎಸ್.ಯೂ.ಐ., ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ನಿAದ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಕೇಂದ್ರ







