
ಮುದ್ದೇಬಿಹಾಳ : ಮಕ್ಕಳಿಗೆ ಅನುಕಂಪ, ದಯೆ ಹಾಗೂ ಸಮಾಜದ ಭಾಗ ತಾನು ಎಂಬುದನ್ನು ಕಲಿಸಿಕೊಡಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಹೇಳಿದರು.

ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿ ದೇವಿ ಜಾತ್ರಾ ಮಹೋತ್ಸವ ಶನಿವಾರ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಕಣ್ಣೀರು ಒರೆಸುವ ಕಾರ್ಯ ತಾವು ಹೆತ್ತ ಮಕ್ಕಳು ಮಾಡಬೇಕು ಎಂಬುದು ತಾಯಂದಿರ ಗುರಿಯಾಗಿರಬೇಕು ಎಂದರು.
ಹುಲಕೋಟಿ ಕೆ. ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಅಪ್ಪಣ್ಣ ಹಂಜಿ ಉಪನ್ಯಾಸ ನೀಡಿ, ಪದ್ಮಾವತಿ ಹಾಗೂ ಪಾರ್ಶ್ವನಾಥ ತೀರ್ಥಂಕರ ಮೂರ್ತಿಗಳ ಬಗ್ಗೆ ವಿವರಿಸಿದರು.
ಅಧ್ಯಕ್ಷತೆಯನ್ನು ಪದ್ಮಾವತಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಅಭಿನಂದನ ಗೋಗಿ ವಹಿಸಿದ್ದರು. ಹಿರಿಯ ಸಾಹಿತಿ ಅಶೋಕ ಮಣಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಗೊಮ್ಮಟೇಶ್ವರ ಸಗರಿ, ಮಾಣಿಕಚಂದ ದಂಡಾವತಿ ಇದ್ದರು. ವಿವಿಧ ಕ್ಷೇತ್ರದ ಸಾಧಕರಾದ ಅಶೋಕ ಮಣಿ, ಮಹಾವೀರ ಸಗರಿ, ಅನಂತರಾಜ ಉಪಾಧ್ಯೆ, ಅನಿಲಕುಮಾರ ಇರಾಜ, ಕಲಗೌಡ ಪಾಟೀಲ, ದಿಲೀಪಕುಮಾರ ಕಿವಡೆ, ಮಹಾವೀರ ರಾಸನೆ, ಜಂಭುಕುಮಾರ ಬಾಗೇವಾಡಿ, ಶೈಲಾ ಗೊಂಗಡಿ, ನಿಖಿತಾ ಶೆಟ್ಟಿ, ಸುನೀಲ ಹಿಪ್ಪರಗಿ,ರವಿ ನಂದೆಪ್ಪನವರ, ಗುಲಾಮಮೊಹ್ಮದ ದಫೇದಾರ ಅವರನ್ನು ಸನ್ಮಾನಿಸಲಾಯಿತು.