ಮುದ್ದೇಬಿಹಾಳ : ಪಟ್ಟಣದ ಎಮ್.ಜಿ.ಎಮ್.ಕೆ ಆಂಗ್ಲ ಮಾಧ್ಯಮ ಶಾಲೆಯ ಅಭಿರಾಮ ಹೆಗಡೆ ವಿಜಯಪುರದ ಕಗ್ಗೋಡಿನ ಪ್ರಕೃತಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಧಾರ್ಮಿಕ ಪಠಣ (ಸಂಸ್ಕೃತ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿಕೊಂಡಿದ್ದಾನೆ.
ವಿದ್ಯಾರ್ಥಿಯ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಎಮ್.ಎಮ್.ಕೋರಿ, ಪದವಿ ಪ್ರಾಚಾರ್ಯ ಎಸ್.ಕೆ.ಹರನಾಳ, ಮುಖ್ಯ ಗುರುಮಾತೆ ವೀಣಾ ಹಿರೇಮಠ, ಆಡಳಿತಾಧಿಕಾರಿಗಳಾದ ಎಸ್.ಎಸ್.ಆಳವಿ, ರಾಜೇಶ್ವರಿ ಬಿರಾದಾರ, ಶೋಭಾ ಬಲಕುಂದಿ, ಶಿಕ್ಷಕರಾದ ಶ್ರೀವಿಜಯ ಹಳ್ಳೂರ, ಕೀರ್ತಿ ತಳಗೇರಿ ಸೇರಿದಂತೆ ಸರ್ವ ಸಿಬ್ಬಂದಿ ಅಭಿನಂದಿಸಿರುತ್ತಾರೆ.







