ಮುದ್ದೇಬಿಹಾಳ : ಪಂಪಸೆಟ್ ಹೊಂದಿರುವ ರೈತರು 2018ರಲ್ಲಿ 50 ರೂ.ತುಂಬಿಸಿಕೊoಡು ಆರ್.ಆರ್ ನಂಬರ್ ಸಹಿತ ವಿದ್ಯುತ್‌ನ್ನು ಪಂಪಸೆಟ್‌ಗಳಿಗೆ ಒದಗಿಸಲಾಗಿತ್ತು.ಈಗ ಏಕಾಏಕಿ ಡೆಪಾಸಿಟ್ ಹಣ ತುಂಬದಿದ್ದರೆ ಪಂಪಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸುವ ಕಾರ್ಯತಂತ್ರ ಹೆಸ್ಕಾಂನಿoದ ನಡೆದಿದ್ದು ಇದು ಮುಂದುವರೆದರೆ ರೈತ ಸಂಘಟನೆಗಳಿoದ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ರೈತ ಮುಖಂಡರು ನೀಡಿದ್ದಾರೆ.
ಪಟ್ಟಣದ ಹೆಸ್ಕಾಂ ಕಚೇರಿಗೆ ಆಗಮಿಸಿದ್ದ ಹಂಡರಗಲ್,ಯರಝರಿ,ಹಿರೇಮುರಾಳ ಮೊದಲಾದ ಗ್ರಾಮಗಳ ರೈತರು ಹೆಸ್ಕಾಂ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಪಂಪಸೆಟ್‌ಗೆ 18,000 ರೂ. ಡಿಪಾಸೆಟ್ ತುಂಬಲು ಹಾಗೂ ಆರ್.ಆರ್.ನಂಬರ್ ಇಲ್ಲದವರಿಗೆ ಪ್ರತಿ ಪಂಪಸೆಟ್‌ಗೆ 36,000 ರೂ.ಡಿಪಾಸಿಟ್ ತುಂಬಲು ರೈತರಿಗೆ ಆದೇಶ ಮಾಡಿದ್ದಾರೆ.ಅಲ್ಲದೇ ಅವಧಿ ಎರಡು ದಿನಗಳ ಕಾಲಾವಕಾಶ ನೀಡಿದ್ದಾರೆ.ಒಂದು ಕಡೆ ಜನರು ಕೇಳದೇ ಇದ್ದರೂ ವಿದ್ಯುತ್ ಉಚಿತವಾಗಿ ಕೊಡುತ್ತಿರುವ ಸರ್ಕಾರ ಇನ್ನೊಂದೆಡೆ ರೈತರು ಬೆಳೆಯುತ್ತಿರುವ ಬೆಳೆಗಳಿಗೆ ವಿದ್ಯುತ್ ಸ್ಥಗಿತಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಿದೆ ಎಂದು ರೈತ ಮುಖಂಡ ಸಂಗಣ್ಣ ಬಾಗೇವಾಡಿ ಹೇಳಿದರು.
2018ರಲ್ಲಿ 50 ರೂ.ಗಳಲ್ಲಿ ಆರ್.ಆರ್ ನಂಬರ್ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿತ್ತು.ಆದರೆ ಈಗ ಆದೇಶ ಮಾರ್ಪಡಿಸಿ ಡಿಪಾಸಿಟ್ ಹಣವನ್ನು ತುಂಬುವoತೆ ಅಧಿಕಾರಿಗಳ ಮೂಲಕ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದರು.
ಈಗ ಹೊಲದಲ್ಲಿ ಬೆಳೆಗಳ ಕಟಾವಿನ ಸಮಯವಾಗಿದ್ದು ವಿದ್ಯುತ್ ಕಡಿತಗೊಳಿಸಿದರೆ ರೈತರಿಗೆ ತೊಂದರೆಯಾಗುತ್ತದೆ.ಮೊದಲಿನ 2018ರಲ್ಲಿ ಮಾಡಿರುವ ಆದೇಶವನ್ನೆ ಮುಂದುವರೆಸಬೇಕು.ಇಲ್ಲದಿದ್ದರೆ ರೈತರು ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹೆಸ್ಕಾಂ ಎಇಇ ಆರ್.ಎನ್.ಹಾದಿಮನಿ ಮಾತನಾಡಿ, ಸದ್ಯಕ್ಕೆ ಯಾವುದೇ ರೈತರ ಟಿಸಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಆದೇಶ ಮಾಡಿಲ್ಲ.ಒಂದು ವಾರ ಕಾಲಾವಕಾಶ ಇದ್ದು ಪಂಪಸೆಟ್ ಸಾಮರ್ಥ್ಯದ ಆಧಾರದ ಮೇಲೆ ಡೆಪಾಸಿಟ್ ಕಟ್ಟಬೇಕಿರುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.
ಮನವಿ ಸಲ್ಲಿಸುವ ಸಮಯದಲ್ಲಿ ರೈತ ಮುಖಂಡರಾದ ವಾಯ್.ಎಲ್.ಬಿರಾದಾರ, ಸಂಗಪ್ಪ ಹಂಡರಗಲ್, ಅಯ್ಯಪ್ಪ ಬಿದರಕುಂದಿ, ಬಸನಗೌಡ ಪಾಟೀಲ ಮೊದಲಾದವರು ಇದ್ದರು.






