Door-to-door police visit and legal awareness program

ಮನೆಮನೆಗೆ ಪೋಲಿಸ್ ಭೇಟಿ ನೀಡಿ ಕಾನೂನು ಅರಿವು ಕಾರ್ಯಕ್ರಮ

ಮನೆಮನೆಗೆ ಪೋಲಿಸ್ ಭೇಟಿ ನೀಡಿ ಕಾನೂನು ಅರಿವು ಕಾರ್ಯಕ್ರಮ

ನಾಲತವಾಡ: ಸ್ಥಳೀಯ ಹೊರ ಪೋಲಿಸ್ ಠಾಣೆ ಆರಕ್ಷಕ ಸಿಬ್ಬಂದಿ ಘಾಳಪೂಜಿ, ಬಿಜ್ಜೂರ, ಖಾನೀಕೇರಿ, ಲೊಟಗೇರಿ ಸೇರಿದಂತೆ ವಿವಿಧ ಹಳ್ಳಿಗಳ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಕಾನೂನುಗಳ ಮಾಹಿತಿ ನೀಡಿದರು.

ಎಎಸ್ಐ ಸಿ.ಜಿ.ಕುಲಕರ್ಣಿ ಮಾತನಾಡಿ, ‘ನಿಮ್ಮ ಮನೆಯ ನೆರೆ ಹೊರೆಯಲ್ಲಿಕಾನೂನು ಬಾಹಿರ ಚಟುವಟಿಕೆ, ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ, ಬಾಲ್ಯ ವಿವಾಹ ಜರುಗುತ್ತಿದ್ದರೆ, ಕಷ್ಟಗಳು ಬಂದರೆ, ಜಗಳವಾದರೆ ತಕ್ಷಣವೇ ತುರ್ತು ಕರೆಗಳಿಗೆ ಸಂಪರ್ಕಿಸಿ ಪೊಲೀಸರಿಗೆ ತಿಳಿಸಿದರೆ, ತಕ್ಷಣವೇ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಹಾರ ಕಲ್ಪಿಸುವರು,’ ಎಂದು ಹೇಳಿದರು.

ತುರ್ತು ಕರೆ ಸಂಖ್ಯೆ ಮಾಹಿತಿ: ‘ತುರ್ತು ಸಂದರ್ಭದಲ್ಲಿ112, ಮಕ್ಕಳ ಸಹಾಯಕ್ಕೆ 1098, ಸೈಬರ್ ಅಪರಾಧಕ್ಕೆ 1930, ಮಹಿಳಾ ಸಹಾಯವಾಣಿ 1091/181, ಮಾದಕ ದ್ಯವ್ಯ ತಡೆಗೆ 1908 ಹಾಗೂ ಇತರ ತೊಂದರೆಗಳಿಗೆ ಸ್ಥಳೀಯ ಠಾಣೆಯ ನಂಬರ್ ಗೆ ಕರೆ ಮಾಡಿ,’’ ಎಂದು ಸಲಹೆ ನೀಡಿದರು.

ಕರಪತ್ರ ವಿತರಣೆ: ನಂತರ ಮನೆ ಮನೆಗೆ ಭೇಟಿ ನೀಡಿದ ಪೋಲಿಸ್ ಸಿಬ್ಬಂದಿ ಕಾನೂನು ಅರಿವು ಮತ್ತು ತುರ್ತು ಕರೆಯ ಮಾಹಿತಿ ಕರಪತ್ರಗಳನ್ನು ಬಸವರಾಜ ಹಿಪ್ಪರಗಿ, ಬಸವರಾಜ ಚಿಂಚೋಳಿ ವಿತರಿಸಿದರು.

ವರದಿಗಾರ : ಶಿವು ರಾಠೋಡ

Latest News

ಮಹಿಳಾ ಆಯೋಗದ ಅಧ್ಯಕ್ಷೆ ಹೆಸರು ದುರುಪಯೋಗ ಮಾಡಿಲ್ಲ;                                                                                          ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮಹಿಳಾ ಆಯೋಗದ ಅಧ್ಯಕ್ಷೆ ಹೆಸರು ದುರುಪಯೋಗ ಮಾಡಿಲ್ಲ; ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ‘ಡಿ’ ದರ್ಜೆ ಸಿಬ್ಬಂದಿ ಕುಸುಮಾ

ಪುನೀತ ಹಿಪ್ಪರಗಿ ಅಧ್ಯಕ್ಷರಾಗಿ ಆಯ್ಕೆ:                          ಮುದ್ದೇಬಿಹಾಳ : ಕಾರ್ಗಿಲ್ ಸ್ಮಾರಕ ಸಮಿತಿಗೆ ನೂತನ ಪದಾಧಿಕಾರಿಗಳು

ಪುನೀತ ಹಿಪ್ಪರಗಿ ಅಧ್ಯಕ್ಷರಾಗಿ ಆಯ್ಕೆ: ಮುದ್ದೇಬಿಹಾಳ : ಕಾರ್ಗಿಲ್ ಸ್ಮಾರಕ ಸಮಿತಿಗೆ ನೂತನ ಪದಾಧಿಕಾರಿಗಳು

ಮುದ್ದೇಬಿಹಾಳ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಕಾರ್ಗಿಲ್ ವೀರಯೋಧರ ಸ್ಮಾರಕ

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೆಸರು ಹೇಳಿ ಬ್ಲಾಕ್‌ಮೇಲ್ ಆರೋಪ

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೆಸರು ಹೇಳಿ ಬ್ಲಾಕ್‌ಮೇಲ್ ಆರೋಪ

ಮುದ್ದೇಬಿಹಾಳ : ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ಹೆಸರು ಹೇಳಿಕೊಂಡು ಸ್ಥಳೀಯ

ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ವಂಚನೆ-ಆರೋಪ

ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ವಂಚನೆ-ಆರೋಪ

ತಾಳಿಕೋಟಿ : ತಾಲ್ಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರಿಗೆ ಪ್ರಧಾನ ಮಂತ್ರಿ

ಮುದ್ದೇಬಿಹಾಳ,ನಾಲತವಾಡ ಸರಕಾರಿ ಆಸ್ಪತ್ರೆಗಳ ಆಡಳಿತ ವೈದ್ಯರ ವರ್ಗಾವಣೆ

ಮುದ್ದೇಬಿಹಾಳ,ನಾಲತವಾಡ ಸರಕಾರಿ ಆಸ್ಪತ್ರೆಗಳ ಆಡಳಿತ ವೈದ್ಯರ ವರ್ಗಾವಣೆ

ಮುದ್ದೇಬಿಹಾಳ : ಶಾಸಕ ಸಿ.ಎಸ್.ನಾಡಗೌಡರ ಶಿಫಾರಸ್ಸಿನ ಮೇರೆಗೆ ಮುದ್ದೇಬಿಹಾಳ ಹಾಗೂ ನಾಲತವಾಡ ಸಾರ್ವಜನಿಕ ಆಸ್ಪತ್ರೆಗಳ ಆಡಳಿತ ವೈದ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ. ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾಗಿ ಪ್ರಭಾರ ಅಧಿಕಾರದಲ್ಲಿದ್ದ ಚಿಕ್ಕ ಮಕ್ಕಳ ತಜ್ಞ ವೈದ್ಯ ಡಾ.ಪರಶುರಾಮ ವಡ್ಡರ ಅವರನ್ನು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಡಳಿತ ಪ್ರಭಾರ ಹುದ್ದೆಗೆ ವರ್ಗಾಯಿಸಿದ್ದು ಅಲ್ಲಿ ಪ್ರಭಾರ ಹುದ್ದೆಯಲ್ಲಿದ್ದ ಪ್ರಸೂತಿ ತಜ್ಞ

ಕಂದಗನೂರಿನಲ್ಲಿ ರೈತನ ಮೇಲೆ ಹುಚ್ಚನಾಯಿ ದಾಳಿ

ಕಂದಗನೂರಿನಲ್ಲಿ ರೈತನ ಮೇಲೆ ಹುಚ್ಚನಾಯಿ ದಾಳಿ

ಮುದ್ದೇಬಿಹಾಳ : ಹುಚ್ಚು ನಾಯಿಯೊಂದು ಮನೆಯ ಮುಂದೆ ಮಲಗಿದ್ದ ರೈತನ ಮೇಲೆ ಭೀಕರವಾಗಿ ದಾಳಿ ಮಾಡಿ ಕಚ್ಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಕಂದಗನೂರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಕಂದಗನೂರ ಗ್ರಾಮದ ರೈತ ಮಕ್ತುಮಸಾಬ ರಹಿಮಾನಸಾಬ ಮೂಕಿಹಾಳ(೬೮) ಹುಚ್ಚು ನಾಯಿ ಕಡಿತದಿಂದ ಗಾಯಗೊಂಡಿರುವ ವ್ಯಕ್ತಿ.ಮನೆ ಮುಂದೆ ಮಲಗಿದ್ದಾಗ ಎಲ್ಲಿಂದಲೋ ಬಂದಿದ್ದ ಹುಚ್ಚು ನಾಯಿ ದಾಳಿ ಮಾಡಿದೆ.ಮನಬಂದAತೆ ರೈತನ ಹೊಟ್ಟೆ ಪಕ್ಕದಲ್ಲಿ,ಕೈಗೆ ಭೀಕರವಾಗಿ ಕಚ್ಚಿದೆ.ಇದರ ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ಮಕ್ತುಮಸಾಬನನ್ನು ಮುದ್ದೇಬಿಹಾಳ ಸರಕಾರಿ