ಮುದ್ದೇಬಿಹಾಳ : ತಾಲ್ಲೂಕು ಛಾಯಾಚಿತ್ರ ಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಆಯ್ಕೆ ಮಾಡಲಾಯಿತು.
ಸಂಘದ ಸಲಹ ಸಮೀತಿ ಸದಸ್ಯರಾದ ಹಿರಿಯ ಛಾಯಾಗ್ರಾಹಕರಾದ ಬುಡ್ಡಾ ಕುಂಟೋಜಿ, ಬಸವರಾಜ ಅಂಗಡಗೇರಿ, ಗುಲಾಮಮೊಹ್ಮದ ದಫೇದಾರ, ಮಹೇಶ ಕೆಂಧೂಳಿ, ಶೇಖರ ಪತ್ತಾರ, ಮುತ್ತು ಮಾದಿನಾಳ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಂಘದ ನೂತನ ಅಧ್ಯಕ್ಷರಾಗಿ ರವಿ ತಾಳಿಕೋಟಿ, ಉಪಾಧ್ಯಕ್ಷರಾಗಿ ಪರಶುರಾಮ ನಾಗರಬೆಟ್ಟ, ಪ್ರಧಾನ ಕಾರ್ಯದರ್ಶಿಯಾಗಿ ವಿವೇಕ ದೋಟಿಹಾಳ, ಸಹ ಕಾರ್ಯದರ್ಶಿಯಾಗಿ ಶಿವು ತಾಳಿಕೋಟಿ, ಖಜಾಂಚಿಯಾಗಿ ಲಕ್ಕಪ್ಪ ತುರುಡಗಿ, ಸಂಘಟನಾ ಕಾರ್ಯದರ್ಶಿಯಾಗಿ ಅಯ್ಯಪ್ಪ ತಂಗಡಗಿ, ಕಾರ್ಯಕಾರಿ ಸಮೀತಿ ಸದಸ್ಯರಾಗಿ ಹೊಳೆಪ್ಪ ಕಣಕಾಲ, ಯಲ್ಲಪ್ಪ ಮ್ಯಾಗೇರಿ, ಸೋಮು ಸಜ್ಜನ(ಬಿದರಕುಂದಿ), ಮಲ್ಲು ಕಡಿ, ಮುನ್ನಾ ಸಾತಕೇಡ, ಸೋಮು ಸಜ್ಜನ, ಜಗದೀಶ ಹಡಪದ, ಬಸವರಾಜ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಂಘದ ನೂತನ ಅಧ್ಯಕ್ಷ ರವಿ ತಾಳಿಕೋಟಿ, ನಿಂತ ನೀರಾಗಿದ್ದ ಛಾಯಾಚಿತ್ರಗ್ರಾಹಕರ ಸಂಘದ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು ಖುಷಿ ತಂದಿದೆ. ಕಟ್ಟ ಕಡೆಯ ಫೋಟೋಗ್ರಾಫರ್ ಕೂಡಾ ಆರ್ಥಿಕವಾಗಿ ಸಬಲರಾಗಬೇಕು ಎಂಬ ಗುರಿಯನ್ನಿಟ್ಟುಕೊಂಡು ಸರ್ವ ಸದಸ್ಯರ ಸಹಕಾರದಿಂದ ಸಂಘವನ್ನು ಮುನ್ನಡೆಸುವುದಾಗಿ ತಿಳಿಸಿದರು.
ಉಪಾಧ್ಯಕ್ಷ ಪರಶುರಾಮ ನಾಗರಬೆಟ್ಟ ಮಾತನಾಡಿ, ಸಂಘದ ಎಲ್ಲ ಸದಸ್ಯರ ಸಹಕಾರದೊಂದಿಗೆ ರಾಜ್ಯ ಸಂಘದವರು ತಿರುಗಿ ನೋಡುವಂತೆ ಮತ್ತೊಮ್ಮೆ ಸಂಘಟನೆಯನ್ನು ಬಲಪಡಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಬಿಎಲ್‌ಡಿ ಸೌಹಾರ್ದ ಸಹಕಾರಿ ಬ್ಯಾಂಕಿನ ಸಲಹಾ ಸಮಿತಿ ನಿರ್ದೇಶಕರಾಗಿ ನೇಮಕಗೊಂಡ ಹಿರಿಯ ಛಾಯಾಗ್ರಾಹಕ ಬುಡ್ಡಾ ಕುಂಟೋಜಿ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಮುದ್ದೇಬಿಹಾಳ ತಾಲ್ಲೂಕು ಛಾಯಾಚಿತ್ರ ಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಇದ್ದರು.