ಮುದ್ದೇಬಿಹಾಳ : ಕಾನಿಪ ಸಂಘದ ತಾಲ್ಲೂಕು ಘಟಕದ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗೆ ಬುಧವಾರ ಚುನಾವಣೆ ನಡೆಸಲಾಗಿದ್ದು ವಡವಡಗಿ-ಬನ್ನೆಟ್ಟಿ ಪೆನಲ್ ಮಧ್ಯೆ ಏರ್ಪಟ್ಟ ಸ್ಪರ್ಧೆಯಲ್ಲಿ ವಡವಡಗಿ ಪೆನಲ್ ಪದಾಧಿಕಾರಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಡಿ.ಬಿ.ವಡವಡಗಿ ಹಾಗೂ ಮಕ್ಬೂಲ್ ಬನ್ನೆಟ್ಟಿ ನಾಮಪತ್ರ ಸಲ್ಲಿಸಿದ್ದು ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಅವರು 19 ಮತ ಪಡೆದು ಆಯ್ಕೆಯಾಗಿ ಪ್ರತಿಸ್ಪರ್ಧಿ ಮಕ್ಬುಲ್ ಬನ್ನೆಟ್ಟಿ ಅವರನ್ನು 10 ಮತಗಳ ಅಂತರದಿoದ ಪರಾಭವಗೊಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸವರಾಜ ಹುಲಗಣ್ಣಿ 19, ಜಿ.ಎನ್.ಬಿರಗೊಂಡ ಅವರು 14 ಮತ ಪಡೆದರೆ ಅವರ ಪ್ರತಿಸ್ಪರ್ಧಿಗಳಾಗಿದ್ದ ರವೀಂದ್ರ ನಂದೆಪ್ಪನವರ್, ಬಂದೇನವಾಜ್ ಕುಮಸಿ ತಲಾ 10 ಮತ ಪಡೆದು ಸೋಲನುಭವಿಸಿದರು. ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಾಡ್ಲೇಮಶ್ಯಾಕ ಶೇಖ್ ನದಾಫ 19, ಕಾಶಿನಾಥ ಬಿರಾದಾರ 21 ಮತ ಪಡೆದರೆ ಅವರ ಪ್ರತಿಸ್ಪರ್ಧಿ ಗುರುನಾಥ ಕತ್ತಿ 11 ಮತ ಪಡೆದು ಸೋಲನುಭವಿಸಿದರು. ಎಚ್.ಆರ್.ಬಾಗವಾನ ಪ್ರಧಾನ ಕಾರ್ಯದರ್ಶಿಗಳಾಗಿ ಅವಿರೋಧವಾಗಿ ಆಯ್ಕೆಯಾದರು.
ಖಜಾಂಚಿ ಸ್ಥಾನಕ್ಕೆ ವಡವಡಗಿ ಪೆನಲನ ಅಮೀನಸಾ ಮುಲ್ಲಾ, ಬನ್ನೆಟ್ಟಿ ಪೆನಲನ ಪುಂಡಲೀಕ ಮುರಾಳ ನಾಮಪತ್ರ ಸಲ್ಲಿಸಿದ್ದರು. ಮುರಾಳ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಮುಲ್ಲಾ ಅವಿರೋಧವಾಗಿ ಆಯ್ಕೆಗೊಂಡರು.
ಒಟ್ಟು 35 ಸದಸ್ಯರ ಪೈಕಿ 28 ಸದಸ್ಯರು ಮತದಾನ ಮಾಡಿದರು. ಸಂಘದ ರಾಜ್ಯ ಕಾರ್ಯಕಾರಿಣಿ ಹಾಗೂ ತಾಲೂಕು ಘಟಕಗಳ ಚುನಾವಣಾ ಉಸ್ತುವಾರಿ ಪ್ರಕಾಶ ಬೆಣ್ಣೂರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಲ್ಲಾ ಕಾರ್ಯದರ್ಶಿ ಅವಿನಾಶ ಬಿದರಿ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ಪತ್ರಕರ್ತರಾದ ಅಲ್ಲಾಭಕ್ಷ ನಿಡಗುಂದಿ, ನೂರೇನಬಿ ನದಾಫ, ಮುತ್ತು ವಡವಡಗಿ, ಸಿದ್ದು ಚಲವಾದಿ, ಹಣಮಂತ ಬಿರಗೊಂಡ, ರಾಜಶೇಖರ ಸಜ್ಜನ, ಈಶ್ವರ ಈಳಗೇರ, ಬಸವರಾಜ ಕುಂಬಾರ, , ಬಂದೇನವಾಜ ಕುಮಸಿ, ರವೀಂದ್ರ ನಂದೆಪ್ಪನವರ್, ನೂರಹುಸೇನ ನದಾಫ, ರಿಯಾಜ್ ಮುಲ್ಲಾ, ಮಹೆಬೂಬ ಹಳ್ಳೂರ, ಸಾಗರ ಉಕ್ಕಲಿ, ಈರಯ್ಯ ಹಿರೇಮಠ, ಬಸನಗೌಡ ಪಾಟೀಲ ಸರೂರ, ಕೃಷ್ಣಾ ಕುಂಬಾರ, ಎಚ್.ಬಿ.ಟಕ್ಕಳಕಿ ಇನ್ನಿತರರು ಪಾಲ್ಗೊಂಡಿದ್ದರು.



