ಮುದ್ದೇಬಿಹಾಳ : ರಾಜ್ಯ ಸರ್ಕಾರಿ ನೌಕರರ ಸಂಘದ ಒಂದು ನಿರ್ದೇಶಕ ಸ್ಥಾನಕ್ಕೆ ಸೋಮವಾರ ಮತದಾನ ಕಾರ್ಯ ನಡೆದಿದ್ದು ಶಿಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದೆ.
ಶಿಕ್ಷಣ ಇಲಾಖೆಯ ಭಾಗ ಸಂಖ್ಯೆ 2 ರಲ್ಲಿ ಕಣದಲ್ಲಿ ಉಳಿದಿರುವ ಶಂಕರಗೌಡ ಬಿರಾದಾರ, ಬಂದಗಿಪಟೇಲ್ ಗಣಿಯಾರ ಮಧ್ಯೆ ಸ್ಪರ್ಧೆ ಇದೆ.
ಚುನಾವಣಾಧಿಕಾರಿ ಎಸ್.ಆರ್.ಕಟ್ಟಿಮನಿ , ಸಹಾಯಕ ಚುನಾವಣಾಧಿಕಾರಿ ಬಿ.ಎಚ್.ಹೂಗಾರ , ಸಹಾಯಕರಾಗಿ ವೆಂಕಟೇಶ ಅಂಬಿಗೇರ ಕಾರ್ಯನಿರ್ವಹಿಸುತ್ತಿದ್ದು ಬೆಳಗ್ಗೆ 9 ರಿಂದ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮದ್ಯಾಹ್ನ 12.30 ರವರೆಗಿನ ಮಾಹಿತಿಯಂತೆ 160 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಅಭ್ಯರ್ಥಿಗಳು ಪ್ರತ್ಯೇಕ ವಾಹನಗಳಲ್ಲಿ ಶಿಕ್ಷಕರನ್ನು ಕರೆತರುತ್ತಿರುವ ದೃಶ್ಯಗಳು ಕಂಡು ಬಂದವು. ಎ.ಎಸ್.ಐ ಬಿ.ಡಿ.ಪವಾರ ಅವರ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುವ ರೀತಿಯಲ್ಲಿ ಬಸವೇಶ್ವರ ವೃತ್ತಕ್ಕೆ ಪ್ರಚಾರದ ಬ್ಯಾನರ್ ಹಚ್ಚಿದ್ದು ಕಂಡು ಬಂದಿತು.