ಮುದ್ದೇಬಿಹಾಳ : ಪಟ್ಟಣದ ವಿಜಯಪುರ ರಸ್ತೆಯ ಸಾಯಿ ಬಡಾವಣೆಯಲ್ಲಿ ಶುಕ್ರವಾರ ಮಧ್ಯರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಮನೆ ಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಅಪಾರ ಹಾನಿ ಸಂಭವಿಸಿದ ಘಟನೆ ನಡೆದಿದೆ.
ಸಾಯಿ ಬಡಾವಣೆ ನಿವಾಸಿ ಮಹಿಬೂಬ ಕುಮಸಿ ಅವರ ಮನೆಯಲ್ಲಿದ್ದ ಫ್ರಿಜ್, ಫ್ಯಾನ್ ಸೇರಿದಂತೆ ಮನೆ ಬಳಕೆ ವಸ್ತುಗಳು ಹಾನಿಯಾಗಿವೆ ಎಂದು ತಿಳಿದು ಬಂದಿದೆ.ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಠಾಣಾಧಿಕಾರಿ ನಾಗೇಶ ರಾಠೋಡ ನೇತೃತ್ವದಲ್ಲಿ ಬೆಂಕಿ ನಂದಿಸಲಾಯಿತು.





