ಬಬಲೇಶ್ವರ: ದೇಶವನ್ನು ಸುವ್ಯವಸ್ಥಿತವಾಗಿ ಮುಂದೆ ಕೊಂಡ್ಯೊಯುವ ಉದ್ದೇಶದಿಂದ ಸ್ವತಂತ್ರ್ಯದ ನಂತರ ಸಂವಿಧಾನ ರಚಿಸಲಾಯಿತು ಎಂದು ದೇವಾಪುರದ ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ (SMES) ಅಧ್ಯಕ್ಷ ಎಂ.ಆರ್. ನಾಯಕರ ಹೇಳಿದರು.
ತಾಲೂಕಿನ ಸಮೀಪದ ದೇವಾಪುರದ SMES ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಂವಿಧಾನವನ್ನು 1949ರ ನವೆಂಬರ್ 26 ಅಳವಡಿಸಿಕೊಂಡು, 1950 ಜನೇವರಿ 26ರಂದು ಜಾರಿಗೆ ತರಲಾಯಿತು. ಇದರ ಸವಿನೆನಪಿಗಾಗಿ ಪ್ರತೀ ವರ್ಷ ಜನೇವರಿ 26ರಂದು ಗಣರಾಜ್ಯೋತ್ಸವ ಆರಿಸಲಾಗುತ್ತಿದೆ ಎಂದರು.
ಪ್ರತಿಯೊಬ್ಬರೂ ಸಂವಿಧಾನಕ್ಕೆ ಗೌರವ ನೀಡಿ, ಪಾಲಿಸಿದಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಕಾನೂನಿನ ಅರಿವು ಹೊಂದುವುದು ಮುಖ್ಯ ಎಂದು SMES ಅಧ್ಯಕ್ಷ ಎಂ.ಆರ್. ನಾಯಕರ ಅಭಿಪ್ರಾಯಪಟ್ಟರು.
SMES ಕಾರ್ಯದರ್ಶಿ ಬಸುರಾಜ ಯಂಕಪ್ಪ ಸಿದ್ದರೆಡ್ಡಿ (ಪಪ್ಪು ದೇಸಾಯಿ) ಮಾತನಾಡಿ, ಕಾನೂನಿನ ಅರಿವು ಹೊಂದಿದಾಗ ಮಾತ್ರ ಪೊಲೀಸ್ ಠಾಣೆ, ಕೋರ್ಟ್ ನಲ್ಲಿ ನ್ಯಾಯ ಪಡೆಯುವುದು ಸುಲಭ ಸಾಧ್ಯ ಎಂದು ಹೇಳಿದರು.
SMES ಕಾರ್ಯಾಧ್ಯಕ್ಷ ಸಿದ್ದಪ್ಪ ಎಂ. ನಾಯಿಕರ (ವಿವೇಕ ನಾಯಿಕರ) ಮಾತನಾಡಿ, ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಸಂವಿಧಾನದ ಅರಿವು ಹೊಂದಲು ಸಾಧ್ಯ. ಆದ್ದರಿಂದ ಎಲ್ಲರೂ ಗುಣಮಟ್ಟದ ಶಿಕ್ಷಣವನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
ಧ್ವಜಾರೋಹಣದ ನಂತರ ವಿದ್ಯಾರ್ಥಿಗಳು ತಾಯಂದಿರ ಪಾದಪೂಜೆ ನೆರವೇರಿಸಿದರು. ತದನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ವೇಳೆ SMES ಗೌರವಾಧ್ಯಕ್ಷರಾದ ಲಕ್ಷ್ಮವ್ವ ಆರ್. ನಾಯಕರ, ಸದಸ್ಯರಾದ ವಿಠ್ಠಲ್ ಆರ್. ನಾಯಕರ, ಲಕ್ಷ್ಮಣ ಖಜ್ಜಿಡೋಣಿ, ಕಮಲಾ ವಿ. ನಾಯಕರ, ಕುಮಾರ ವಿ. ನಾಯಕರ, ಸಲಹಾ ಸಮಿತಿ ಸದಸ್ಯರಾದ ರಮೇಶ ಬಳೂತಿ, ಮಲ್ಲಪ್ಪ ಹಂಚಿನಾಳ, SMES ಆಡಳಿತಾಧಿಕಾರಿಗಳಾದ ಡಿ.ಸಿ. ಗುಡಿಹಿಂದಿನ, ಆನಂದ ಹುಣಶಾಳ, ಶಿಕ್ಷಕಿಯರಾದ ಪ್ರೇಮಾ, ರಾಧಿಕಾ, ಸಿಬ್ಬಂದಿ ಎಸ್.ಜಿ. ಮೇಟಿ, ಎಸ್.ಎಸ್ ಮೇಟಿ ಮತ್ತಿತರರು ಇದ್ದರು.



