ಫಾಸ್ಟ್ ,ಜಂಕ್ ಫುಡ್ ಆರೋಗ್ಯಕ್ಕೆ ಮಾರಕ-ವಿ.ಜಿ.ರಾಮಚಂದ್ರಯ್ಯ

ಫಾಸ್ಟ್ ,ಜಂಕ್ ಫುಡ್ ಆರೋಗ್ಯಕ್ಕೆ ಮಾರಕ-ವಿ.ಜಿ.ರಾಮಚಂದ್ರಯ್ಯ

ಮುದ್ದೇಬಿಹಾಳ : ಫಾಸ್ಟ್ ಫುಡ್,ಜಂಕ್ ಫುಡ್‌ನಿಂದ ದೇಹದ ಮೇಲಿನ ದುಷ್ಪರಿಣಾಮ ಬೀರುತ್ತದೆ.ಅಂತಹ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಇರಬೇಕು ಎಂದು ವಿಬಿಸಿ ಹೈಸ್ಕೂಲ್‌ನ ಮುಖ್ಯಗುರು ವಿ.ಜಿ.ರಾಮಚಂದ್ರಯ್ಯ ಹೇಳಿದರು.
ಪಟ್ಟಣದ ಕೆಬಿಎಂಪಿಎಸ್ ಶಾಲೆಯಲ್ಲಿ ಶುಕ್ರವಾರ ರಾಷ್ಟಿçÃಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ದೈನಂದಿನ ಬದುಕಿನಲ್ಲಿ ಸೇವಿಸುವ ಆಹಾರದಲ್ಲೂ ವಿಜ್ಞಾನ ಅಡಗಿದೆ.ಪ್ರತಿ ವಸ್ತುಗಳಲ್ಲೂ ವೈಜ್ಞಾನಿಕ ಅಂಶಗಳನ್ನು ಒಳಗೊಂಡಿದ್ದು ಯಾವ ಪದಾರ್ಥ ನಮ್ಮ ದೇಹಕ್ಕೆ ಅತ್ಯಂತ ಸೂಕ್ತ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.
ಶಿಕ್ಷಕ ಜಿ.ಎಚ್.ಚವ್ಹಾಣ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ವಿಚಾರವನ್ನು ವೈಜ್ಞಾನಿಕವಾಗಿ ಆಲೋಚಿಸಿದ ನಂತರ ಅದರ ಸತ್ಯಾಸತ್ಯತೆಯನ್ನು ಅರಿತುಕೊಂಡು ಆ ವಿಷಯದ ಕುರಿತು ಸ್ಪಷ್ಟವಾದ ಅಭಿಪ್ರಾಯವನ್ನು ವ್ಯಕ್ತಪಡಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಪಿ.ಎಂ.ನದಾಫ, ಪ್ರಭಾರ ಮುಖ್ಯಗುರುಮಾತೆ ಎಸ್.ವಿ.ಕಡಿ ಇದ್ದರು.ಪ್ರಾಸ್ತಾವಿಕವಾಗಿ ಎಸ್.ಪಿ.ಗುಂಡಕನಾಳ ಮಾತನಾಡಿದರು. ವನಿತಾ ಗೋಟಖಿಂಡಿ ನಿರೂಪಿಸಿದರು.ನೀಲಮ್ಮ ಹರನಾಳ ವಂದಿಸಿದರು.ವಿದ್ಯಾರ್ಥಿಗಳು ದೈನಂದಿನ ಬದುಕಿನಲ್ಲಿ ಬಳಸುವ ಆಹಾರ ಪದಾರ್ಥಗಳಲ್ಲಿರುವ ವೈಜ್ಞಾನಿಕ ಬಗ್ಗೆ ಅತಿಥಿಗಳಿಗೆ ವಿವರಣೆ ನೀಡಿದರು

Latest News

ಹೆಸರು ನೋಂದಾಯಿಸಲು ಸೂಚನೆ:ಮಾ.21 ರಂದು ಉಚಿತ ಸಾಮೂಹಿಕ ವಿವಾಹ

ಹೆಸರು ನೋಂದಾಯಿಸಲು ಸೂಚನೆ:ಮಾ.21 ರಂದು ಉಚಿತ ಸಾಮೂಹಿಕ ವಿವಾಹ

ಮುದ್ದೇಬಿಹಾಳ : ಈಗಾಗಲೇ ತಾಲ್ಲೂಕಿನಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಕಡು ಬಡವರ ಮಕ್ಕಳಿಗೆ ಕೋವಿಡ್

‘ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಅಪ್ಪಂದಿರ,ಅಜ್ಜoದಿರ ಫೋಟೋ ಬೇಡ’

‘ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಅಪ್ಪಂದಿರ,ಅಜ್ಜoದಿರ ಫೋಟೋ ಬೇಡ’

ಮುದ್ದೇಬಿಹಾಳ : ಸೈನ್ಯಕ್ಕೆ ಸೇರುವವರು ಬಡವರ ಮಕ್ಕಳು ಎಂದು ಕೆಲವು ರಾಜಕಾರಣಿಗಳು ಕೆಲವೆಡೆ ಹೇಳಿಕೆ

ಛತ್ರಪತಿ ಶಿವಾಜಿ ಜಯಂತಿ:                                              ಶಿವಾಜಿ ಮಹಾರಾಜರ ಆದರ್ಶ ಮಕ್ಕಳಲ್ಲಿ ಬೆಳೆಸಿ

ಛತ್ರಪತಿ ಶಿವಾಜಿ ಜಯಂತಿ: ಶಿವಾಜಿ ಮಹಾರಾಜರ ಆದರ್ಶ ಮಕ್ಕಳಲ್ಲಿ ಬೆಳೆಸಿ

ಮುದ್ದೇಬಿಹಾಳ : ಪ್ರಜೆಗಳ ಹಿತರಕ್ಷಣೆಗಾಗಿ ಪ್ರಾಣ ಕೊಡಲು ಲೆಕ್ಕಿಸದ ಧೀರ ಹೋರಾಟಗಾರ ಛತ್ರಪತಿ ಶಿವಾಜಿ

ಮುದೂರಿನಲ್ಲಿ ಸಂತಕವಿ ಸರ್ವಜ್ಞ ಜಯಂತಿ ಆಚರಣೆ

ಮುದೂರಿನಲ್ಲಿ ಸಂತಕವಿ ಸರ್ವಜ್ಞ ಜಯಂತಿ ಆಚರಣೆ

ಮುದ್ದೇಬಿಹಾಳ : ತಾಲೂಕಿನ ಮುದೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತಕವಿ ಸರ್ವಜ್ಞ ಮಹರ್ಷಿಯ

ಜೆಇಇ-1 ಪರೀಕ್ಷೆ ಫಲಿತಾಂಶ :                                  ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಜಿಲ್ಲೆಯ ಟಾಪ್-3 ಸ್ಥಾನ

ಜೆಇಇ-1 ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಜಿಲ್ಲೆಯ ಟಾಪ್-3 ಸ್ಥಾನ

ಮುದ್ದೇಬಿಹಾಳ : ಜೆಇಇ ಸೆಷನ್-1 ರ ಪರೀಕ್ಷೆಯಲ್ಲಿ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಭಿಷೇಕ ಎಸ್.ಟಕ್ಕಳಕಿ ಶೇ.99.28, ಅದಿತಿ ಸವಣೂರ ಶೇ.99.23 ಹಾಗೂ ಪ್ರೀತಮ ಲಮಾಣಿ ಶೇ.99.12 ರಷ್ಟು ಪರ್ಸೆಂಟೈಲ್ ಅಂಕ ಪಡೆದು ಜಿಲ್ಲೆಗೆ ಕ್ರಮವಾಗಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಜೆಇಇ ಪರೀಕ್ಷೆ ಫಲಿತಾಂಶದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮೀತಗೌಡ

ಫೆ.19 ರಂದು ನೌಕಾಪಡೆ ನಿವೃತ ಯೋಧ ಸತೀಶ ನಾಯ್ಕಗೆ ಅಭಿನಂದನಾ ಸಮಾರಂಭ

ಫೆ.19 ರಂದು ನೌಕಾಪಡೆ ನಿವೃತ ಯೋಧ ಸತೀಶ ನಾಯ್ಕಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : 15 ವರ್ಷಗಳ ಕಾಲ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ಮರಳಿ ತವರಿಗೆ ಆಗಮಿಸುತ್ತಿರುವ ತಾಲ್ಲೂಕಿನ ಜಟ್ಟಗಿ ತಾಂಡಾದ ಸತೀಶ ನಾಯ್ಕ ಅವರ ಅಭಿನಂದನಾ ಸಮಾರಂಭ ಫೆ.19 ರಂದು ಪಟ್ಟಣದಲ್ಲಿ ಅವರ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದೆ. ಅಂದು ಮದ್ಯಾಹ್ನ 3ಕ್ಕೆ ಪಟ್ಟಣದ ಮಾರುತೇಶ್ವರ ದೇವಸ್ಥಾನದಿಂದ ತೆರೆದ ವಾಹನದಲ್ಲಿ ನಿವೃತ್ತ ಯೋಧ ಸತೀಶ ನಾಯ್ಕ ಅವರ ಮೆರವಣಿಗೆ ಆರಂಭಗೊಳ್ಳಲಿದ್ದು ಪ್ರಮುಖ ಬೀದಿಯಲ್ಲಿ ಹೊರಟು ಸೈನಿಕ ಮೈದಾನ ತಲುಪಿ, ಬಳಿಕ ಹಳೆ ತಹಶಿಲ್ದಾರ