Fatal attack on college lecturer

ಕಾಲೇಜು ಉಪನ್ಯಾಸಕಿ ಮೇಲೆ ಮಾರಣಾಂತಿಕ ಹಲ್ಲೆ

ಕಾಲೇಜು ಉಪನ್ಯಾಸಕಿ ಮೇಲೆ ಮಾರಣಾಂತಿಕ ಹಲ್ಲೆ

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ) : ಮನೆ ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ಬಂದ ಆಗುಂತಕನೊಬ್ಬ ಕಾಲೇಜು ಉಪನ್ಯಾಸಕಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆಗೈದು ತಡೆಯಲು ಹೋದ ಉಪನ್ಯಾಸಕಿ ತಾಯಿಯನ್ನು ಎಳೆದಾಡಿದ ಘಟನೆ ಪಟ್ಟಣದ ಸಾಯಿ ನಗರದ ಹೇಮರಡ್ಡಿ ದೇವಸ್ಥಾನದ ಹಿಂಭಾಗದಲ್ಲಿ ಶನಿವಾರ ಮದ್ಯಾಹ್ನ ನಡೆದಿದೆ.

ಘಟನೆ ವಿವರ : ಮುದ್ದೇಬಿಹಾಳ ಪಟ್ಟಣದ ಎಂ.ಜಿ.ವಿ.ಸಿ ಕಾಲೇಜಿನ ಉಪನ್ಯಾಸಕಿ ಸುಮಂಗಲಾ ಅಂಗಡಿ(46) ಆಗುಂತಕ ವ್ಯಕ್ತಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡವರು. ಪಿಎಸ್‌ಐ ಸಂಜಯ ತಿಪರೆಡ್ಡಿ ಅವರ ಎದುರಿಗೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅಂಬ್ಯುಲೆನ್ಸ್ನಲ್ಲಿ ಬಾಗಲಕೋಟ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಘಟನೆಯ ಸಂದರ್ಭವನ್ನು ವಿವರಿಸಿದ ಉಪನ್ಯಾಸಕಿ ಸುಮಂಗಲಾ, ಎರಡು ದಿನದ ಹಿಂದೆ ವ್ಯಕ್ತಿಯೊಬ್ಬ ಮನೆ ಬಾಡಿಗೆ ಕೇಳಿಕೊಂಡು ಬಂದಿದ್ದ. ಕೊಠಡಿ ಖಾಲಿ ಇದೆ ಎಂದು ತಿಳಿಸಿದ್ದೇವು. ಶನಿವಾರ ಮದ್ಯಾಹ್ನದ ಹೊತ್ತಿಗೆ ಮನೆ ಬಾಡಿಗೆ ಕೇಳುವ ನೆಪದಲ್ಲಿ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದ ಆತನಿಗೆ ಮನೆಯ ಮೇಲಿನ ಮಹಡಿ ಖಾಲಿ ಇದ್ದು ಬಾಡಿಗೆಗೆ ನೋಡುವಂತೆ ತಿಳಿಸಿದೆವು. ಆತ ಮನೆಯ ಫೋಟೋ ತೆಗೆದುಕೊಳ್ಳುವುದಾಗಿ ಹೇಳಿ ಮೊದಲು ಮನೆಯ ಪೂರ್ತಿ ಫೋಟೋ ತಗೆದುಕೊಂಡು ನಂತರ ಬಾಡಿಗೆ ಇರುವ ಕೊಠಡಿಯ ಫೋಟೋ ಬೇಕು ಎಂದ. ಅದಕ್ಕೆ ನಾವು ಕೊಠಡಿಯ ಫೋಟೋ ಯಾವುದಕ್ಕೆ ಎಂದು ಪ್ರಶ್ನಿಸಿದಾಗ ತಮ್ಮ ಕಂಪನಿಯವರಿಗೆ ತೋರಿಸಬೇಕು ಎಂದು ತಿಳಿಸಿದ. ಮೇಲಿನ ಮಹಡಿ ಕೊಠಡಿಗೆ ಹೋಗುತ್ತಿದ್ದಂತೆ ಏಕಾಏಕಿ ನನ್ನ ಮುಖಕ್ಕೆ ಬಲವಾಗಿ ಗುದ್ದಲು ಶುರು ಮಾಡಿದ. ಇದರಿಂದ ಗಾಬರಿಯಾಗಿ ನಾನು ನನ್ನ ತಾಯಿಯನ್ನು ಕೂಗಿದಾಗ ಅವರು ಓಡಿ ಬಂದು ನೋಡುವಷ್ಟರಲ್ಲಿ ತಾಯಿಯವರಿಗೂ ಆತ ಹೊಡೆದಿದ್ದಾನೆ. ಅವರ ಕನ್ನಡಕ ನೆಲಕ್ಕೆ ಬಿದ್ದು ಒಡೆದಿದ್ದು ಅವರು ಹೊರಗೆ ಹೋಗಿ ಓಣಿಯ ಜನರನ್ನು ಕರೆಯಲು ಯತ್ನಿಸುತ್ತಾರೆ ಎಂದು ಅವರನ್ನು ಎಳೆದಾಡಿ ಬಟ್ಟೆ ಹರಿದಿದ್ದಾನೆ. ಘಟನೆಯಿಂದ ನಮಗೆ ತುಂಬಾ ಗಾಬರಿಯಾಗಿದ್ದು ಆತನನ್ನು ಬಿಡಬೇಡಿ ಎಂದು ಹೇಳಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆ ಬಳಿಕವೇ ಆತ ಏಕೆ ಹೋಗಿದ್ದ ಎಂಬ ಮಾಹಿತಿ ತಿಳಿದು ಬರಲಿದೆ.

ಹಾಡಹಗಲೇ ನಡೆದ ಘಟನೆಯಿಂದ ಪಟ್ಟಣದ ಜನತೆ ಆತಂಕಗೊಂಡಿದ್ದು ಮನೆಯಲ್ಲಿ ಒಂಟಿ ಮಹಿಳೆಯರು ಇದ್ದಾಗ ಘಟನೆ ನಡೆದಿರುವುದು ಜನರನ್ನು ಭಯಭೀತರನ್ನಾಗಿಸಿದೆ. ಗಾಯಗೊಂಡಿದ್ದ ಉಪನ್ಯಾಸಕಿ ಸುಮಂಗಲಾ ಹಾಗೂ ಅವರ ತಾಯಿ ವಿಜಯಲಕ್ಷ್ಮಿ ಅಂಗಡಿ ಅವರನ್ನು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಾಲೇಜು ಆಡಳಿತ ಮಂಡಳಿ ಪದಾಧಿಕಾರಿಗಳಿಂದ ಸಾಂತ್ವನ : ಘಟನೆಯ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸರಕಾರಿ ಆಸ್ಪತ್ರೆಗೆ ಆಗಮಿಸಿದ ಎಂ.ಜಿ.ವಿ.ಸಿ ಕಾಲೇಜಿನ ಕಾರ್ಯದರ್ಶಿ ಅಶೋಕ ತಡಸದ, ಪ್ರಾಚಾರ್ಯ ಎಸ್.ಎನ್.ಪೊಲೇಶಿ, ಉಪನ್ಯಾಸಕ ರಹೀಂ ಮುಲ್ಲಾ, ಸಿಬ್ಬಂದಿ ಬಾಬು ಚವ್ಹಾಣ ಉಪನ್ಯಾಸಕಿ ಸುಮಂಗಲಾ ಅಂಗಡಿ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಅಲ್ಲದೇ ತಕ್ಷಣ ಅವರನ್ನು ಬಾಗಲಕೋಟ ಜಿಲ್ಲಾಸ್ಪತ್ರೆಗೆ ಕಳಿಸಲು ನೆರವು ನೀಡಿದರು.

Latest News

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ :                 ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ : ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿ ಹಾಗೂ ಒಳ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಆದ್ಯತೆ ನೀಡುತ್ತಿದೆ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ಮುದ್ದೇಬಿಹಾಳ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ:   ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮುದ್ದೇಬಿಹಾಳ : ಹೋಳಿ ಹಬ್ಬದ ಅಂಗವಾಗಿ ಇಲ್ಲಿನ ಸಮಾನ ಮನಸ್ಕರ ಯುವ ಬಳಗದ ಸಹಯೋಗದಲ್ಲಿ 4 ರಂದು ಬೆಳಗ್ಗೆ 8 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಪಟ್ಟಣದ ಹುಡ್ಕೋದಲ್ಲಿರುವ ಗವಿಸಿದ್ದೇಶ್ವರ ವೇದಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮುದ್ದೇಬಿಹಾಳದ ಎಲ್ಲಾ ಬಾಂಧವರು ತಮ್ಮ ಮಕ್ಕಳನ್ನು ಕರೆತಂದು ಈ ಕಾರ್ಯಕ್ರಮದಲ್ಲಿ ತೊಡಗಿಸಿ ಹೋಳಿ ಆಚರಣೆ ಯಶಸ್ವಿಗೊಳಿಸುವಂತೆ ಬಳಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಮುದ್ದೇಬಿಹಾಳ : ಪಟ್ಟಣಕ್ಕೆ ಕುಡಿವ ನೀರು ಪೂರೈಕೆ ಎರಡು ದಿನ ವಿಳಂಬವಾಗಿದ್ದು ಮಾ.3 ರಿಂದ ಯತಾಸ್ಥಿತಿಯಲ್ಲಿ ವಿವಿಧ ವಾರ್ಡಗಳಿಗೆ ಸರದಿ ಮೇಲೆ ಪೂರೈಕೆ ಆಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕುಡಿವ ನೀರು ಪೂರೈಕೆ ವಿಭಾಗದ ಉಸ್ತುವಾರಿ, ಪುರಸಭೆ ಆರೋಗ್ಯ ನಿರೀಕ್ಷಕ ಜಾವೇದ ನಾಯ್ಕೋಡಿ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡು ದಿನಗಳಿಂದ ಇಲ್ಲಿನ ಜ್ಞಾನ ಭಾರತಿ ಶಾಲೆ ಮುಂದೆ ಮುಖ್ಯ ಕೊಳವೆ ಪೈಪ್‌ನಲ್ಲಿ ಸೋರಿಕೆ ಕಂಡು ಬಂದಿತ್ತು.ಅದನ್ನು