ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮುದ್ದೇಬಿಹಾಳ : ಕರಾವಳಿ ಮತ್ತು ಒಳನಾಡು ಮೀನುಗಾರರ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ರಾಷ್ಟ್ರೀಯ ಮೀನುಗಾರರ ಸಂಘ ಸ್ವಾಗತಿಸುತ್ತದೆ ಎಂದು ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಗೌತಮ್ ಚೌಧರಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೀನುಗಾರರಿಗೆ ನೀಡುವ ಕಿಟ್ ದರವನ್ನು ₹10,000 ದಿಂದ ₹20,000ಕ್ಕೆ ಹೆಚ್ಚಿಸಿರುವುದು, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪನೆ, ಹಾಗೂ ಹೊಸ ‘ಮತ್ಸ್ಯದರ್ಶಿನಿ’ಗಳು ಮತ್ತು ಸುಸಜ್ಜಿತ ಮೀನು ಮಾರುಕಟ್ಟೆಗಳನ್ನು ನಿರ್ಮಿಸುತ್ತಿರುವ ಸರ್ಕಾರದ ಕ್ರಮ ಶ್ಲಾಘನೀಯ. ಈ ಯೋಜನೆಗಳು ಮೀನುಗಾರಿಕೆ ಮಾರುಕಟ್ಟೆ ವಿಸ್ತರಣೆಗೆ ವರದಾನವಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಕಡಲಿಗೆ ಇಳಿಯುವ ಮೀನುಗಾರರ ಬದುಕಿನ ಅತ್ಯಂತ ಸೂಕ್ಷ್ಮ ಹಾಗೂ ಜರೂರತ್ತಿನ ಬೇಡಿಕೆಗಳನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

“ಮೀನುಗಾರರ ಕಲ್ಯಾಣ ಎಂದರೆ ಕೇವಲ ಮಾರುಕಟ್ಟೆ ನಿರ್ಮಾಣವಲ್ಲ. ಪ್ರತಿದಿನ ಪ್ರಾಣದ ಹಂಗು ತೊರೆದು ಸಮುದ್ರಕ್ಕಿಳಿಯುವ ಮೀನುಗಾರನಿಗೆ ಈ ಬಜೆಟ್‌ನಲ್ಲಿ ‘ಜೀವ ವಿಮೆ’ಯ ಭದ್ರತೆ ಮಿಸ್ ಆಗಿದೆ. ಮೀನುಗಾರರ ಸಾವಿನ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಆಸರೆಯಾಗಬೇಕಿದ್ದ ಪರಿಹಾರದ ಮೊತ್ತ ಹೆಚ್ಚಳದ ಬಗ್ಗೆ ಸರ್ಕಾರ ಮೌನ ವಹಿಸಿದೆ. ಇದರ ಜೊತೆಗೆ, ಬಡ ಮೀನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಪ್ರೋತ್ಸಾಹಧನ ಹಾಗೂ ಮೀನುಗಾರರ ಕುಟುಂಬಗಳ ಆರ್ಥಿಕ ನಿರ್ವಹಣೆಗೆ ಸಿಗಬೇಕಿದ್ದ ನೇರ ನೆರವು ಬಜೆಟ್‌ನಲ್ಲಿ ಸಂಪೂರ್ಣವಾಗಿ ಕೈಬಿಟ್ಟು ಹೋಗಿರುವುದು ದುರಾದೃಷ್ಟಕರ. ಮೂಲಸೌಕರ್ಯದ ಜೊತೆಗೆ ಮೀನುಗಾರನ ಜೀವ ಹಾಗೂ ಆತನ ಕುಟುಂಬದ ಭವಿಷ್ಯಕ್ಕೂ ಸರ್ಕಾರ ಆದ್ಯತೆ ನೀಡಬೇಕಿತ್ತು” ತಮ್ಮ ಹೇಳಿಕೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

Latest News

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ಮುದ್ದೇಬಿಹಾಳ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ:   ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ

ಚಿಣ್ಣರ ಬಣ್ಣದೋಕುಳಿ ಸಡಗರ ಹೆಚ್ಚಿಸಿದ ವರ್ಣರಂಜಿತ ಕಾರಂಜಿ

ಚಿಣ್ಣರ ಬಣ್ಣದೋಕುಳಿ ಸಡಗರ ಹೆಚ್ಚಿಸಿದ ವರ್ಣರಂಜಿತ ಕಾರಂಜಿ

ಮುದ್ದೇಬಿಹಾಳ : ಬಣ್ಣದ ಹಬ್ಬ ಪ್ರೀತಿ ಮತ್ತು ವಸಂತಗಳ ಸಂಕೇತವಾಗಿ ಆಚರಿಸಲಾಗುವ ಪ್ರಮುಖ ಹಿಂದೂ

ಮುದ್ದೇಬಿಹಾಳ : ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮುದ್ದೇಬಿಹಾಳ : ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮುದ್ದೇಬಿಹಾಳ : ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಹಳೇ ಸರಕಾರಿ

ಬಾಕಿ ಬಿಲ್ ಪಾವತಿಗೆ ಆಗ್ರಹ :                                             ಮಾ.6 ರಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಬೃಹತ್ ಹೋರಾಟ

ಬಾಕಿ ಬಿಲ್ ಪಾವತಿಗೆ ಆಗ್ರಹ : ಮಾ.6 ರಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಬೃಹತ್ ಹೋರಾಟ

ಮುದ್ದೇಬಿಹಾಳ : ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದೆರಡೂವರೆ ವರ್ಷಗಳಿಂದ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸದೇ ಇರುವ ಕಾರಣದಿಂದ ಗುತ್ತಿಗೆದಾರರ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಯ್.ಎಂ.ಪಟ್ಟಣಶೆಟ್ಟಿ ಹೇಳಿದರು. ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಸಭಾಭವನದಲ್ಲಿ ಭಾನುವಾರ ತಾಲ್ಲೂಕು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರದಲ್ಲಿ 30 ಸಾವಿರ ಕೋಟಿಗೂ ಅಧಿಕ ಬಿಲ್ ಪಾವತಿಸುವುದು ಬಾಕಿ ಉಳಿಸಿಕೊಂಡಿರುವುದರಿAದ ಎಲ್ಲ ಹಂತದ

ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ

ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ

ಮುದ್ದೇಬಿಹಾಳ : ರೈತಾಪಿ ಕುಟುಂಬದಲ್ಲಿ ಜನಿಸಿ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಎಂ.ಎಸ್.ಕೊಪ್ಪ ಅವರು ಆರಂಭಿಸಿರುವ ಶಾಲೆ ಬಡವರ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು. ಮುದ್ದೇಬಿಹಾಳ ತಾಲ್ಲೂಕು ಇಂದು ಶಿಕ್ಷಣಕ್ಕೆ ಒಳ್ಳೆಯ ಹೆಸರು ಮಾಡಿದೆ.ಬಿಎಎಸ್ ಶಾಲೆ, ಅಂಜುಮನ್ ಸಂಸ್ಥೆ,ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆ,ನಾಗರಬೆಟ್ಟ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ