ಮುದ್ದೇಬಿಹಾಳ : ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಪಾಲಿಸಬೇಕು ಎಂದು ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು.
ಪಟ್ಟಣದ ಎಂಜಿಎAಕೆ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹದಲ್ಲಿ ಅವರು ಮಾತನಾಡಿದರು.
ಯುವಕರು ಬೈಕ್ ಮೇಲೆ ಸಂಚರಿಸುವಾಗ ಹೆಲ್ಮೆಟ್ ಧರಿಸಬೇಕು.ಹೋಗುವಾಗ ರಸ್ತೆಯ ಎಡಗಡೆ ಹೋಗಬೇಕು.ಪಾದಚಾರಿ ಮಾರ್ಗದಲ್ಲಿ ಸಂಚರಿಸಬೇಕು.ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಕಾನೂನು ಪ್ರಕಾರ ಅಪರಾಧ,ಸಣ್ಣ ವಯಸ್ಸಿನಲ್ಲಿಯೇ ಬೈಕ್,ತ್ರಿಚಕ್ರ,ದೊಡ್ಡ ವಾಹನಗಳನ್ನು ಚಲಾಯಿಸುವುದು ಕಾನೂನು ಪ್ರಕಾರ ಅಪರಾಧ ಎಂದು ಹೇಳಿದರು.
ಸಿಪಿಐ ಮೊಹ್ಮದ ಫಸಿವುದ್ದೀನ ಮಾತನಾಡಿ, ಇಂದಿನ ಮಕ್ಕಳು ನಾಳಿನ ಪ್ರಜೆಗಳು.ಈಗಿನಿಂದಲೇ ರಸ್ತೆಯ ಸುರಕ್ಷತೆಯ ನಿಯಮಗಳನ್ನು ಅರಿತುಕೊಂಡರೆ ಭವಿಷ್ಯದಲ್ಲಿ ಸಂಭವನೀಯ ಅವಘಡಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.ಮಕ್ಕಳು ರಸ್ತೆಯ ನಿಯಮಗಳ ಕುರಿತು ಪಾಲಕರೊಂದಿಗೆ ಸಂವಹನ ನಡೆಸಬೇಕು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಬಸವರಾಜ ಕೋರಿ, ಪಪೂ ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಹರನಾಳ, ಪ್ರೌಢಶಾಲೆ ವಿಭಾಗದ ಮುಖ್ಯಗುರುಮಾತೆ ವೀಣಾ ಹಿರೇಮಠ ಇದ್ದರು.





