ನ.17 ರಂದು ಆಶಾ ಕಾರ್ಯಕರ್ತೆಯರಿಗೆ ನವಜಾತ ಶಿಶುಗಳ ಆರೈಕೆ ಉಚಿತ ತರಬೇತಿ ಶಿಬಿರ

ನ.17 ರಂದು ಆಶಾ ಕಾರ್ಯಕರ್ತೆಯರಿಗೆ ನವಜಾತ ಶಿಶುಗಳ ಆರೈಕೆ ಉಚಿತ ತರಬೇತಿ ಶಿಬಿರ

ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್ ಮತ್ತು ಅರ್ಜುನ ಆಸ್ಪತ್ರೆ ಇವರ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರಿಗೆ ನವಜಾತ ಶಿಶುಗಳ ಆರೈಕೆ ಉಚಿತ ತರಬೇತಿ ಶಿಬಿರವನ್ನು ನ.17 ರಂದು ಬೆಳಗ್ಗೆ 11.30ಕ್ಕೆ ಪಟ್ಟಣದ ಬೆಂಗಳೂರು ಬೇಕರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನಿರ್ದೇಶಕ ಕುಮಾರ ವಡ್ಡರ ಹೇಳಿದರು.

ಪಟ್ಟಣದ ಅರ್ಜುನ್ ಆಸ್ಪತ್ರೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ತಾಲ್ಲೂಕಿನ ಎಲ್ಲ ಪಿಎಚ್‌ಸಿ ಆಶಾಗಳಿಗೆ ತರಬೇತಿ ಏರ್ಪಡಿಸಲಾಗಿದ್ದು ಮೊದಲ ಹಂತದಲ್ಲಿ ಗರಸಂಗಿ ಹಾಗೂ ತಂಗಡಗಿ ಪಿ.ಎಚ್.ಸಿ ವ್ಯಾಪ್ತಿಯಲ್ಲಿ ಬರುವ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತದೆ. ಚಿಕ್ಕಮಕ್ಕಳ ತಜ್ಞ ವೈದ್ಯರಾದ ಡಾ.ಪರಶುರಾಮ ವಡ್ಡರ ಅವರು ಮಾರ್ಗದರ್ಶನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ.ಜಿ.ಎA.ಕೆ ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಹರನಾಳ, ಟ್ರಸ್ಟ್ ಅಧ್ಯಕ್ಷ ಯಮನಪ್ಪ ವಡ್ಡರ ಆಗಮಿಸುವರು ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಅರ್ಜುನ ಆಸ್ಪತ್ರೆ ಸಿಬ್ಬಂದಿ ಇದ್ದರು.

Latest News

​🌅 ಶುಭೋದಯದ ಪದ್ಯ

​🌅 ಶುಭೋದಯದ ಪದ್ಯ

​ಹೊಸ ಆಸೆಯ ಹೊತ್ತು ಸೂರ್ಯ ಮೂಡಿದ,ಹೊಸ ಕನಸಿನ ಬುತ್ತಿ ಹಕ್ಕಿ ಹಾಡಿದ.ಮಬ್ಬು ಮರೆತು, ಬೆಳಕು

ದಿನಕ್ಕೊಂದು ಧನಾತ್ಮಕ ಕಥೆ: ಸಣ್ಣ ಬದಲಾವಣೆ, ದೊಡ್ಡ ಪರಿಣಾಮ

ದಿನಕ್ಕೊಂದು ಧನಾತ್ಮಕ ಕಥೆ: ಸಣ್ಣ ಬದಲಾವಣೆ, ದೊಡ್ಡ ಪರಿಣಾಮ

ಒಂದು ದೊಡ್ಡ ನಗರದ ಹೊರವಲಯದಲ್ಲಿ ಒಬ್ಬ ಅನುಭವಿ ಕುಂಬಾರ ವಾಸಿಸುತ್ತಿದ್ದನು. ಆತನ ಹೆಸರು ರಾಘವ.

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ ಆರಂಭಿಸಲು ಪ್ರಸ್ತಾವನೆ ಕಳಿಸಲಾಗಿದೆ

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು

MUDDEBIHAL : PWD AEE ರೆಡ್ಡಿ ಅಧಿಕಾರ ಸ್ವೀಕಾರ

MUDDEBIHAL : PWD AEE ರೆಡ್ಡಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾಗಿ ಅಯ್ಯಪ್ಪಗೌಡ ರೆಡ್ಡಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಗುತ್ತಿಗೆದಾರರ ಸಂಘದ ತಾಲ್ಲೂಕು ಅಧ್ಯಕ್ಷ ಸುರೇಶಗೌಡ ಪಾಟೀಲ ಇಂಗಳಗೇರಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಚಿನಗೌಡ ಪಾಟೀಲ, ಗುತ್ತಿಗೆದಾರ ಶ್ರೀಕಾಂತಗೌಡ ಪಾಟೀಲ, ಮುಖಂಡ ರುದ್ರಗೌಡ ಅಂಗಡಗೇರಿ ಸನ್ಮಾನಿಸಿದರು. ಅಯ್ಯಪ್ಪಗೌಡ ರೆಡ್ಡಿ ಅವರು ಈ ಮುಂಚೆ ಶಿರಸಿ ಸಿದ್ದಾಪುರ,ಮುದ್ದೇಬಿಹಾಳ,ಆಲಮಟ್ಟಿ,ತಾಳಿಕೋಟಿ ಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ ಸಹಾಯಕ ಅಭಿಯಂತರರಾಗಿ ಸೇವೆ ಸಲ್ಲಿಸಿದ್ದು ಅವರಿಗೆ ಸರ್ಕಾರ ಈ

ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಆಯ್ಕೆ;                                 ಮುದ್ದೇಬಿಹಾಳ ಕಾನಿಪ ಸಂಘಕ್ಕೆ ಚುನಾವಣೆ : ವಡವಡಗಿ ಪೆನಲ್‌ಗೆ ಜಯ

ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಆಯ್ಕೆ; ಮುದ್ದೇಬಿಹಾಳ ಕಾನಿಪ ಸಂಘಕ್ಕೆ ಚುನಾವಣೆ : ವಡವಡಗಿ ಪೆನಲ್‌ಗೆ ಜಯ

ಮುದ್ದೇಬಿಹಾಳ : ಕಾನಿಪ ಸಂಘದ ತಾಲ್ಲೂಕು ಘಟಕದ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗೆ ಬುಧವಾರ ಚುನಾವಣೆ ನಡೆಸಲಾಗಿದ್ದು ವಡವಡಗಿ-ಬನ್ನೆಟ್ಟಿ ಪೆನಲ್ ಮಧ್ಯೆ ಏರ್ಪಟ್ಟ ಸ್ಪರ್ಧೆಯಲ್ಲಿ ವಡವಡಗಿ ಪೆನಲ್ ಪದಾಧಿಕಾರಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಡಿ.ಬಿ.ವಡವಡಗಿ ಹಾಗೂ ಮಕ್ಬೂಲ್ ಬನ್ನೆಟ್ಟಿ ನಾಮಪತ್ರ ಸಲ್ಲಿಸಿದ್ದು ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಅವರು 19 ಮತ ಪಡೆದು ಆಯ್ಕೆಯಾಗಿ ಪ್ರತಿಸ್ಪರ್ಧಿ ಮಕ್ಬುಲ್ ಬನ್ನೆಟ್ಟಿ ಅವರನ್ನು 10 ಮತಗಳ ಅಂತರದಿoದ ಪರಾಭವಗೊಳಿಸಿದರು. ಉಪಾಧ್ಯಕ್ಷ