ತಾಳಿಕೋಟಿ : ರಂಜಾನ್ ಹಬ್ಬದ ಪ್ರಯುಕ್ತ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ತಾಲ್ಲೂಕಿನ ಬಾವೂರ ಗ್ರಾಮದಲ್ಲಿ ಮಾ.17 ರಂದು ಸಂಜೆ 5.30ಕ್ಕೆ ಗ್ರಾಮದ ಜಾಮಿಯಾ ಮಸ್ಜಿದ್ನಲ್ಲಿ ಇಫ್ತಾರ್ ಕೂಟ ಹಮ್ಮಿಕೊಳ್ಳಲಾಗಿದೆ.
ಇದೇ ಮೊದಲಬಾರಿಗೆ ಫೌಂಡೇಶನ್ದಿAದ ಎಂಟು ಕಡೆಗಳಲ್ಲಿ ಇಫ್ತಾರಕೂಟ ಆಯೋಜಿಸಲಾಗಿದೆ.ಹಿಂದೂ ಮುಸ್ಲಿಂ ಬಾಂಧವರ ಜೊತೆಗೂಡಿ ರಂಜಾನ್ ಇಫ್ತಾರ ಕೂಟ ಆಯೋಜಿಸಿರುವುದು ವಿಶೇಷವಾಗಿದೆ.ಮುಂಬರುವ ದಿನಗಳಲ್ಲಿ ಹಜ್ಗೆ ತೆರಳುವ ಯಾತ್ರಿಗಳಿಗೆ ನೆರವು ಒದಗಿಸುವ ಚಿಂತನೆ ಫೌಂಡೇಶನ್ ಮಾಡಲಿದೆ ಎಂದು ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ತಿಳಿಸಿದ್ದಾರೆ.







