ಮುದ್ದೇಬಿಹಾಳ : ಗ್ರಾಮ ಪಂಚಾಯಿತಿ ಚುನಾವಣೆಗಳು ಸ್ಥಳೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು ಇದರಲ್ಲಿ
ಪಕ್ಷದ ಪಾತ್ರ ಏನೂ ಇರುವುದಿಲ್ಲ.ಈಗ ಆಯ್ಕೆಯಾಗಿರುವರು, ಆಯ್ಕೆಯಾಗದೆ ಪರಾಜಿತರಾದವರು ನಮ್ಮ ಪಕ್ಷದ ಬೆಂಬಲಿಗರೇ ಇದ್ದಾರೆ.ಚುನಾವಣೆ ಸಮಯದಲ್ಲಷ್ಟೇ ರಾಜಕೀಯ ಮಾಡಿ ಇನ್ನುಳಿದ ಸಮಯದಲ್ಲಿ ಪಂಚಾಯಿತಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ತಮ್ಮ ನಿವಾಸಕ್ಕೆ ಆಗಮಿಸಿದ್ದ ಇಂಗಳಗೇರಿ ಗ್ರಾಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ ಮಾಲಗತ್ತಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.ಇಂಗಳಗೇರಿ ಗ್ರಾಪಂಗೆ ನೂತನ ಕಟ್ಟಡ ಕಟ್ಟಲು ಪ್ರಸ್ತಾವನೆ ಕಳಿಸಿದ್ದಲ್ಲಿ ಸರ್ಕಾರದಿಂದ ಅನುದಾನ ದೊರಕಿಸಿಕೊಡುವ ಭರವಸೆಯನ್ನು ಇದೆ ವೇಳೆ ಶಾಸಕರು ನೀಡಿದರು.¨
ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ರಾಜಶೇಖರ ಕರಡ್ಡಿ,ಸಂಗನಗೌಡ ಬಿರಾದಾರ,ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಎಸ್.ಪಾಟೀಲ, ಬಸವರಾಜ ಅಂಗಡಗೇರಿ,ಸAಗಣ್ಣ ನಾಗಾವಿ, ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.







