ಬೆಂಗಳೂರು: ಹೋಲ್‌ಸೇಲ್ ದರದಲ್ಲಿ ಚಿನ್ನ (Gold Fraud) ನೀಡುವುದಾಗಿ ನಂಬಿಸಿ ಚಿನ್ನಾಭರಣ ವ್ಯಾಪಾರಿಯಿಂದ 40 ಲಕ್ಷ ರೂಪಾಯಿ ವಂಚಿಸಲಾಗಿದ್ದು, ಈ ಕುರಿತು ಉಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿತ್ರದುರ್ಗದ ಚಳ್ಳಕೆರೆ ಮೂಲದ ಕೆ. ರತ್ನಚಾರಿ(53) ವಂಚನೆಗೆ ಒಳಗಾದ ಚಿನ್ನಾ ಭರಣ ವ್ಯಾಪಾರಿ ಎಂದು ತಿಳಿದುಬಂದಿದೆ. ಇವರು ನೀಡಿದ ದೂರಿನ ಮೇರೆಗೆ ಗಾಂಧಿನಗರದ ಹೀರಾ ಅಸೋಸಿ ಯೇಟ್ ಮಾಲೀಕ ರಾಜೀವ್ ಗುಪ್ತಾ ಹಾಗೂ ಇತರರ ವಿರುದ್ಧ ವಂಚನೆ (Gold Fraud), ನಂಬಿಕೆ ದ್ರೋಹ, ಜೀವ ಬೆದರಿಕೆ ಆರೋ ಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಏನಿದು ಪ್ರಕರಣ?
ದೂರುದಾರ ರತ್ನಚಾರಿ ಚಿನ್ನದ ವ್ಯಾಪಾರಿಯಾಗಿದ್ದು, ಚಳ್ಳಕೆರೆ ಟೌನ್‌ನಲ್ಲಿ ಚಿನ್ನದ ಅಂಗಡಿ ಹೊಂದಿದ್ದಾರೆ. ಇವರು ನೀಡಿದ ದೂರಿನ ಅನ್ವಯ, ಕೆಲ ವರ್ಷಗಳಿಂದ ಫೈನಾನ್ಸ್ ವ್ಯವಹಾರಗಳ ಸಂಬಂಧ ಹೀರಾ ಅಸೋಸಿಯೇಟ್ ಮಾಲೀಕ ರಾಜೀವ್ ಗುಪ್ತಾ ಪರಿಚಯವಾಗಿದ್ದರು. ಕಳೆದ ಆಗಸ್ಟ್‌ನಲ್ಲಿ ಹೋಲ್‌ಸೇಲ್
ದರದಲ್ಲಿ ಚಿನ್ನ (Gold Fraud) ಕೊಡಿಸುತ್ತೇನೆಂದು ನಂಬಿಸಿದ್ದರು. ಅದರಂತೆ ಅವರು ನನ್ನಿಂದ 40 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ.
ಬಳಿಕಚಿನ್ನ ಕೊಡುವುದಾಗಿ ಗಾಂಧಿನಗರದ ಹೀರಾ ಅಸೋಸಿಯೇಟ್ ಕಚೇರಿಗೆ ನನ್ನನ್ನು ಕರೆಸಿಕೊಂಡಿದ್ದರು. ನಂತರ ಕೆಲವು ದಾಖ ಲೆಗಳಿಗೆ ಸಹಿ ಮಾಡಿದರೆ ಚಿನ್ನ ಕೊಡುವುದಾಗಿ ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದಾರೆ. ಬಳಿಕ ಚಿನ್ನ ಕೇಳಿದಕ್ಕೆ ಜೀವ ತೆಗೆಯುವುದಾಗಿ ರಾಜೀವ್ ಗುಪ್ತಾ ಹಾಗೂ ಅವರ ಸಹಚರರು ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜೀವ ಬೆದರಿಕೆ ಆರೋಪ:
ಬಳಿಕ ರಾಜೀವ್ ಗುಪ್ತಾ ಅವರು ಚಿನ್ನ ಕೊಡುವುದಾಗಿ ನನ್ನ ಮೊಬೈಲ್‌ಗೆ ಕರೆ ಮಾಡಿ ಹಾಗೂ ಸಂದೇಶ ಕಳುಹಿಸಿದ್ದರು. ಆದರೆ, ಯಾವುದೇ ಚಿನ್ನ ಅಥವಾ ಹಣ ನೀಡದೆ ಸುಮಾರು 1 ತಿಂಗಳು ಕಾಲಾಹರಣ ಮಾಡಿದ್ದಾರೆ. ಅ.21 ಮತ್ತೆ ನನ್ನನ್ನು ಭೇಟಿಯಾಗಿದ್ದ ರಾಜೀವ್ ಗುಪ್ತಾ, ಈ ಬಗ್ಗೆ ದೂರು ನೀಡಿದರೆ ನಿನ್ನ ಕಥೆ ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ.