ಗೂಡ್ಸ್ ವಾಹನ ಪಲ್ಟಿ-ಮಹಿಳೆ ಸಾವು ಎಂಟು ಜನರಿಗೆ ಗಾಯ

ಗೂಡ್ಸ್ ವಾಹನ ಪಲ್ಟಿ-ಮಹಿಳೆ ಸಾವು ಎಂಟು ಜನರಿಗೆ ಗಾಯ

ಮುದ್ದೇಬಿಹಾಳ : ಕೂಲಿ ಕೆಲಸಕ್ಕೆ ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ವಾಹನವೊಂದು ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಮಹಿಳೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿದ್ದು ಎಂಟು ಜನ ಕೂಲಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಭಾನುವಾರ ತಾಲೂಕಿನ ತಂಗಡಗಿಯ ಕೃಷ್ಣಾ ನದಿ ಬಳಿಯ ಅಮರಗೋಳ ಕ್ರಾಸನಲ್ಲಿ ನಡೆದಿದೆ.

ಮೃತ ಮಹಿಳೆ ಕೋಳೂರು ಗ್ರಾಮದ ಮಾಲನಬಿ ಖಾದರಬಾಷಾ ಹವಾಲ್ದಾರ್ (35) ಎಂದು ಗುರುತಿಸಲಾಗಿದೆ. ಆಟೋದಲ್ಲಿದ್ದ ಕೋಳೂರು ಗ್ರಾಮದ ವಸಂತಿ ಕತ್ತಿ, ಶರಣಮ್ಮ ಹಗಟಗಿ, ಲಾಲಮಾ ಮತ್ತೇದಾರ, ಬಸಮ್ಮ ತಾರನಾಳ, ಚೆನ್ನಮ್ಮ ತಂಗಡಗಿ, ನಿಂಗಮ್ಮ ಮಡಿವಾಳರ, ಶಂಕ್ರಮ್ಮ ಪಾಟೀಲ,ರೇಖಾ ಮಡಿವಾಳರ ಗಾಯಗೊಂಡವರು.

ಹುನಗುಂದ ತಾಲೂಕು ವ್ಯಾಪ್ತಿಯ ಕೂಡಲಸಂಗಮದ ಜಮೀನುಗಳಲ್ಲಿ ಈರುಳ್ಳಿ ಬಿಡಿಸಲು ಕಾರ್ಮಿಕರನ್ನು ಆಟೋದಲ್ಲಿ ಕರೆದೊಯ್ಯಲಾಗುತ್ತಿತ್ತು.ಹೆದ್ದಾರಿಯಲ್ಲಿ ಓವರಟೇಕ್ ಮಾಡಲು ಹೋಗಿ ಮುಂದೆ ಬರುತ್ತಿದ್ದ ವಾಹನಕ್ಕೆ ದಾರಿ ಬಿಟ್ಟುಕೊಡುವ ಅವಸರದಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗೂಡ್ಸ್ ವಾಹನದ ಚಾಲಕ ನಾಗರಾಜ ಚಲವಾದಿ ವಿರುದ್ಧ ಕೋಳೂರು ಗ್ರಾಮದ ಇಬ್ರಾಹಿಂ ಹಾಲ್ಯಾಳ ದೂರು ನೀಡಿದ್ದಾರೆ.ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜಯ ತಿಪರೆಡ್ಡಿ ಭೇಟಿ ನೀಡ ಪರಿಶೀಲನೆ ನಡೆಸಿದರು.

Latest News

​🌅 ಶುಭೋದಯದ ಪದ್ಯ

​🌅 ಶುಭೋದಯದ ಪದ್ಯ

​ಹೊಸ ಆಸೆಯ ಹೊತ್ತು ಸೂರ್ಯ ಮೂಡಿದ,ಹೊಸ ಕನಸಿನ ಬುತ್ತಿ ಹಕ್ಕಿ ಹಾಡಿದ.ಮಬ್ಬು ಮರೆತು, ಬೆಳಕು

ದಿನಕ್ಕೊಂದು ಧನಾತ್ಮಕ ಕಥೆ: ಸಣ್ಣ ಬದಲಾವಣೆ, ದೊಡ್ಡ ಪರಿಣಾಮ

ದಿನಕ್ಕೊಂದು ಧನಾತ್ಮಕ ಕಥೆ: ಸಣ್ಣ ಬದಲಾವಣೆ, ದೊಡ್ಡ ಪರಿಣಾಮ

ಒಂದು ದೊಡ್ಡ ನಗರದ ಹೊರವಲಯದಲ್ಲಿ ಒಬ್ಬ ಅನುಭವಿ ಕುಂಬಾರ ವಾಸಿಸುತ್ತಿದ್ದನು. ಆತನ ಹೆಸರು ರಾಘವ.

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ ಆರಂಭಿಸಲು ಪ್ರಸ್ತಾವನೆ ಕಳಿಸಲಾಗಿದೆ

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು

MUDDEBIHAL : PWD AEE ರೆಡ್ಡಿ ಅಧಿಕಾರ ಸ್ವೀಕಾರ

MUDDEBIHAL : PWD AEE ರೆಡ್ಡಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾಗಿ ಅಯ್ಯಪ್ಪಗೌಡ ರೆಡ್ಡಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಗುತ್ತಿಗೆದಾರರ ಸಂಘದ ತಾಲ್ಲೂಕು ಅಧ್ಯಕ್ಷ ಸುರೇಶಗೌಡ ಪಾಟೀಲ ಇಂಗಳಗೇರಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಚಿನಗೌಡ ಪಾಟೀಲ, ಗುತ್ತಿಗೆದಾರ ಶ್ರೀಕಾಂತಗೌಡ ಪಾಟೀಲ, ಮುಖಂಡ ರುದ್ರಗೌಡ ಅಂಗಡಗೇರಿ ಸನ್ಮಾನಿಸಿದರು. ಅಯ್ಯಪ್ಪಗೌಡ ರೆಡ್ಡಿ ಅವರು ಈ ಮುಂಚೆ ಶಿರಸಿ ಸಿದ್ದಾಪುರ,ಮುದ್ದೇಬಿಹಾಳ,ಆಲಮಟ್ಟಿ,ತಾಳಿಕೋಟಿ ಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ ಸಹಾಯಕ ಅಭಿಯಂತರರಾಗಿ ಸೇವೆ ಸಲ್ಲಿಸಿದ್ದು ಅವರಿಗೆ ಸರ್ಕಾರ ಈ

ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಆಯ್ಕೆ;                                 ಮುದ್ದೇಬಿಹಾಳ ಕಾನಿಪ ಸಂಘಕ್ಕೆ ಚುನಾವಣೆ : ವಡವಡಗಿ ಪೆನಲ್‌ಗೆ ಜಯ

ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಆಯ್ಕೆ; ಮುದ್ದೇಬಿಹಾಳ ಕಾನಿಪ ಸಂಘಕ್ಕೆ ಚುನಾವಣೆ : ವಡವಡಗಿ ಪೆನಲ್‌ಗೆ ಜಯ

ಮುದ್ದೇಬಿಹಾಳ : ಕಾನಿಪ ಸಂಘದ ತಾಲ್ಲೂಕು ಘಟಕದ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗೆ ಬುಧವಾರ ಚುನಾವಣೆ ನಡೆಸಲಾಗಿದ್ದು ವಡವಡಗಿ-ಬನ್ನೆಟ್ಟಿ ಪೆನಲ್ ಮಧ್ಯೆ ಏರ್ಪಟ್ಟ ಸ್ಪರ್ಧೆಯಲ್ಲಿ ವಡವಡಗಿ ಪೆನಲ್ ಪದಾಧಿಕಾರಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಡಿ.ಬಿ.ವಡವಡಗಿ ಹಾಗೂ ಮಕ್ಬೂಲ್ ಬನ್ನೆಟ್ಟಿ ನಾಮಪತ್ರ ಸಲ್ಲಿಸಿದ್ದು ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಅವರು 19 ಮತ ಪಡೆದು ಆಯ್ಕೆಯಾಗಿ ಪ್ರತಿಸ್ಪರ್ಧಿ ಮಕ್ಬುಲ್ ಬನ್ನೆಟ್ಟಿ ಅವರನ್ನು 10 ಮತಗಳ ಅಂತರದಿoದ ಪರಾಭವಗೊಳಿಸಿದರು. ಉಪಾಧ್ಯಕ್ಷ