ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆ ಆರಂಭಗೊಂಡು ಇಂದಿಗೆ 1 ವರ್ಷ ಪೂರ್ಣವಾದ ಹಿನ್ನೆಲೆ ಗೃಹಲಕ್ಷ್ಮೀಯಿಂದ ತಮ್ಮ ಬದುಕಲ್ಲಿ ಬಂದ ಬದಲಾವಣೆಯ ಕುರಿತು ರೀಲ್ಸ್ (Gruhalakshmi reels) ಮಾಡಿ, ಬಹುಮಾನ ಗೆಲ್ಲುವಂತೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಗೃಹ ಲಕ್ಷ್ಮೀ’ ಜಾರಿಗೊಂಡು ಇಂದಿಗೆ ಒಂದು ವರ್ಷವಾಯಿತು. ಯೋಜನೆಯ ಸದುಪಯೋಗ ಪಡೆದ ಕುಟುಂಬದ ಗೃಹಲಕ್ಷ್ಮೀಯರಿಗೆ ಈ ವೇಳೆ ಶುಭಾಷಯ ಮತ್ತು ಅಭಿನಂದನೆಗಳನ್ನು ತಿಳಿಸಿದರು.
ಗೃಹ ಲಕ್ಷ್ಮೀಯೂ ಇಲ್ಲಿಯವರೆಗೂ ತಮ್ಮ ಕುಟುಂಬದಲ್ಲಿ ತಂದ ಬದಲಾವಣೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ರೀಲ್ಸ್ (Gruhalakshmi reels) ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ. ಅತಿಹೆಚ್ಚು ಓಡುವ ಮತ್ತು ಲೈಕ್ಸ್ ಪಡೆಯುವ ರೀಲ್ಸಗಳಿಗೆ ತಮ್ಮ ಕಡೆಯಿಂದ ವಿಶೇಷ ಕೊಡುಗೆಯನ್ನು ಕೊಡಲಾಗುವುದು.
ಇದನ್ನೂ ಓದಿ: Fire accident: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ.. ಇಬ್ಬರು ಭಸ್ಮ.. ನಾಲ್ವರ ಸ್ಥಿತಿ ಚಿಂತಾಜನಕ..!
ರೀಲ್ಸ್ ಮಾಡಲು ಸೆಪ್ಟೆಂಬರ್ 30ರ ವರೆಗೆ ಮಾತ್ರ ಅವಕಾಶವಿದ್ದು, ಕೂಡಲೇ ರೀಲ್ಸ್ ಮಾಡಿ ಅಪಲೋಡ್ ಮಾಡಿ. ಮೊದಲ 50 ಜನರ ದಾರಿ ಕಾಯುತ್ತಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.