Gurumahanth swamiji: Sattur Rajendra Guru who received Akshara Manath at the age of 12

Gurumahanth swamiji: 12ನೇ‌ ವಯಸ್ಸಿನಲ್ಲಿಯೇ ಅಕ್ಷರ ಹಣತೆ ಹಚ್ಚಿದ ಸುತ್ತೂರು ರಾಜೇಂದ್ರ ಗುರುಗಳು: ಗುರು ಮಹಾಂತ ಸ್ವಾಮೀಜಿ

Gurumahanth swamiji: 12ನೇ‌ ವಯಸ್ಸಿನಲ್ಲಿಯೇ ಅಕ್ಷರ ಹಣತೆ ಹಚ್ಚಿದ ಸುತ್ತೂರು ರಾಜೇಂದ್ರ ಗುರುಗಳು: ಗುರು ಮಹಾಂತ ಸ್ವಾಮೀಜಿ

Ad
Ad

ಹುನಗುಂದ: ಅಕ್ಷರ ಹಣತೆ ಹಚ್ಚಿದ ಸುತ್ತೂರು ರಾಜೇಂದ್ರ ಗುರುಗಳು ತಮ್ಮ 12 ನೇ ವಯಸ್ಸಿನಲ್ಲಿ ಉತ್ತರಾಧಿಕಾರಿಗಳಾಗಿ ಇಂದು ಮೈಸೂರು ಜಿಲ್ಲೆ ಮಾತ್ರವಲ್ಲದೇ ನಾಡಿನ ಬಡ ಮಕ್ಕಳಿಗೆ ಅನ್ನ, ವಸತಿ ನೀಡಿ ಅಕ್ಷರ ಹಣತೆ ಹಚ್ಚಿದ ಕೀರ್ತಿ ರಾಜೇಂದ್ರ ಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಚಿತ್ತರಗಿ ಸಂಸ್ಥಾನಮಠ ಇಲಕಲ್‌ನ ಗುರು ಮಹಾಂತ ಸ್ವಾಮಿಗಳು ಹೇಳಿದರು.

Ad
Ad

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada

ಪಟ್ಟಣದ ಶರಣ ಮಲ್ಲಣ್ಣ ಲೆಕ್ಕಿಹಾಳ ಅವರ ಮನೆಯಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ಗುರವಾರ ನಡೆದ ಸುತ್ತೂರ ರಾಜೇಂದ್ರ ಸ್ವಾಮಿಗಳ 109 ನೇ ಜನ್ಮ ದಿನೋತ್ಸವ ಹಾಗೂ 24ನೇ ಮನೆ ಮನಗಳಿಗೆ ವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜೇಂದ್ರ ಗುರುಗಳ ಜನ್ಮದಿನ ವನ್ನು ವಚನ ದಿನ ಎಂದು ಆಚರಸುತ್ತಿರುವದು ಬಸವಾದಿ ಶರಣರ ವಚನಗಳನ್ನು ನಾಡಿನ ಜನತೆಗೆ ತಲುಪಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.

ಸಭೆಯಲ್ಲಿ ಅನುಭಾವ ನುಡಿಗಳನ್ನಾಡಿದ ವಿಜಯಪುರ ಜ್ಞಾನ ಯೋಗಾಶ್ರಮದ ಸಂಗಮೇಶ್ವರ ಸ್ವಾಮಿಗಳು ರಾಜೇಂದ್ರ ಗುರುಗಳ ಅಕ್ಷರ ದಾಸೋಹ,ಅನ್ನ ದಾಸೋಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಕ್ಷರ ಕ್ರಾಂತಿಯ ಹರಿಕಾರರಾಗಿ
ಕಾರ್ಯ ಮಾಡಿದರು ಎಂದರು.

ಶರಣ ಸಾಯಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಎಸ್.ಎನ್. ಹಾದಿಮನಿ ಮಾತನಾಡಿ ರಾಜೇಂದ್ರ ಸ್ವಾಮಿಗಳು ಚಿಕ್ಕ ವಯಸ್ಸಿನಲ್ಲೇ ಸುತ್ತೂರ ಸಂಸ್ಥೆಯ ಬೆಳವಣಿಗೆ ಮಾಡುವ ಮೂಲಕ ಇಂದು ಈ ಸಂಸ್ಥೆ ಜಗತ್ತಿನ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸವ ಮೂಲಕ ಅಕ್ಷರ ಕಾಯಕದ ಗುರುಗಳು ಎಂದು ಕರೆಸಿಕೊಂಡಿದ್ದಾರೆ ಎಂದರು.

ಶಿರೂರಿನ ಬಸವಲಿಂಗ ಸ್ವಾಮಿಗಳು ಮಾತನಾಡಿದರು.

ಸಭೆಯಲ್ಲಿ ಭಕ್ತಿಸೇವೆ ಮಾಡಿದ ಶರಣ ಮಲ್ಲಣ್ಣ ಲೆಕ್ಕಿಹಾಳ ದಂಪತಿಗಳನ್ನು ಗೌರವಿಸಿದರು.

ಸಭೆಯ ಪ್ರಾರಂಭದಲ್ಲಿ ಫ್ರಭುದೇವ ಮಾಲಗಿತ್ತಿಮಠ ವಚನ ಪ್ರಾರ್ಥನೆ ಮಾಡಿ ಕಾರ್ಯಕ್ರಮ ಕೊನೆಯಲ್ಲಿ ಶರಣು ಸಮರ್ಪಿಸಿದರು.

ಇದನ್ನೂ ಓದಿ: ನಾಲ್ಕು ತಿಂಗಳಲ್ಲಿ ಮೋದಿ ಸರ್ಕಾರ ಪತನ.. 15 ವರ್ಷ ರಾಹುಲ್ ಗೆ ಅಧಿಕಾರ..! ಸ್ಫೋಟಕ ಬಾಂಬ್ ಸಿಡಿಸಿದ ಸಚಿವ

ಎಂ. ಎನ್ ತೆನಿಹಳ್ಳಿ,ಸಂಗಣ್ಣ ನಾಗರಾಳ, ಎಸ್.ಆರ್.ಕಡಿವಾಲ್, ಎಸ್.ಎಂ.ಕೊಪ್ಪರದ ಲೆಕ್ಕಿಹಾಳ ಬಂಧುಗಳು ಉಪಸ್ಥಿತರಿದ್ದರು.

Latest News

ಹೋಳಿ, ರಂಜಾನ್ ಶಾಂತಿಪಾಲನಾ ಸಭೆ:ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬಾರದಂತೆ ಹಬ್ಬದಾಚರಣೆhu ಮಾಡಿ

ಹೋಳಿ, ರಂಜಾನ್ ಶಾಂತಿಪಾಲನಾ ಸಭೆ:ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬಾರದಂತೆ ಹಬ್ಬದಾಚರಣೆhu ಮಾಡಿ

ಮುದ್ದೇಬಿಹಾಳ : ಹೋಳಿ ಹಾಗೂ ರಂಜಾನ್ ಹಬ್ಬಗಳು ಶಾಂತಿ,ಸಹೋದರತೆ ಪ್ರೀತಿ ಹಾಗೂ ಸಹೋದರತೆಯ ಸಂಕೇತಗಳಾಗಿದ್ದು

ಕ್ಷೌರಿಕ ಜನಾಂಗಕ್ಕೆ ಅಪಮಾನ-ಕ್ಷಮೆಯಾಚನೆಗೆ ಆಗ್ರಹ

ಕ್ಷೌರಿಕ ಜನಾಂಗಕ್ಕೆ ಅಪಮಾನ-ಕ್ಷಮೆಯಾಚನೆಗೆ ಆಗ್ರಹ

ಮುದ್ದೇಬಿಹಾಳ : ಪಟ್ಟಣದ ಹೆಸ್ಕಾಂನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಟಿಸಿ ದುರಸ್ತಿ ಕೇಂದ್ರದ ಉದ್ಘಾಟನಾ¸ ಸಮಾರಂಭದಲ್ಲಿ

ಕುಂಟೋಜಿ ಗ್ರಾಪಂ ಮುಂದೆ ಧರಣಿ: ನಕಲಿ ದಾಖಲೆ ಸೃಷ್ಟಿಸಿ ನೇಮಕವಾದ ವಾಟರ್‌ಮನ್‌ಗಳ ವಜಾಗೆ ಆಗ್ರಹ

ಕುಂಟೋಜಿ ಗ್ರಾಪಂ ಮುಂದೆ ಧರಣಿ: ನಕಲಿ ದಾಖಲೆ ಸೃಷ್ಟಿಸಿ ನೇಮಕವಾದ ವಾಟರ್‌ಮನ್‌ಗಳ ವಜಾಗೆ ಆಗ್ರಹ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೇಮಕಗೊಂಡಿರುವ ಮೂವರು

ಜೀವನಾಂಶ ಕೇಳಿದ್ದ ಪತ್ನಿಯ ಮನವೊಲಿಕೆ: ದಂಪತಿಗಳನ್ನು ಒಂದುಗೂಡಿಸಿದ ಲೋಕಅದಾಲತ್

ಜೀವನಾಂಶ ಕೇಳಿದ್ದ ಪತ್ನಿಯ ಮನವೊಲಿಕೆ: ದಂಪತಿಗಳನ್ನು ಒಂದುಗೂಡಿಸಿದ ಲೋಕಅದಾಲತ್

ಮುದ್ದೇಬಿಹಾಳ : ಕೌಟುಂಬಿಕ ಹಿನ್ನೆಲೆಯ ದಂಪತಿಗಳಿಬ್ಬರ ಪ್ರಕರಣವನ್ನು ಇಲ್ಲಿನ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ

ಇಟಗಿ ಗ್ರಾಮದ ಶರಣಮ್ಮ ಬ. ಪಾಟೀಲ ನಿಧನ

ಇಟಗಿ ಗ್ರಾಮದ ಶರಣಮ್ಮ ಬ. ಪಾಟೀಲ ನಿಧನ

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ಶರಣಮ್ಮ ಬಸನಗೌಡ ಪಾಟೀಲ (72) ಅವರು ಬುಧವಾರ ಫೆ.12ರ ಬೆಳಗಿನ ಜಾವ ಸುಮಾರು 12:30ಕ್ಕೆ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ನಾಲ್ವರು ಮೊಮ್ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಫೆ.12ರ ಮಧ್ಯಾಹ್ನ 2 ಗಂಟೆಗೆ ಸ್ವಗ್ರಾಮ ಇಟಗಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಅಧಿಕಾರಿಗಳೇ ಗೈರು ಹಾಜರಿ

ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಅಧಿಕಾರಿಗಳೇ ಗೈರು ಹಾಜರಿ

ಬೀಳಗಿ: ನಮ್ಮೆಲ್ಲರ ಸಂಘಟಿತ ಹೋರಾಟದ ಫಲವಾಗಿ 7ನೇ ವೇತನ ಆಯೋಗ ಯಥಾವತ್ತಾಗಿ ಜಾರಿಗೆ ಬಂದಿದಲ್ಲದೆ, ನಮ್ಮ ಕುಟುಂಬ ವರ್ಗದಲ್ಲಿ ಅನಾರೋಗ್ಯಕೀಡಾದ ಸಂದರ್ಭದಲ್ಲಿ ಉಚಿತ ಚಿಕಿತ್ದೆಗಾಗಿ ಆರೋಗ್ಯ ಸಂಜವೀನಿ ಅನುಷ್ಟಾನಗೊಳಿಸಲು ಯಶಸ್ಬಿಯಾಗಿದ್ದು, 2006 ರಿಂದ ನೇಮಕಗೊಂಡ ಸರಕಾರಿ ನೌಕರರ ಹಿತ ದೃಷ್ಡಿಯಿಂದ ಸರಕಾರ ಜಾರಿಗೊಳಿಸಿದ ಎನ್ ಪಿ ಎಸ್ ರದ್ದುಗೊಳಿಸಿ ಓ ಪಿ ಎಸ್ ಜಾರಿಯಾಗಲು ಹೋರಾಟ ಮಾಡಿ ಯಶಸ್ವಿಯಾಗಲು ಪ್ರತಿಯೊಬ್ಬರು ಸಂಘಟೀತರಾಗೋಣ ಎಂದು ಕ.ರಾ.ಸ. ನೌಕರರ ಸಂಘದ ಜಿಲ್ಲಾಧ್ಯಕ್ಷ ಎಮ್.