ಮುದ್ದೇಬಿಹಾಳ : ತಿಂಥಣಿ ಬ್ರಿಜ್‌ನ ಕಾಗಿನೆಲೆ ಕನಕ ಗುರುಪೀಠದ ದಿ.ಸಿದ್ಧರಾಮನಂದಪರಿ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮ ಫೆ.1 ರಂದು ಬೆಳಗ್ಗೆ 10ಕ್ಕೆ ತಿಂಥಣಿ ಬ್ರಿಜ್‌ನ ಶ್ರೀಮಠದಲ್ಲಿ ಆಯೋಜಿಸಲಾಗಿದೆ.
ಹಾಲುಮತ ಗುರುಪೀಠದ ಜಗದ್ಗುರು ನಿರಂಜನನಾAದಪುರಿ ಸ್ವಾಮೀಜಿಯವರ ಸಾನಿಧ್ಯದಲ್ಲಿ ಜರುಗಲಿರುವ ಈ ನುಡಿನಮನ ಕಾರ್ಯಕ್ರಮಕ್ಕೆ ನಾಡಿನ ಹಲವು ಮಠಾಧೀಶರು, ಸಿಎಂ ಸಿದ್ಧರಾಮಯ್ಯನವರ ಆದಿಯಾಗಿ ಮಂತ್ರಿಗಳು,ಶಾಸಕರು ಹಾಗೂ ಹೊರ ರಾಜ್ಯದ ಅನೇಕ ಗಣ್ಯಮಾನ್ಯರು ಆಗಮಿಸುವರು.
ಭಕ್ತರು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಎನ್.ಮದರಿ ತಿಳಿಸಿದ್ದಾರೆ.



