ಹಂಡೇಸಿರಿ ಸಹಕಾರ ಸಂಘ ಉದ್ಘಾಟನೆ: ಸಹಕಾರ ಸಂಘಗಳ ಬೆಳವಣಿಗೆಗೆ ವಿಶ್ವಾಸವೇ ಜೀವಾಳ-ಪಿ.ಬಿ.ಕಾಳಗಿ

ಹಂಡೇಸಿರಿ ಸಹಕಾರ ಸಂಘ ಉದ್ಘಾಟನೆ: ಸಹಕಾರ ಸಂಘಗಳ ಬೆಳವಣಿಗೆಗೆ ವಿಶ್ವಾಸವೇ ಜೀವಾಳ-ಪಿ.ಬಿ.ಕಾಳಗಿ

ಮುದ್ದೇಬಿಹಾಳ : ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಸಾಲ ಕೊಡಲು ನೂರೆಂಟು ಷರತ್ತುಗಳನ್ನು ವಿಧಿಸುವುದಲ್ಲೇ ತ್ವರಿತವಾಗಿ ಸಾಲದ ಸೌಲಭ್ಯ ದೊರೆಯುವುದಿಲ್ಲ.ಆದರೆ ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಗ್ರಾಹಕನ ವಿಶ್ವಾಸವೇ ಪ್ರಧಾನವಾಗಿದ್ದು ಸಾಲ ವಿತರಣೆ ತ್ವರಿತವಾಗಿಯೂ ಆಗುತ್ತದೆ ಎಂದು ಸಹಕಾರ ಇಲಾಖೆಯ ನಿವೃತ್ತ ಉಪ ನಿಬಂಧಕ ಪಿ.ಬಿ.ಕಾಳಗಿ ಹೇಳಿದರು.

ಪಟ್ಟಣದ ಹುಡ್ಕೋದಲ್ಲಿರುವ ಮದರಿ ಕಾಂಪ್ಲೆಕ್ಸ್ನಲ್ಲಿ ಭಾನುವಾರ ಹಂಡೇಸಿರಿ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಪತ್ತಿನ ಲಭ್ಯತೆ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೆ ಪತ್ತಿನ ಸಹಕಾರ ಸಂಘಗಳ ಜೀವಂತಿಕೆ ಇರುತ್ತದೆ.ಜಾತ್ಯಾತೀತವಾಗಿ ಸದಸ್ಯರನ್ನು ಸೇರ್ಪಡೆಗೊಳಿಸಿದರೆ ಸಂಘ ಬೆಳವಣಿಗೆ ಸಾಧಿಸುತ್ತದೆ ಎಂದರು.

ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ, ಹಂಡೇಸಿರಿ ಸಹಕಾರ ಸಂಘದಿAದ ಜನರಿಗೆ ಸಾಲ ಸೌಲಭ್ಯಗಳು ದೊರೆತು ಬಡವರ ಅಭಿವೃದ್ಧಿಗೆ ಆದ್ಯತೆ ಸಿಗಲಿ ಎಂದರು.

ಹAಡೇಸಿರಿ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಹಂಡರಗಲ್ಲ ಮಾತನಾಡಿ, ಸಮಾನ ಮನಸ್ಕ ನೌಕರರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸೇರಿಸಿದ್ದ ಹಣವೇ ಇಂದು ಸಂಘ ಸ್ಥಾಪನೆಗೆ ಪ್ರೇರಣೆಯಾಗಿದೆ.ಗ್ರಾಹಕರ ವಿಶ್ವಾಸಗಳಿಸಿಕೊಂಡು ಸಂಘವನ್ನು ಮುನ್ನಡೆಸಲಾಗುವುದು ಎಂದರು. ಸೇರಿಕೊಂಡು ಆರಂಭಿಸಿದ ಕರಿಭಂಟನಾಳದ ಶಿವಕುಮಾರ ಸ್ವಾಮೀಜಿ, ಕೊಡೇಕಲ್‌ದ ವೃಷಭೇಂದ್ರ ಸ್ವಾಮೀಜಿ,ಆರ್.ಎಸ್.ಬಿರಾದಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಆರ್.ಬಿ.ಪಾಟೀಲ,ಹಂಡೇಸಿರಿ ಸಹಕಾರ ಸಂಘದ ಉಪಾಧ್ಯಕ್ಷ ಪಿ.ಆರ್.ಕೂಡಗಿ, ಸಂಗಮೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸಾವಿತ್ರಿ ತೊಂಡಿಹಾಳ,ಹAಡೇವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರಗೌಡ ರಾಯಗೊಂಡ, ಮುಖಂಡರಾದ ಮಹ್ಮದರಫೀಕ ನಾಡಗೇರ,ಎಚ್.ಟಿ.ಬಿರಾದಾರ,ಮುದಕಪ್ಪಗೌಡ ತಂಗಡಗಿ,ಬಿ.ಆರ್.ರೂಡಗಿ , ನಿರ್ದೇಶಕರಾದ ಎಂ.ಬಿ.ಪಾಟೀಲ, ಎಂ.ಬಿ.ಬಿರಾದಾರ, ಬಿ.ಜಿ.ಬಿರಾದಾರ,ಎಸ್.ಟಿ.ಪಾಟೀಲ,ಆರ್.ಎಸ್.ಬಿರಾದಾರ,ಬಿ.ಎಚ್.ಭಗವತಿ,ಆರ್.ಬಿ.ಪಾಟೀಲ,ಬಿ.ಜಿ.ಬಿರಾದಾರ,ದ್ರಾಕ್ಷಾಯಣಿ ಗೌಡರ ಇದ್ದರು.ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು.ಆರ್.ಎಸ್.ಬಿರಾದಾರ ಸ್ವಾಗತಿಸಿದರು.ಸಿದ್ದನಗೌಡ ಕಾಶಿನಕುಂಟಿ ನಿರೂಪಿಸಿದರು.ರವಿ ಗೌಡರ ವಂದಿಸಿದರು.

Latest News

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮುದ್ದೇಬಿಹಾಳ : ಕರಾವಳಿ ಮತ್ತು ಒಳನಾಡು ಮೀನುಗಾರರ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ

ಶಾಸಕ ನಾಡಗೌಡ,ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ:           ಮಾ.11 ರಿಂದ ಆರೋಗ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಶಾಸಕ ನಾಡಗೌಡ,ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಮಾ.11 ರಿಂದ ಆರೋಗ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಮುದ್ದೇಬಿಹಾಳ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ-ನೌಕರರ ವಿವಿಧ ಬೇಡಿಕೆಗಳನ್ನು ರಾಜ್ಯ

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ :                 ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ : ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿ ಹಾಗೂ ಒಳ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಆದ್ಯತೆ ನೀಡುತ್ತಿದೆ

ಅಗ್ನಿಶಾಮಕ ತಂಡದಿOದ ಕಾರ್ಮಿಕನ ರಕ್ಷಣೆ;                ಕಾಂಕ್ರಿಟ್ ಮಿಕ್ಸರ್ ಯಂತ್ರದಲ್ಲಿ ಕೈ ಸಿಲುಕಿ ಎಲುಬುಗಳ ತುಂಡು..!

ಅಗ್ನಿಶಾಮಕ ತಂಡದಿOದ ಕಾರ್ಮಿಕನ ರಕ್ಷಣೆ; ಕಾಂಕ್ರಿಟ್ ಮಿಕ್ಸರ್ ಯಂತ್ರದಲ್ಲಿ ಕೈ ಸಿಲುಕಿ ಎಲುಬುಗಳ ತುಂಡು..!

ಮುದ್ದೇಬಿಹಾಳ : ಕಾಂಕ್ರೀಟ್ ಮಿಕ್ಸರ್‌ನಲ್ಲಿ ಕಾರ್ಮಿಕನೊಬ್ಬನ ಕೈ ಸಿಲುಕಿಕೊಂಡು ಎಲುಬುಗಳು ತುಂಡಾಗಿರುವ ಘಟನೆ ಮಂಗಳವಾರ ಇಲ್ಲಿನ ಪಟ್ಟಣದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಬಳಿ ನಡೆದಿದೆ. ಅಬ್ಬಿಹಾಳ ಗ್ರಾಮದ ಕಾರ್ಮಿಕ ಗಂಗಣ್ಣ ಬಸಪ್ಪ ಕಂಬಳಿ(25) ಘಟನೆಯಲ್ಲಿ ಅವರ ಬಲಗೈ ಮಣಿಕಟ್ಟಿಗೆ ತೀವ್ರ ಗಾಯವಾಗಿ ನರಗಳು ಮತ್ತು ಎಲಬು ತುಂಡಾಗಿದೆ.ವಿಷಯ ತಿಳಿದ ತಕ್ಷಣ ಹತ್ತಿರದಲ್ಲಿಯೇ ಇದ್ದ ಅಗ್ನಿಶಾಮಕ ಇಲಾಖೆ ಇಡೀ ತಂಡದ ಸಿಬ್ಬಂದಿ ಧಾವಿಸಿ ಬಂದು ಕಾರ್ಮಿಕನನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿದರು. ಕಾಂಕ್ರಿಟ್

ಪ್ರೇರಣಾ ಕಿಂಡರ್‌ಗಾರ್ಟನ್ ಶಾಲೆ ವಾರ್ಷಿಕೋತ್ಸವ: ವಿದ್ಯಾರ್ಥಿಗಳಿಗೆ ಶಿಕ್ಷಕರೇ ರೋಲ್ ಮಾಡೆಲ್-ಡಾ.ಪ್ರಕಾಶ ನರಗುಂದ

ಪ್ರೇರಣಾ ಕಿಂಡರ್‌ಗಾರ್ಟನ್ ಶಾಲೆ ವಾರ್ಷಿಕೋತ್ಸವ: ವಿದ್ಯಾರ್ಥಿಗಳಿಗೆ ಶಿಕ್ಷಕರೇ ರೋಲ್ ಮಾಡೆಲ್-ಡಾ.ಪ್ರಕಾಶ ನರಗುಂದ

ಮುದ್ದೇಬಿಹಾಳ : ಪ್ರಾಚೀನ ಗುರುಕುಲ ಪದ್ದತಿಯಿಂದ ಇಂದಿನವರೆಗೂ ಶಿಕ್ಷಕರಿಗೆ ಗೌರವದ ಭಾವನೆ ಇದೆ.ವಿದ್ಯಾರ್ಥಿಗಳಿಗೆ ಇಂದಿಗೂ ಒಳ್ಳೆಯ ಶಿಕ್ಷಕರು ರೋಲ್ ಮಾಡೆಲ್ ಆಗಿರುತ್ತಾರೆ ಎಂದು ಎಂ.ಜಿ.ವ್ಹಿ.ಸಿ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ ನರಗುಂದ ಹೇಳಿದರು. ಪಟ್ಟಣದ ಪ್ರೇರಣಾ ಕಿಂಡರ್ ಗಾರ್ಟನ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 11ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜರ್ಮನಿಯ ಶಿಕ್ಷಣ ತಜ್ಞ ಫ್ರೆಡ್ರಿಕ್ ಪ್ರೋಬೆಲ್ ಕಿಂಡರ್ ಗಾರ್ಟನ್ ಕಲ್ಪನೆಯನ್ನು ಬಿತ್ತಿದರು.ಈ ವ್ಯವಸ್ಥೆಯಲ್ಲಿ