ಮುದ್ದೇಬಿಹಾಳ : ಸ್ನೇಹಿತರು ಕೊಟ್ಟ ಸಾಲ ಕೊಡುವಂತೆ ಕಿರುಕುಳ ನೀಡಿದ್ದರಿಂದ ಅನುದಾನಿತ ಕಾಲೇಜೊಂದರ ಬಿ.ಎಸ್.ಸಿ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಪಟ್ಟಣದ ಸಂಗಮೇಶ್ವರ ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ತಾಲ್ಲೂಕಿನ ಹೊಕ್ರಾಣಿ ಗ್ರಾಮದ ನಿಂಗನಗೌಡ ಭೀಮಪ್ಪ ಬಿರಾದಾರ(20)ಎಂದು ಗುರುತಿಸಲಾಗಿದೆ. ಈತ ಮುದ್ದೇಬಿಹಾಳದ ಸಂಗಮೇಶ್ವರ ನಗರದಲ್ಲಿ ತಮ್ಮ ತಂದೆ ತಾಯಿಯೊಂದಿಗೆ ವಾಸವಿದ್ದ. ತನಗೆ ಸಾಲ ಕೊಟ್ಟಿದ್ದ ವಿನೋದ ಶೆಟ್ಟಿ, ವಸಂತ, ಸುದೀಪ ಎಂ., ವಿನಾಯಕ, ಪ್ರಜ್ವಲ್ ಎಂಬುವರು ತಾವು ಕೊಟ್ಟ ಸಾಲ ಮರಳಿ ಕೊಡು ಅಂತಾ ಕಿರುಕುಳ ಕೊಟ್ಟಿದ್ದರಿಂದ ಕಿರುಕುಳ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಭೀಮಪ್ಪ ಬಿರಾದಾರ ಪೊಲೀಸರಿಗೆ ದೂರು ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.