ಹೃದಯದ ಕಾಳಜಿ ವಹಿಸಿ-ಡಾ.ಕರೇಕಲ್ ಪಾಟೀಲ್
ಮುದ್ದೇಬಿಹಾಳ : ನಾವು ಸೇವಿಸುವ ಆಹಾರ, ದೈಹಿಕವಾಗಿ ಕೈಗೊಳ್ಳುವ ಚಟುವಟಿಕೆಗಳು ಹಾಗೂ ಒತ್ತಡ ಮುಕ್ತ ಬದುಕು ಸಾಗಿಸುವುದರಿಂದ ಹೃದಯಾಘಾತಗಳಂತಹ ಘಟನೆಗಳಿಂದ ದೂರವಿರಬಹುದಾಗಿದೆ ಎಂದು ಕರೇಕಲ್ ಪಾಟೀಲ್ ಮಲ್ಟಿಸ್ಪೆಶಾಲಿಟಿ ಹಾಸ್ಪಿಟಲ್ ಮುಖ್ಯಸ್ಥ ಡಾ.ಬಸನಗೌಡ ಕರೇಕಲ್‌ಪಾಟೀಲ್ ಹೇಳಿದರು.
ಪಟ್ಟಣದ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಹಾಗೂ ಫಕೀರೇಶ್ವರ ಡೈಗ್ನೋಸ್ಟಿಕ್ ಸೆಂಟರ್ ಸಹಯೋಗದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಬುಧವಾರ ಅಗ್ನಿಶಾಮಕ ಠಾಣೆಯಲ್ಲಿ ಏರ್ಪಡಿಸಿದ್ದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಾಗೂ ಹೃದಯ ರೋಗದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಹೃದಯ ರೋಗ ಕಾರಣ ಪರಿಹಾರ ಕುರಿತು ಮಾತನಾಡಿದರು.
ನಾವೆಲ್ಲ ಸಂಪತ್ತಿನ ಹಿಂದೆ ಬಿದ್ದಿದ್ದೇವೆ.ಆದರೆ ಆರೋಗ್ಯವನ್ನು ಸಂಪತ್ತು ಎಂದು ಮರೆತಿದ್ದೇವೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ, ಪತ್ರಕರ್ತರಾದವರು ಸತ್ಯವನ್ನು ಹೇಳಲು ಹಿಂಜರಿಯಬಾರದು. ಪತ್ರಕರ್ತರು ರಾಜಕಾರಣಿಗಳ ಸಂಬಂಧ ಸೌಹಾರ್ದಯುತವಾಗಿದ್ದರೆ ಸಮಾಜದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವುದಕ್ಕೆ ಸಾಧ್ಯವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಅಗ್ನಿಶಾಮಕ ಠಾಣೆಯ ಜಿಲ್ಲಾ ಅಧಿಕಾರಿ ಶಶಿಧರ ನೀಲಗಾರ ಮಾತನಾಡಿ, ಅಗ್ನಿಶಾಮಕ ಠಾಣೆಯ ಸಿಬ್ಬಂದಿಯನ್ನು ಜನರು ಆಪತ್ತಿನ ಸಮಯದಲ್ಲಿ ನೆನಪಿಸಿಕೊಳ್ಳುವುದು ಸಹಜ. ಆದರೆ ಪತ್ರಕರ್ತರ ಧ್ವನಿ ಸಂಘಟನೆಯವರು ಸಮಾಜದ ಮುಖ್ಯವಾಹಿನಿಯಲ್ಲಿ ಅಗ್ನಿಶಾಮಕ ಠಾಣೆಯ ನೌಕರರಿಗೂ ಆದ್ಯತೆ ಕೊಟ್ಟಿರುವುದು ಖುಷಿ ತರಿಸಿದೆ ಎಂದರು.
ಐಎನ್‌ಬಿಡಬ್ಲ್ಯೂಎಫ್ ಸಂಘಟನೆ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸಂಗೀತಾ ನಾಡಗೌಡ, ಫಕೀರೇಶ್ವರ ಡಯಗ್ನೋಸ್ಟಿಕ್ ಸೆಂಟರ್ ಮುಖ್ಯಸ್ಥ ಡಾ.ಸಿ.ಕೆ.ಶಿವಯೋಗಿಮಠ, ಬಿಜೆಪಿ ನಾಯಕಿ ಕಾಶೀಬಾಯಿ ರಾಂಪೂರ, ಅಧ್ಯಕ್ಷತೆ ವಹಿಸಿದ್ದ ಕಾನಿಪ ಧ್ವನಿ ಜಿಲ್ಲಾಧ್ಯಕ್ಷ ಯೂಸೂಫ ನೇವಾರ, ತಾಲ್ಲೂಕು ಅಧ್ಯಕ್ಷ ಶಂಕರ ಈ. ಹೆಬ್ಬಾಳ ಮಾತನಾಡಿದರು.
ಖಾಸ್ಗತೇಶ್ವರ ಮಠದ ಶರಣೆ ನೀಲಮ್ಮ ವಿರಕ್ತಮಠ ಸಾನಿಧ್ಯ ವಹಿಸಿದ್ದರು. ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ, ಕಾನಿಪ ಧ್ವನಿ ರಾಜ್ಯ ಕಾರ್ಯಾಧ್ಯಕ್ಷ ಇರ್ಫಾನ ಬೀಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡೂರ, ಸಂಘಟನೆಯ ಉಪಾಧ್ಯಕ್ಷೆ ಭಾರತಿ ನಲವಡೆ, ಪ್ರಧಾನ ಕಾರ್ಯದರ್ಶಿ ಗುಲಾಮಮೊಹ್ಮದ ದಫೇದಾರ, ಬಸಲಿಂಗಪ್ಪ ಹೂಗಾರ, ಬಸವರಾಜ ಕುಂಟೋಜಿ,ಮುತ್ತು ಕನ್ನೂರ, ವಿನಯ ಕಡ್ಲಿಮಟ್ಟಿ, ಹಣಮಂತ ಚವ್ಹಾಣ ಇದ್ದರು. ಪತ್ರಕರ್ತರಾದ ಹಣಮಂತ ನಲವಡೆ, ರವಿ ತೇಲಂಗಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಟಿ.ಡಿ.ಲಮಾಣಿ ಕಾರ್ಯಕ್ರಮ ನಿರೂಪಿಸಿದರು.
ಇಸಿಜಿ,ಆರ್.ಬಿ.ಎಸ್ ಆರೋಗ್ಯ ಉಚಿತ ತಪಾಸಣೆ: ಪತ್ರಿಕಾ ದಿನಾಚರಣೆಯ ಅಂಗವಾಗಿ ಪಟ್ಟಣದ ಫಕೀರೇಶ್ವರ ಡಯಗ್ನೋಸ್ಟಿಕ್ ಸೆಂಟರ್‌ನಲ್ಲಿ ಬುಧವಾರ ಬೆಳಗ್ಗೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ಇಸಿಜಿ, ಆರ್.ಬಿ.ಎಸ್ ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಚಾಲನೆ ನೀಡಿದರು.
ಡಾ.ಸಿ.ಕೆ.ಶಿವಯೋಗಿಮಠ, ಅಗ್ನಿಶಾಮಕ ಠಾಣೆಯ ಪ್ರಭಾರ ಅಧಿಕಾರಿ ನಾಗೇಶ ರಾಠೋಡ, ಅಯ್ಯಪ್ಪ ಸೇವಾ ಸಮಿತಿ ಸದಸ್ಯ ಟಿ.ವಿಜಯಭಾಸ್ಕರ್, ಸಂಘಟನೆಯ ಅಧ್ಯಕ್ಷ ಶಂಕರ ಹೆಬ್ಬಾಳ, ಪ್ರಧಾನ ಕಾರ್ಯದರ್ಶಿ ಗುಲಾಮಮೊಹ್ಮದ ದಫೇದಾರ, ರವಿ ತೇಲಂಗಿ, ಹಣಮಂತ ನಲವಡೆ ಇದ್ದರು.