Heart attack: Heart attack during press conference for CM.. Man died on the spot in bengaluru press club

Heart attack: ಸಿಎಂ‌ ಪರ ಸುದ್ದಿಗೋಷ್ಠಿ ವೇಳೆ ಹೃದಯಾಘಾತ.. ಸ್ಥಳದಲ್ಲಿಯೇ ವ್ಯಕ್ತಿ ಓರ್ವ ದುರ್ಮರಣ..! Video

Heart attack: ಸಿಎಂ‌ ಪರ ಸುದ್ದಿಗೋಷ್ಠಿ ವೇಳೆ ಹೃದಯಾಘಾತ.. ಸ್ಥಳದಲ್ಲಿಯೇ ವ್ಯಕ್ತಿ ಓರ್ವ ದುರ್ಮರಣ..! Video

ಬೆಂಗಳೂರು: ಮೂಡಾ ಹಗರದ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಖಂಡಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಹೃದಯಾಘಾತ (Heart attack) ಸಂಭವಿಸಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಪ್ರೆಸ್​ ಕ್ಲಬ್​​ನಲ್ಲಿ ನಡೆದಿದೆ.

ರವಿಚಂದ್ರ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಕುರುಬ ಸಮುದಾಯದಿಂದ ಸುದ್ದಿಗೋಷ್ಠಿ ವೇಳೆ ಈ ಅನಾಹುತ ಸಂಭವಿಸಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ.. https://t.me/dcgkannada

ಮೃತ ವ್ಯಕ್ತಿಯೂ ಕೋಲಾರದ ಕುರುಬ ಸಂಘದ ಮುಖಂಡರಾಗಿದ್ದರು ಎನ್ನಲಾಗಿದೆ. ಇಂದು ನಡೆಯುತ್ತಿದ್ದ ಪ್ರೆಸ್ ಕ್ಲಬ್​ನಲ್ಲಿ ಈ ಘಟನೆ ಸಂಭವಿಸಿದೆ.

ಕೂಡಲೇ ಹೃದಯಾಘಾತಕ್ಕೀಡಾದ (Heart attack) ರವಿಚಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ರವಿಚಂದ್ರ ಮೃತಪಟ್ಟಿದ್ದಾರೆ.

ಸಿಎಂ ಸಂತಾಪ

ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಆದೇಶ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಸಂಘದ ವತಿಯಿಂದ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ‌ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಸಂಘದ ಸದಸ್ಯ, ನಮ್ಮ ಪಕ್ಷದ ಕಾರ್ಯಕರ್ತ ಸಿ.ಕೆ.ರವಿಚಂದ್ರನ್ ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿಯಿತು.

ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿನ ಈ ಹೋರಾಟದಲ್ಲಿ ನಮ್ಮ ಜೊತೆಯಾಗಿದ್ದ ರವಿಚಂದ್ರನ್ ಅವರ ನಿಧನ ಅತೀವು ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಇದನ್ನೂ ಓದಿ: Protest: ಬಾಗಲಕೋಟೆಯಲ್ಲಿ ಬೆಂಕಿ ಹಚ್ಚಿಕೊಂಡ ಸಿಎಂ ಸಿದ್ದರಾಮಯ್ಯ‌ ಅಭಿಮಾನಿ.. ಆಸ್ಪತ್ರೆಗೆ ದಾಖಲು..

ಅವರ ದುಃಖತಪ್ತ ಕುಟುಂಬಸ್ಥರು ಮತ್ತು ಬಂಧುಬಳಗದ ಜೊತೆ ನಾನಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.

ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಸಿಮೆಂಟ್ ಬೆಳ್ಳುಳ್ಳಿ!

ನವದೆಹಲಿ: ಯಾವುದೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದಾಗ ಅದರ ನಕಲು ಮಾಡಿ ಮಾರಾಟ ಮಾಡುವುದು ಅಪರಾಧ ಜಗತ್ತಿನಲ್ಲಿ  ಹೊಸ ಬೆಳವಣಿಗೆ ಅಲ್ಲ. ಇಂಥದ್ದೇ ಆತಂಕಕಾರಿ ಬೆಳವಣಿಗೆಯೊಂದಲ್ಲಿ ಸಿಮೆಂಟ್‌ನಲ್ಲಿ ಬೆಳ್ಳುಳ್ಳಿ ಪ್ರತಿಕೃತಿ ಮಾಡಿ, ಅದನ್ನು ನಿಜವಾದ ಬೆಳ್ಳುಳ್ಳಿ ಜೊತೆ ಮಾರಾಟ ಮಾಡುತ್ತಿರುವ ಪ್ರಕರಣ ಮಹಾರಾಷ್ಟ್ರದ ಹಲವು ಕಡೆ ಬೆಳಕಿಗೆ ಬಂದಿದೆ.

ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆ.ಜಿ.ಗೆ 300-350 ರು. ತಲುಪಿರುವ ಬೆನ್ನಲ್ಲೇ, ಮಹಾರಾಷ್ಟ್ರದ ಮಾರುಕಟ್ಟೆಗಳಲ್ಲಿ ಸಿಮೆಂಟ್ ಬೆಳ್ಳುಳ್ಳಿ ಮಾರಾಟದ ಪ್ರಕರಣಗಳು ಪತ್ತೆಯಾಗಿವೆ. ಆಕೋಲಾದಲ್ಲಿ ಬಿಕರಿಗೆ ಇಟ್ಟಿದ್ದ ನೈಜ ಬೆಳ್ಳುಳ್ಳಿ ನಡುವೆ ನೈಜ ಬೆಳ್ಳುಳ್ಳಿಯನ್ನೇ ಹೋಲುವ ಸಿಮೆಂಟ್ ಬೆಳ್ಳುಳ್ಳಿ ಪತ್ತೆಯಾಗಿದೆ. ಸಿಮೆಂಟ್ ಬಳಸಿ ಪ್ರತಿಮೆಗಳನ್ನು ನಿರ್ಮಿಸುವಂತೆ ಬೆಳ್ಳುಳ್ಳಿ ಪ್ರತಿಕೃತಿ ಮಾಡಿ ಅದಕ್ಕೆ ಬಿಳಿಯ ಬಣ್ಣ ಹಚ್ಚಲಾಗಿದೆ.

ಸುಭಾಷ್ ಪಾಟೀಲ್ ಎಂಬ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ಮಾರುಕಟ್ಟೆಯಿಂದ 250 ಗ್ರಾಂ ಬೆಳ್ಳುಳ್ಳಿ ಖರೀದಿಸಿ ಮನೆಗೆ ತಂದಿದ್ದರು. ಮನೆಯಲ್ಲಿ ಬೆಳ್ಳುಳ್ಳಿ ಸಿಪ್ಪೆ ಬಿಡಿಸಲು ಹೋದಾಗ ಆಗಿಲ್ಲ. ಬಳಿಕ ಚಾಕುವಿನಿಂದ ಕತ್ತರಿಸಿದಾಗ ಒಳಗೆ ಸಿಮೆಂಟ್ ಕಂಡುಬಂದಿದೆ. ಇದೇ ರೀತಿ ಹಲವು ಗ್ರಾಹಕರು ತಾವು ವಂಚನೆಗೆ ಒಳಗಾಗಿದ್ದರ ಕುರಿತು ಮಾಹಿತಿ ಹಂಚಿ ಕೊಂಡಿದ್ದಾರೆ.

ನೈಜ ಬೆಳ್ಳುಳ್ಳಿ ಜೊತೆಗೆ ಈ ನಕಲಿ ಬೆಳ್ಳುಳ್ಳಿ ಸೇರಿಸುವಮೂಲಕ ತೂಕ ಹೆಚ್ಚಿಸುವ ತಂತ್ರಕ್ಕೆ ವ್ಯಾಪಾರಿಗಳು ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಖರೀದಿಸಿದ ಹಲವು ವ್ಯಕ್ತಿಗಳು ನಕಲಿ ಬೆಳ್ಳುಳ್ಳಿ ಒಡೆದಾಗ ಒಳಗಿನಿಂದ ಸಿಮೆಂಟ್ ಪುಡಿ ಉದುರುತ್ತದೆ.

Latest News

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

ಮುದ್ದೇಬಿಹಾಳದ ಶಕುಂತಲಾಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ ಮುದ್ದೇಬಿಹಾಳ : ಕೊಪ್ಪಳ ಜಿಲ್ಲಾ ಹನುಮಸಾಗರ

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ಧಾರವಾಡ, ಜೂ.30: ನಗರದ ಸ್ವಚ್ಛತೆ ಪಾಲಿಕೆ, ನಗರ ಸಭೆ ಕೆಲಸ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನೂತನ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ

ಸಚಿವ ಲಾಡ್ ಅವರಿಂದ ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ

ಸಚಿವ ಲಾಡ್ ಅವರಿಂದ ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ

ಬೆಂಗಳೂರು, ಜೂನ್‌ 26: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ವಿವಿಧ ಕಾರ್ಖಾನೆಗಳು ಹಾಗೂ ಮನೆ ಕೆಲಸದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ಚರ್ಚಿಸಿದರು. ನುವೋಕೋ ವಿನ್ವಾಸ್ ಕಾರ್ಪೊರೇಷನ್ ಕಾರ್ಮಿಕರ ಸಮಸ್ಯೆ ಚರ್ಚೆ:ಕರ್ನಾಟಕ ಜನರಲ್ ಲೇಬರ್ ಯೂನಿಯನ್ ಬೆಂಗಳೂರು ಇವರ ಮನವಿ ಮೇರೆಗೆ ಮೆ. ನುವೋಕೋ ವಿನ್ವಾಸ್ ಕಾರ್ಪೊರೇಷನ್ ಲಿಮಿಟೆಡ್.. ಕಾರ್ಮಿಕರ ಸಮಸ್ಯೆಗಳ ಕುರಿತು ಸಭೆ ನಡೆಸಿ ಚರ್ಚಿಸಿದರು.

ಶಾಂತಿಸಭೆ : ಪಿಎಸ್‌ಐ ತಿಪರೆಡ್ಡಿ ಸಲಹೆಶಾಂತಿಯುತವಾಗಿ ಮೊಹರಂ ಆಚರಿಸಿ

ಶಾಂತಿಸಭೆ : ಪಿಎಸ್‌ಐ ತಿಪರೆಡ್ಡಿ ಸಲಹೆಶಾಂತಿಯುತವಾಗಿ ಮೊಹರಂ ಆಚರಿಸಿ

ಮುದ್ದೇಬಿಹಾಳ : ಜೂ.27 ರಿಂದ ಮೊಹರಂ ಹಬ್ಬದ ಆಚರಣೆ ಆರಂಭಗೊಳ್ಳಲಿದ್ದು ಶಾಂತಿಯುತವಾಗಿ ಆಚರಿಸುವಂತೆ ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೊಹರಂ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಜೂ.27 ರಂದು ಮೊಹರಂ ಹಬ್ಬದ ಆಚರಣೆ ಆರಂಭಗೊಂಡು 29 ರಂದು ದಫನ್ ಮಾಡಲಾಗುತ್ತದೆ. ಈ ಸಮಯದಲ್ಲಿ ಅಲಾಯ್ ದೇವರುಗಳನ್ನು ಪ್ರತಿಷ್ಠಾಪಿಸುವ ಸಮಿತಿಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಮೊಹರಂ ಹಬ್ಬ ಭಾವೈಕ್ಯತೆಯ ಸಂಕೇತವಾಗಿದ್ದು ಉಭಯ