Heart attack; ಹೃದಯಾಘಾತ: ಉಷಾರಾಣಿ ಆನೆ ನಿಧನ

Heart attack; ಹೃದಯಾಘಾತ: ಉಷಾರಾಣಿ ಆನೆ ನಿಧನ









ಚಿಕ್ಕೋಡಿ, (ಆಗಸ್ಟ್.11); ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಕೊಥಳಿ ಗ್ರಾಮದ ಆಚಾರ್ಯ ರತ್ನ ಶ್ರೀ 108 ದೇಶಭೂಷಣ ಮಹಾರಾಜರು ಸಾಕಿದ್ದ ಕುಪ್ಪಾನವಾಡಿ ಆಶ್ರಮದ ಆನೆ ಉಷಾರಾಣಿ ಶನಿವಾರ ಹೃದಯಾಘಾತದಿಂದ ನಿಧನಹೊಂದಿದೆ.

ಚಿಕ್ಕೋಡಿ ತಾಲೂಕಿನ ಕೊಥಳಿಯ ಕುಪ್ಪಾನವಾಡಿ ಶಾಂತಿಗಿರಿ ಟ್ರಸ್ಟ್ ಮತ್ತು ಬೇಡಕಿಹಾಳ ಗ್ರಾಮದ ಉಷಾರಾಣಿ ಹೆಸರಿನ ಆನೆ ತನ್ನ 51 ನೇ ವಯಸ್ಸಿಗೆ ನಿಧನಹೊಂದಿದೆ. ಈ ಆಶ್ರಮಕ್ಕೆ 1971‌ ರಲ್ಲಿ ಶಿವಮೊಗ್ಗದ ಸಕ್ರೆಬೈಲ್ ನಿಂದ ಕೇವಲ 6 ನೇ ವಯಸ್ಸಿನಲ್ಲಿ ಆನೆಯನ್ನು ತರಲಾಗಿತ್ತು.‌ ಬೇಡಕಿಹಾಳ ಗ್ರಾಮದ ಸಂದೀಪ್ ಪೊಲೀಸ್ ಪಾಟೀಲ್ ಎಂಬುವವರು ತೋಟದಲ್ಲಿ ವಾಸವಿತ್ತು.

ಪ್ರಮುಖವಾಗಿ ಉಷಾರಾಣಿ ಆಣೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದ ಅನೇಕ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿತ್ತು. ಬೇಡಕಿಹಾಳದ ಶ್ರೀ ಕಲ್ಯಾಣ ಸಿದ್ಧೇಶ್ವರನ ಐತಿಹಾಸಿಕ ದಸರಾ ಹಬ್ಬ, ದೀಪಾವಳಿ ಮತ್ತು ಧೂಳವಡ ಪಲ್ಲಕಿ ಆಚರಣೆ ಸೇರಿದಂತೆ ಜೈನ ಸಮುದಾಯದ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.

ಕೇವಲ ಧಾರ್ಮಿಕ‌ ಕಾರ್ಯಕ್ರಮ ಮಾತ್ರವಲ್ಲದೆ ಚಲನಚಿತ್ರ ಹಾಗೂ ಧಾರಾವಾಹಿಯಲ್ಲಿಯೂ ಉಷಾರಾಣಿ ಗುರುತಿಸಿಕೊಂಡಿತ್ತು. ಸ್ವಾಮಿ ಸಮರ್ಥ ಚಲನಚಿತ್ರ, ಜಾನತಾ ರಾಜಾ ಮಹಾನಾಟ್ಯ, ರಾಜಶ್ರೀ ಛತ್ರಪತಿ ಶಾಹು ಮಹಾರಾಜರ ಧಾರಾವಾಹಿಯಲ್ಲಿ ಇದರ ಛಾಪು ಮೂಡಿಸಿತ್ತು.

ಆನೆಯ ನಿಧನಕ್ಕೆ ಶಾಂತಿಗಿರಿ ಟೆಸ್ಟಿನ ಶ್ರೀ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹಾಗೂ ಮಾವುತ ಬಾಸು ಲಕ್ಷ್ಮೇಶ್ವರ ಸೇರಿದಂತೆ ಭಕ್ತರು ಅಂತಿಮ‌ ನಮನ ಸಲ್ಲಿಸಿದರು.

ಸಂಜೆ 6 ಗಂಟೆಯ ನಂತರ ಕ್ರೇನ್ ಮೂಲಕ ಅರಣ್ಯ ಇಲಾಖೆಯ ವಾಹನದಲ್ಲಿ ಪಾರ್ಥಿವ ಶರೀರವನ್ನು ಹಾಕಿ ಬೆಡಕಿಹಾಳ ವೃತ್ತದಿಂದ ಹಳೆ ಬಸ್ ನಿಲ್ದಾಣದವರೆಗೆ ಅಂತಿಮ ಯಾತ್ರೆ ನಡೆಸಿ ಕೋಥಳಿ ಶಾಂತಿಗಿರಿಯ ಬೆಟ್ಟಕ್ಕೆ ಪಾರ್ಥಿವ ಶರೀರವನ್ನು ಸ್ಥಳಾಂತರಿಸಲಾಯಿತು.

ಚಿಕ್ಕೋಡಿ ಅರಣ್ಯ ಇಲಾಖೆ ಅಧಿಕಾರಿಗಳು ಮೃತ ಆನೆಯ ಮರನೋತ್ತರ ಪರೀಕ್ಷೆ ನಡಿಸಿದ ನಂತರ ಅಂತಿ ವಿಧಿ ವಿದಾನಗಳ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Latest News

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ಹುನಗುಂದ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಮರೇಶ ನಾಗೂರ ಹಾಗೂ ಪ್ರಧಾನ

ನೇರ ನುಡಿಯ ಜನಪ್ರೀಯ ಶಾಸಕ ಡಾ. ವಿಜಯಾನಂದ ಕಾಶಪ್ಪನವರ

ನೇರ ನುಡಿಯ ಜನಪ್ರೀಯ ಶಾಸಕ ಡಾ. ವಿಜಯಾನಂದ ಕಾಶಪ್ಪನವರ

ಹುನಗುಂದ : ಕಾಶಪ್ಪನವರ ಮನೆತನದ ಹೆಸರು ಹುನಗುಂದ ವಿಧಾನ ಸಭಾ ಮತಕ್ಷೇತ್ರಕ್ಕೆ ಅಷ್ಟೇ ಸೀಮಿತವಾಗದೇ

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

ಮುದ್ದೇಬಿಹಾಳದ ಶಕುಂತಲಾಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ ಮುದ್ದೇಬಿಹಾಳ : ಕೊಪ್ಪಳ ಜಿಲ್ಲಾ ಹನುಮಸಾಗರ

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ಧಾರವಾಡ, ಜೂ.30: ನಗರದ ಸ್ವಚ್ಛತೆ ಪಾಲಿಕೆ, ನಗರ ಸಭೆ ಕೆಲಸ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ

ಮಾದಕ ವಸ್ತುಗಳಿಂದ ಆರೋಗ್ಯ ಹಾಳು

ಮಾದಕ ವಸ್ತುಗಳಿಂದ ಆರೋಗ್ಯ ಹಾಳು

ಮುದ್ದೇಬಿಹಾಳ : ಮಾದಕ ವಸ್ತುಗಳ ವ್ಯಸನದಿಂದ ಆರೋಗ್ಯ ಹಾಳಾಗುತ್ತದೆ. ಮಾನಸಿಕ ಹಾಗೂ ದೈಹಿಕವಾಗಿ ಅಸ್ವಸ್ಥರಾಗಿ ಸಮಾಜದಲ್ಲೂ ಕೆಟ್ಟ ಹೆಸರು ತಂದುಕೊಳ್ಳಬೇಕಾಗುತ್ತದೆ ಎಂದು ಸಿಪಿಐ ಮೊಹ್ಮದ ಫಸಿವುದ್ದೀನ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುರುಪಯೋಗ ಹಾಗೂ ಸಾಗಣೆ ವಿರುದ್ಧ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ಯಾನ್ಸರ್ ಅಂತಹ ಮಾರಕ ಕಾಯಿಲೆ ಮಾದಕ

ಹೆಸ್ಕಾಂ ಕಚೇರಿ ಆವರಣದಲ್ಲಿ ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಸದಸ್ಯೆ

ಹೆಸ್ಕಾಂ ಕಚೇರಿ ಆವರಣದಲ್ಲಿ ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಸದಸ್ಯೆ

ಮುದ್ದೇಬಿಹಾಳ : ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಕಳೆದ ಇಪ್ಪತ್ತು ವರ್ಷಗಳಿಂದ ನಾನು ನೋಡಿಕೊಂಡೇ ಬಂದಿದ್ದು ಸರಿಯಾದ ಸ್ಪಂದನೆ ಸಿಗುವುದಿಲ್ಲ. ಇಲ್ಲಿ ‘ಹಲವು ರೀತಿಯ ವ್ಯವಹಾರ’ ನಡೆಯುತ್ತವೆ ಎಂದು ಹೆಸ್ಕಾಂ ಗ್ರಾಹಕರ ಸಲಹಾ ಸಮೀತಿ ಸದಸ್ಯೆ ಕವಿತಾ ದಡ್ಡಿ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಹೆಸ್ಕಾಂ ಕಚೇರಿಯ ಆವರಣದಲ್ಲಿ ಗುರುವಾರ ಗ್ರಾಹಕರ ಸಲಹಾ ಸಮಿತಿಗೆ ನೇಮಕಗೊಂಡ ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.