Heavy rains in Muddebihal: Rain water entered the shed

ಮುದ್ದೇಬಿಹಾಳದಲ್ಲಿ ಭಾರೀ ಮಳೆ: ಶೆಡ್‌ಗೆ ನುಗ್ಗಿದ ಮಳೆ ನೀರು

ಮುದ್ದೇಬಿಹಾಳದಲ್ಲಿ ಭಾರೀ ಮಳೆ: ಶೆಡ್‌ಗೆ ನುಗ್ಗಿದ ಮಳೆ ನೀರು

ಮುದ್ದೇಬಿಹಾಳ : ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಭರ್ಜರಿ ಮಳೆ ಸುರಿಯಿತು. ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಸಂತೆಗೆ ಬಂದವರು ದಿನಬಳಕೆ ವಸ್ತುಗಳ ಖರೀದಿಗೆ ಪರದಾಡಿದರು. ಪಟ್ಟಣದ ಆಶ್ರಯ ಕಾಲೋನಿಯಲ್ಲಿ ತಗ್ಗು ಪ್ರದೇಶದಲ್ಲಿದ್ದ ಶೆಡ್‌ವೊಂದಕ್ಕೆ ನೀರು ನುಗ್ಗಿ ಶೆಡ್‌ನಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾದವು.

ವೃದ್ಧೆ ಸುಸಲಾಬಾಯಿ ನಾಯಕ ಅವರ ಶೆಡ್‌ದಲ್ಲಿ ನೀರು ನುಗ್ಗಿ ತೊಂದರೆ ಅನುಭವಿಸಿದರು. ದಿನಬಳಕೆ ವಸ್ತುಗಳೆಲ್ಲ ನೀರಲ್ಲಿ ಕೊಚ್ಚಿ ಹೋದವು. ಅಲ್ಲದೇ ಮಳೆನೀರಿಗೆ ತೊಯ್ದು ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿವೆ ಎಂದು ವೃದ್ಧೆ ಸುಸಲಬಾಯಿ ನಾಯಕ ಅಲವತ್ತುಕೊಂಡರು.

ಮುದ್ದೇಬಿಹಾಳ ಪಟ್ಟಣವಲ್ಲದೇ ಸುತ್ತಮುತ್ತಲಿನ ಗ್ರಾಮಗಳಲ್ಲೂ ಮಳೆ ಆಗಿದ್ದು ಹೊಲಗಳಲ್ಲಿ ನೀರು ನಿಂತಿದೆ. ನಾಗರಬೆಟ್ಟ, ಹಿರೇಮುರಾಳ, ಕವಡಿಮಟ್ಟಿ, ಸರೂರು ಭಾಗದಲ್ಲಿ ಮಳೆ ಆಗಿದ್ದು ಕಂಡು ಬಂದಿತು.

Latest News

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ :                 ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ : ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿ ಹಾಗೂ ಒಳ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಆದ್ಯತೆ ನೀಡುತ್ತಿದೆ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ಮುದ್ದೇಬಿಹಾಳ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ:   ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮುದ್ದೇಬಿಹಾಳ : ಹೋಳಿ ಹಬ್ಬದ ಅಂಗವಾಗಿ ಇಲ್ಲಿನ ಸಮಾನ ಮನಸ್ಕರ ಯುವ ಬಳಗದ ಸಹಯೋಗದಲ್ಲಿ 4 ರಂದು ಬೆಳಗ್ಗೆ 8 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಪಟ್ಟಣದ ಹುಡ್ಕೋದಲ್ಲಿರುವ ಗವಿಸಿದ್ದೇಶ್ವರ ವೇದಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮುದ್ದೇಬಿಹಾಳದ ಎಲ್ಲಾ ಬಾಂಧವರು ತಮ್ಮ ಮಕ್ಕಳನ್ನು ಕರೆತಂದು ಈ ಕಾರ್ಯಕ್ರಮದಲ್ಲಿ ತೊಡಗಿಸಿ ಹೋಳಿ ಆಚರಣೆ ಯಶಸ್ವಿಗೊಳಿಸುವಂತೆ ಬಳಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಮುದ್ದೇಬಿಹಾಳ : ಪಟ್ಟಣಕ್ಕೆ ಕುಡಿವ ನೀರು ಪೂರೈಕೆ ಎರಡು ದಿನ ವಿಳಂಬವಾಗಿದ್ದು ಮಾ.3 ರಿಂದ ಯತಾಸ್ಥಿತಿಯಲ್ಲಿ ವಿವಿಧ ವಾರ್ಡಗಳಿಗೆ ಸರದಿ ಮೇಲೆ ಪೂರೈಕೆ ಆಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕುಡಿವ ನೀರು ಪೂರೈಕೆ ವಿಭಾಗದ ಉಸ್ತುವಾರಿ, ಪುರಸಭೆ ಆರೋಗ್ಯ ನಿರೀಕ್ಷಕ ಜಾವೇದ ನಾಯ್ಕೋಡಿ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡು ದಿನಗಳಿಂದ ಇಲ್ಲಿನ ಜ್ಞಾನ ಭಾರತಿ ಶಾಲೆ ಮುಂದೆ ಮುಖ್ಯ ಕೊಳವೆ ಪೈಪ್‌ನಲ್ಲಿ ಸೋರಿಕೆ ಕಂಡು ಬಂದಿತ್ತು.ಅದನ್ನು