ಮುದ್ದೇಬಿಹಾಳ : ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಸುವರ್ಣ ಸಂಭ್ರಮ ಆಚರಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯಮಟ್ಟದ ಸುವರ್ಣ ಸಾಧಕರಿಗೆ ಕೊಡಲ್ಪಡುವ ಪ್ರಶಸ್ತಿ ಮೊತ್ತವನ್ನು 50 ಸಾವಿರದಿಂದ 1 ಲಕ್ಷ ರೂ.ಗೆ ಏರಿಸಿರುವುದು ಸ್ವಾಗತಾರ್ಹ ಕ್ರಮವೆಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ(ಕೊಣ್ಣೂರ) ಹೇಳಿದರು.
ತಾಲ್ಲೂಕಿನ ಕುಂಟೋಜಿ ರಸ್ತೆಯಲ್ಲಿರುವ ಅಸ್ಕಿ ಫೌಂಡೇಶನ್ ಪ್ಲಾಂಟ್‌ದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಿಎಂ ಸಿದ್ಧರಾಮಯ್ಯನವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಈ ಸಲದ ಆಯ್ಕೆ ಪಟ್ಟಿಯಲ್ಲಿ 50 ಮಹಿಳೆಯರು, 50 ಪುರುಷರನ್ನು ಸುವರ್ಣ ರಾಜ್ಯೋತ್ಸವ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯ.ಇತಿಹಾಸದಲ್ಲಿ ಇದೇ ಮೊದಲು ಒಂದು ರಾಜ್ಯದಲ್ಲಿ ಪ್ರಶಸ್ತಿ ಕೊಡುವ ವಿಚಾರದಲ್ಲಿ ಸರ್ಕಾರವೊಂದು ಪುರುಷ-ಮಹಿಳೆ ಸಮಾನರು ಎಂಬುದನ್ನು ಸಾರಿದೆ ಎಂದು ಅವರು ತಿಳಿಸಿದರು.
ವಿಜಯಪುರ ಜಿಲ್ಲೆಯ ಡಾ.ಎಲ್.ಎಚ್.ಬಿದರಿ, ಜಾನಪದ ಕಲಾವಿದ ಬಸವರಾಜ ಹಾರಿವಾಳ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದ್ದಕ್ಕೆ ಅವರನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು.ಈ ಸಂದರ್ಭದಲ್ಲಿ ಅಸ್ಕಿ ಅವರ ಪುತ್ರಿ ಪ್ರಿಯಾ ಅಸ್ಕಿ, ಪ್ರಥಮ ದರ್ಜೆ ಗುತ್ತಿಗೆದಾರ ರಾಮನಗೌಡ ಹೊಸಮನಿ, ರವಿ ಮೇಟಿ , ಮಡಿವಾಳ ನಾಯ್ಕೋಡಿ ದ್ದರು.