ಮುದ್ದೇಬಿಹಾಳ : ವಿಜಯಪುರ ಜಿಲ್ಲೆಯ ವಿವಿಧ ತಾಲ್ಲೂಕುಗಳು, ಮುದ್ದೇಬಿಹಾಳ ಮತಕ್ಷೇತ್ರದ ರೈತರ ಹಿತವನ್ನು ಕಾಯದೇ ಅವರ ಅಳಲು ಆಲಿಸದ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಮ್ಮ ಕ್ಷೇತ್ರಕ್ಕೆ ಅಷ್ಟೇ ಸಿಮೀತರಾಗಿದ್ದರೆ, ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಸಂಬAಧಿಸಿದAತೆ ಸ್ಥಳೀಯ ಶಾಸಕರು ರೈತರ ಕಷ್ಟಕ್ಕೆ ಆಗದೇ ಇದ್ದೂ ಇಲ್ಲದಂತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ದಾಸೋಹ ನಿಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತರ ದೃಷ್ಟಿಯಿಂದ ಬೀದರ,ಕಲ್ಬುರ್ಗಿ,ಯಾದಗಿರಿ ಜಿಲ್ಲೆಯಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಅತಿವೃಷ್ಟಿ,ಪ್ರವಾಹದ ವೀಕ್ಷಣೆಗೆ ತೆರಳಲಾಗಿದೆ ಎಂದು ಹೇಳಿದರು.
ಈ ಭಾಗದಲ್ಲಿ ಪ್ರತಿನಿತ್ಯ ಬಿಡದೇ ಮಳೆಯಾಗಿದೆ.ನಮ್ಮ ಭಾಗದ ಜಮೀನು ಕಪ್ಪು ಭೂಮಿಯಾಗಿದ್ದು ಹೆಚ್ಚು ಮಳೆ ಆದರೆ ತಡೆದುಕೊಳ್ಳುವುದಿಲ್ಲ.ಕಡಿಮೆ ಮಳೆಗೆ ತೊಗರಿ,ಹತ್ತಿ, ಈರುಳ್ಳಿ ಬೆಳೆಗಳು ಸಂಪುರ್ಣವಾಗಿ ಹಾಳಾಗಿದೆ.ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ 1.50 ಲಕ್ಷ ಎಕರೆ ಪ್ರದೇಶದ ಬೆಳೆ ಹಾಳಾಗಿದೆ.ಭಾಗಶಃ 1.50 ಲಕ್ಷ ಜಮೀನಿನಲ್ಲಿ ಬೆಳೆದ ಬೆಳೆ ಹಾಳಾಗಿದೆ.ಅಂದಾಜಿನAತೆ 1500 ಮನೆಗಳು ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಬಿದ್ದಿವೆ. ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಣ್ಣಿನ ಮೇಲ್ಮುದ್ದಿಯ ಮನೆಗಳೇ ಇದ್ದು ನಿರಂತರ ಮಳೆಗೆ ಮನೆಗಳು ಸೋರುವುದು,ಗೋಡೆಗಳು ಕುಸಿಯುವುದು ನಡೆಯುತ್ತಿದೆ.ಸಂತ್ರಸ್ಥರು ದೇವಸ್ಥಾನಗಳಲ್ಲಿ ಮಲಗುತ್ತಿದ್ದಾರೆ.ಆದರೆ ಅಳಲು ಕೇಳಬೇಕಾದ ಸರ್ಕಾರ ಮಾತ್ರ ಸತ್ತೋಗಿದೆ ಎಂದು ಟೀಕಿಸಿದರು.
ಸಿಎಂ ಸಿದ್ಧರಾಮಯ್ಯನವರ ಸರಕಾರ ರೈತರ ಪಾಲಿಗೆ,ಬಡವರ ಪಾಲಿಗ ಸತ್ತೋಗಿದೆ.ಮುದ್ದೇಬಿಹಾಳ ಕ್ಷೇತ್ರದಲ್ಲಿ ಶಾಸಕ ಇದಾರೆಯೋ ಇಲ್ಲವೋ ಗೊತ್ತಿಲ್ಲ.ಈವರೆಗೂ ಒಂದು ಹಳ್ಳಿಗೂ ಭೇಟಿ ನೀಡಿಲ್ಲ ಎಂದು ಹರಿಹಾಯ್ದರು.ಕೃಷ್ಣಾ ನದಿ ಪ್ರವಾಹ ಬಂದಾಗ ಕುಂಚಗನೂರಲ್ಲಿ ಮೊಸಳೆಯೊಂದು ರೈತನನ್ನು ಎಳೆದೊಯ್ದಿದ್ದು ಆತನ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ.ಆರೇಮುರಾಳದಲ್ಲಿ ಮನೆ ಬಿದ್ದು ನಾಲ್ಕು ಜನರಿಗೆ ಗಾಯಗಳಾಗಿದ್ದು ಅವರಿಗೆ ಒಂದು ರೂ.ಪರಿಹಾರ ಕೊಟ್ಟಿಲ್ಲ.ಆದರೆ ಅಲ್ಲಿನ ಪಿಡಿಒ ಪಂಚಾಯಿತಿಯ ಅನುದಾನ ಬಳಸಿ ತಾತ್ಕಾಲಿಕವಾಗಿ ಬದುಕುವುದಕ್ಕೆ ಮೂಲಸೌರ‍್ಯಗಳನ್ನು ಒದಗಿಸಿದ್ದು ಅವರನ್ನು ಅಭಿನಂದಿಸುವೆ.ಶಾಸಕರು ಕೇವಲ ಸಂತ್ರಸ್ಥರನ್ನು ಭೇಟಿ ಮಾಡಿದ್ದಾರೆಯೇ ಹೊರತು ಬೇರೆನೂ ಆಗಿಲ್ಲ.ನಾಗಬೇನಾಳದಲ್ಲಿ ತೋಳ ದಾಳಿಯಿಂದ ಕುರಿಗಳು ಸತ್ತು ಹೋದವು.ಆದರೆ ಕುರಿಗಾಹಿಗೆ ಪರಿಹಾರ ಸಿಕ್ಕಿಲ್ಲ. ಎಸ್.ಡಿ.ಆರ್.ಎಫ್ ಮಾನದಂಡಗಳ ಪ್ರಕಾರ ತ್ವರಿತವಾಗಿ ಪರಿಹಾರ ಕೊಡಬೇಕು.ಆದರೆ ಇವರಿಗೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ,ಮುಖAಡ ಪ್ರಭು ಕಡಿ, ರೈತಮೋರ್ಚಾ ಅಧ್ಯಕ್ಷ ಎಸ್.ಎಸ್.ಶಿವಣಗಿ, ಬಿಜೆಪಿ ಕಾರ್ಯದರ್ಶಿ ಸಂಜೀವ ಬಾಗೇವಾಡಿ, ಗಿರೀಶಗೌಡ ಪಾಟೀಲ, ಅಶೋಕ ರಾಠೋಡ, ಅನಿಲ ರಾಠೋಡ,ಶಿವರಾಜ ರಾಠೋಡ ಮೊದಲಾದವರು ಇದ್ದರು.
ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ :
ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ತಮ್ಮ ಕ್ಷೇತ್ರಕ್ಕೆ ಸಿಮೀತರಾಗಿದ್ದಾರೆ.ವಿಜಯಪುರ ಜಿಲ್ಲೆಯಲ್ಲಿ ಎಷ್ಟು ಮತಕ್ಷೇತ್ರಗಳಿವೆ ಎಂಬುದು ಉಸ್ತುವಾರಿ ಸಚಿವರಿಗೆ ಗೊತ್ತಿದೆಯೇ ? ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರು,ಶಾಸಕರು ಜೀವಂತ ಇದ್ದಾರೆಯೇ ? ಇವರಿಗೆ ಮಾನ ಮರ್ಯಾದೆ ಇದೆಯಾ ? ಸಂತ್ರಸ್ಥರ ಎಷ್ಟು ಮನೆಗಳಿಗೆ ಇವರು ಭೇಟಿ ನೀಡಿದ್ದಾರೆ ? ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಪ್ರಶ್ನಿಸಿದರು. ಅಧಿಕಾರಿಗಳು ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ಶಾಸಕರಿದ್ದಂತೆ ಅಧಿಕಾರಿಗಳು ನಿಷ್ಕಿçÃಯರಾಗಿದ್ದಾರೆ.ಬಿದ್ದಿರುವ ಮನೆಗಳಿಗೆ ಭೇಟಿ ಕೊಟ್ಟಿಲ್ಲ. ಕೃಷಿ,ಗ್ರಾಪಂ ಆಡಳಿತ,ಕಂದಾಯ ಇಲಾಖೆ ಸರ್ವೆ ಮಾಡಬೇಕು. ಆನಲೈನದಲ್ಲಿ ಪರಿಹಾರ ಪಾವತಿಸಬೇಕು.ಆದರೆ ಉಸ್ತುವಾರಿ ಸಚಿವರು,ಸ್ಥಳೀಯ ಶಾಸಕರು ರೈತರ ,ಬಡವರ ಪಾಲಿಗೆ ಬದುಕಿಲ್ಲ ಎಂದು ಆರೋಪಿಸಿದರು.
ಉಸ್ತುವಾರಿ ಸಚಿವರು ಈವರೆಗೂ ಸಂತ್ರಸ್ಥರಿಗೆ ಪರಿಹಾರ ಕೊಟ್ಟ ಬಗ್ಗೆ ಒಂದು ಹೇಳಿಕೆ ಕೊಟ್ಟಿಲ್ಲ.ತಾಳಿಕೋಟಿ ದೋಣಿ ನದಿಯಲ್ಲಿ ಹರಿದು ಹೋದ ಸಂತ್ರಸ್ಥನ ಮನೆಗೆ ಉಸ್ತುವಾರಿ ಸಚಿವರು,ಶಾಸಕರು ಭೇಟಿ ಮಾಡಿಲ್ಲ. ಭೀಮಾ ನದಿ ಪ್ರವಾಹ ಬಂದಿದ್ದರೂ ಅಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ.ಸರ್ಕಾರ ದಿವಾಳಿಯಾಗಿದೆ.ಡಿಸಿ,ತಹಸೀಲ್ದಾರ್ ಖಾತೆಯಲ್ಲಿ ಬಿಡಿಗಾಸು ಇಲ್ಲ.ಬೆಳೆ ಪರಿಹಾರ ,ಬಿದ್ದಿರುವ ಮನೆಗಳಿಗೆ ಪರಿಹಾರ ಕೊಡುವುದಕ್ಕೆ ಇವರಲ್ಲಿ ಹಣ ಇಲ್ಲ ಎಂದು ಹೇಳಿದರು.
ಶಾಸಕ ನಾಡಗೌಡ ದಾರಿ ತಪ್ಪಿದ ಮಗ-ನಡಹಳ್ಳಿ ವ್ಯಂಗ್ಯ:
ಮನೆ ಬಿಟ್ಟು ಓಡಿ ಹೋಗಿರುವ ಮಕ್ಕಳು, ತಂದೆ ತಾಯಿಗೆ ಬೇಡವಾದ ಮಕ್ಕಳು, ಹಿಂದೂ ಸಮಾಜದಲ್ಲಿ , ವೀರಶೈವ ಲಿಂಗಾಯತ ಸಮಾಜದವರಿಗೆ ಬೇಡವಾಗಿರುವ ಮಕ್ಕಳು ಲಿಂಗಾಯತ ಬಳಸಿ, ಹಿಂದೂ ಎಂದು ಬರೆಯಿಸಬೇಡಿ ಎಂದು ಹೇಳುತ್ತಾರೆ.ಆದರೆ ಸಮಾಜದವರು ನಿಮ್ಮ ಮಾತು ಕೇಳುವುದಿಲ್ಲ.ಅವರು ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸುತ್ತಾರೆ ಎಂದು ನಡಹಳ್ಳಿ ಹೇಳಿದರು.
ಈಚೇಗೆ ಸ್ವಾಮಿಜಿಯೊಬ್ಬರು ಕಾವಿ ಧರಿಸಿ ಮುಸ್ಲಿಂ ಸಮಾಜದ ಸ್ಮಶಾನವನ್ನು ಸ್ವಚ್ಛಗೊಳಿಸಿದರು.ಮುಸ್ಲಿಂ ಸಮಾಜದ ಸ್ಮಶಾನ ಸ್ವಚ್ಛತೆಗೊಳಿಸಲು ಅವರ ಸಮಾಜದವರಿದ್ದಾರೆ.ಆದರೆ ನಮ್ಮ ಕಾವಿ ತೊಟ್ಟ ಸ್ವಾಮೀಜಿಯವರ ಕೆಲಸ ಅದಲ್ಲ.ಹಾಗೆಯೇ ಜಾತಿ ಗಣತಿ ಸಮಯದಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಯಿಸಬೇಕು ಎಂದು ಹೇಳುವ ಈ ಕ್ಷೇತ್ರದ ಶಾಸಕ ದಾರಿ ತಪ್ಪಿದ ಮಗ ಎಂದು ನಡಹಳ್ಳಿ ಹೇಳಿದರು. ಧರ್ಮದ ಕುರಿತು ಅಜ್ಜ,ಅಜ್ಜಿ ಹೆಸರು ಹೇಳಿಕೊಂಡು ಡ್ರಾಮಾ ಮಾಡುವುದನ್ನು ಬಿಡಿ. ಜನ ನಿಮ್ಮನ್ನು ಅಜ್ಜ ಅಜ್ಜಿ ಕತೆ ಹೇಳುವುದಕ್ಕೆ ನಿಮಗೆ ಓಟು ಹಾಕಿಲ್ಲ.ಜನರ ಕಷ್ಟ ಸುಖಕ್ಕೆ ಆಗಬೇಕು ಎಂದು ನಿಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.