I will give 10 thousand jobs before going to soil: Nadahalli

ನಾನು ಮಣ್ಣಿಗೆ ಹೋಗುವ ಮುನ್ನ 10 ಸಾವಿರ ಉದ್ಯೋಗ ಕೊಟ್ಟು ಹೋಗುತ್ತೇನೆ

ನಾನು ಮಣ್ಣಿಗೆ ಹೋಗುವ ಮುನ್ನ 10 ಸಾವಿರ ಉದ್ಯೋಗ ಕೊಟ್ಟು ಹೋಗುತ್ತೇನೆ

ಮುದ್ದೇಬಿಹಾಳ : ನಾನು ಮತಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರಿಂದಲೇ ಜನ ಬೆಂಬಲಿಸಲಿಲ್ಲವೋ ಏನೋ ಆದರೆ ರೈತರ ಮಕ್ಕಳು ಕಷ್ಟ ಅನುಭವಿಸಬಾರದು ಎಂಬ ಉದ್ದೇಶದಿಂದ ನಾನು ಮಣ್ಣಿಗೆ ಹೋಗುವ ಮುನ್ನ 10 ಸಾವಿರ ಉದ್ಯೋಗ ಕೊಟ್ಟು ಹೋಗುತ್ತೇನೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಭಾವುಕರಾಗಿ ಹೇಳಿದರು.

ಪಟ್ಟಣದ ಮಾರುತಿ ನಗರದಲ್ಲಿರುವ ತಮ್ಮ ಫಾರ್ಮಹೌಸ್‌ನಲ್ಲಿ ಮಂಗಳವಾರ ಅಭಿಮಾನಿಗಳು, ಕಾರ್ಯಕರ್ತರು ಹಮ್ಮಿಕೊಂಡಿದ್ದ ತಮ್ಮ 56ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವೆಲ್ಲ ಜಾತಿ ವಿಷಯ ಬಂದಾಗ ಒಗ್ಗಟ್ಟು ಆಗುತ್ತೇವೆ. ಆದರೆ ಜನರ ಬದುಕು ಕಟ್ಟುವ ನಾಯಕತ್ವವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಡವಿದ್ದೇವೆ. ಆಧುನಿಕ ಬದುಕು ಕಟ್ಟಿಕೊಡುವ, ಸೌಲಭ್ಯಗಳನ್ನು ಜನರಿಗೆ ತಲುಪಿಸುವ ನಾಯಕತ್ವ ಬೇಕು. ತೊಗರಿ ಬೆಳೆ ನಷ್ಟವಾದರೂ ಈ ಸರ್ಕಾರದಿಂದ ಒಂದು ರುಪಾಯಿ ಪರಿಹಾರ ಬಂದಿಲ್ಲ. ಬರುವುದೂ ಇಲ್ಲ. ಈ ಸರ್ಕಾರ,ಈಗ ನೀವು ಆಯ್ಕೆಮಾಡಿಕೊಂಡ ಜನಪ್ರತಿನಿಧಿ ಹಾಗೆ ಇದ್ದಾರೆ. ರೈತರು ಬೆಳೆ ಇನ್ಸೂರೆನ್ಸ್ ಬಂದಿಲ್ಲ ಎಂದು ಕೇಳುತ್ತಿದ್ದಾರೆ. ಅವರಿಗೆಲ್ಲ ಈಗ ನೀವು ಬಾಯಿ ಬಡಿದುಕೊಳ್ಳಿ ಎಂದೇ ಹೇಳಿದ್ದೇನೆ ಎಂದು ತಿಳಿಸಿದರು.

ನೀರಾವರಿ ಯೋಜನೆಗಳು ಅಲ್ಲಿಗೆ ನಿಂತಿವೆ. ನಾಗರಬೆಟ್ಟ ಏತ ನೀರಾವರಿ ಯೋಜನೆ ಏನಾಗಿದೆ. ಬೂದಿಹಾಳ ಪೀರಾಪೂರ ಯೋಜನೆಗಾಗಿ ರೈತರು ಹೋರಾಟ ನಡೆಸುವಾಗ ನಾನು ಹೋರಾಟಕ್ಕೆ ಬೆಂಬಲಿಸುವುದಾಗಿ ಹೇಳುತ್ತಲೇ ಉಸ್ತುವಾರಿ ಸಚಿವರು ಓಡಿ ಬಂದು ಭರವಸೆ ಕೊಟ್ಟು ಹೋದರು. ನೀರಾವರಿಗಾಗಿ ಹೋರಾಟ ಅನಿವಾರ್ಯ ಎಂಬಂತಾಗಿದೆ ಎಂದರು.

ಮತಕ್ಷೇತ್ರದಲ್ಲಿ ಕುಡಿವ ನೀರಿನ ಯೋಜನೆ ಸಲುವಾಗಿ ಸಿಸಿ ರಸ್ತೆ ಹಾಳುಮಾಡುತ್ತಿದ್ದಾರೆ. ಆಯ್ಕೆಯಾದವರು ನಿಮ್ಮೂರಿಗೆ ಬಂದು ಧನ್ಯವಾದ ಕೂಡಾ ಹೇಳಲಿಲ್ಲ. ಮೊದಲು ಅವರಿಗೆ ಹಳ್ಳಿಗಳ ಜನಕ್ಕೆ ನೀರು ಕೊಡಲು ತಿಳಿಸಿ. ನನ್ನ ದುಡಿಮೆಯಲ್ಲಿ ಅರ್ಧ ರಾಜಕಾರಣಕ್ಕೆ, ದಾಸೋಹ ಕ್ಕೆ ವ್ಯಯ ಮಾಡಿದ್ದೇನೆ. ನನಗೆ ಮಂತ್ರಿಯಾಗಿ ಮೆರೆಯಬೇಕು ಎಂಬ ಭಾವನೆ ಇಲ್ಲ. ರೈತರ ಮಕ್ಕಳು ತಮ್ಮ ತಂದೆಯವರು ಅನುಭವಿಸಿದ ಕಷ್ಟ ಅನುಭವಿಸಬಾರದು ಎಂಬ ಕಾರಣದಿಂದ ರಾಜಕಾರಣಕ್ಕೆ ಬಂದಿದ್ದೇನೆ. ಇದು ಕೇವಲ ಭಾಷಣಕ್ಕಾಗಿ ಮಾತಲ್ಲ ಸಂಕಲ್ಪದಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿದರು. ಬಿಜೆಪಿ ಮುಖಂಡರಾದ ರಮೇಶ ಬಿದನೂರ, ರವಿಕಾಂತ ಬಗಲಿ, ಪ್ರಭುಗೌಡ ಬಿರಾದಾರ, ಪ್ರಭು ಕಡಿ, ಬಿ.ಪಿ.ಕುಲಕರ್ಣಿ, ಮಲಕೇಂದ್ರಗೌಡ ಪಾಟೀಲ, ಗಂಗಾಧರ ನಾಡಗೌಡ, ರವೀಂದ್ರ ಲೋಣಿ, ಎಂ.ಬಿ.ಅಂಗಡಿ, ಎಂ.ಎಸ್.ಪಾಟೀಲ, ಸುಮಂಗಲಾ ಕೋಟಿ, ಕೆ.ವಾಯ್.ಬಿರಾದಾರ, ಮಹದೇವಯ್ಯ ಶಾಸ್ತ್ರೀಗಳು, ಪುರಸಭೆ ಸದಸ್ಯೆ ಸಹನಾ ಬಡಿಗೇರ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸೇರಿದಂತೆ ಪಕ್ಷದ ಮುಖಂಡರು ಇದ್ದರು.

ನಡಹಳ್ಳಿಯವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು, ಕಾರ್ಯಕರ್ತರು ರಕ್ತದಾನ ಶಿಬಿರ,ಆರೋಗ್ಯತಪಾಸಣಾ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿದರು.

ಸಚಿವ ಎಂ.ಬಿ.ಪಾಟೀಲ್‌ರಿಗೆ ಟಾಂಗ್: ನೀರಾವರಿ ಭಗೀರಥ ಎಂದು ಕರೆಯಿಸಿಕೊಳ್ಳುವ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಮತಕ್ಷೇತ್ರದಲ್ಲಿ ರಸ್ತೆಗಳ ಸ್ಥಿತಿ ಹೇಳುವಂತಿಲ್ಲ. ಬಬಲೇಶ್ವರ, ಸಿಂದಗಿ, ನಾಗಠಾಣ ಕ್ಷೇತ್ರದ ಒಳಗಡೆ ಹೋಗಿ ಹೊರಬರಲು ಆಗುವುದಿಲ್ಲ ಎಂದು ಮಾಜಿ ಶಾಸಕ ನಡಹಳ್ಳಿ ಟೀಕಿಸಿದರು.

ಕನಸು : ಮುದ್ದೇಬಿಹಾಳ ಮತಕ್ಷೇತ್ರದಂತಹ ಸಂಪನ್ಮೂಲ ಹೊಂದಿರುವ ತಾಲ್ಲೂಕು ರಾಜ್ಯದಲ್ಲಿ ಬೇರಾವುದು ಇಲ್ಲ. ಇಲ್ಲಿ 48 ಕೆರೆ ಇರುವ ಎರಡು ಡ್ಯಾಮ್‌ಗಳನ್ನು ಹೊಂದಿಕೊಂಡಿರುವ ತಾಲ್ಲೂಕು ಮುದ್ದೇಬಿಹಾಳ ಆಗಿದೆ. ಕನಸು ಹೊತ್ತಿರುವ ನಾಯಕರನ್ನು ನೀವು ಆಯ್ಕೆ ಮಾಡಿಕೊಳ್ಳಿ. ಹತ್ತು ಕೋಟಿ ವಚ್ಚದಲ್ಲಿ ಹೈನುಗಾರಿಕೆ ತರಬೇತಿ ಕೇಂದ್ರ ಮಾಡುತ್ತೇನೆ. ನಮ್ಮ ರೈತರು ಭೂಮಿಗೆ ಏನು ಬೇಕು ಎಂಬುದನ್ನು ತಿಳಿದುಕೊಂಡು ಒಕ್ಕಲುತನ ಮಾಡಬೇಕು.ರೈತನ ಬದುಕು ಹಸನು ಮಾಡಬೇಕು ಎಂಬುದು ನನ್ನ ಕನಸು ಎಂದು ಮಾಜಿ ಶಾಸಕ ನಡಹಳ್ಳಿ ಹೇಳಿದರು.

ನಾಡಗೌಡ, ಭೈರೇಗೌಡರ ವಿರುದ್ಧವೂ ವಾಗ್ದಾಳಿ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಅಭಿವೃದ್ಧಿಪಡಿಸಲು ಆಲಮಟ್ಟಿ ಜಲಾಶಯ ಎತ್ತರಿಸಿದರೆ ರೈತರಿಗೆ ಭೂಸ್ವಾಧೀನಗೊಂಡ ಜಮೀನುಗಳಿಗೆ ಪರಿಹಾರ ಕೊಡುವುದು ಹೆಚ್ಚುವರಿ ನಷ್ಟವೆಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಎಲ್ಲೋ ಕೂತುಕೊಂಡು ಭಾಷಣ ಮಾಡುತ್ತಾನೆ. ಭೈರೇಗೌಡ ಅವನೇನು ಅವರ ಅಪ್ಪನ ಮನೆಯಿಂದ ರೈತರಿಗೆ ಪರಿಹಾರ ಕೊಡುತ್ತಾನಾ?. ನಮ್ಮ ರೈತರ ಜಮೀನುಗಳು ಕಳೆದುಕೊಂಡಿರುತ್ತಾರೆ.ಅವರಿಗೆ ಪರಿಹಾರ ಸಿಗಬೇಕು ಎಂದು ನಡಹಳ್ಳಿ ಭೈರೇಗೌಡ ವಿರುದ್ದ ವಾಗ್ದಾಳಿ ನಡೆಸಿದರು.

ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಈಗ ಆಯ್ಕೆಯಾದವರು ಒಂದೇ ಒಂದು ಪಂಚಾಯಿತಿಗೆ ಹನ್ನೆರಡು ತಾಸು ಕರೆಂಟ್ ಕೊಡಲು ಆಗುತ್ತದೆಯೇ? ಎಂಬುದನ್ನು ತೋರಿಸಿಕೊಡಲಿ ಎಂದು ಸವಾಲು ಹಾಕಿದ ಮಾಜಿ ಶಾಸಕ ನಡಹಳ್ಳಿ, ನಾನು ಇಡೀ ತಾಲ್ಲೂಕಿಗೆ 12 ತಾಸು ವಿದ್ಯುತ್ ಕೊಡುತ್ತೇನೆ.

ನನ್ನ ಅವಧಿಯಲ್ಲಿ ಹತ್ತು ವಿದ್ಯುತ್ ಸ್ಟೇಷನ್ ತಂದಿದ್ದೇವೆ. ಆಗ ಏಳು ತಾಸು ಕೊಡುತ್ತಿದ್ದರು. ಈಗಲೂ ಅಷ್ಟೇ ವಿದ್ಯುತ್ ಕೊಡುತ್ತಿದ್ದಾರೆ. ಇವರಿಂದ ಎರಡೂವರೆ ವರ್ಷದಲ್ಲಿ ಹೆಚ್ಚಿಗೆ ವಿದ್ಯುತ್ ಕೊಡುವುದಕ್ಕೆ ಆಗಿಲ್ಲ ಎಂದು ಶಾಸಕ ನಾಡಗೌಡರ ಹೆಸರು ಹೇಳದೇ ಟೀಕಿಸಿದರು.

Latest News

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ಮುದ್ದೇಬಿಹಾಳ : ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಪಾಲಿಸಬೇಕು ಎಂದು ಪಿಎಸ್‌ಐ ಸಂಜಯ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದಿಂದ ಘಾಳಪೂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಆಂಧ್ರಪ್ರದೇಶದಿAದ

ಗ್ರಾಪಂ ಮಟ್ಟದ ಸೇವೆ ಅಸ್ತವ್ಯಸ್ತ ಸಾಧ್ಯತೆ:ಗ್ರಾ.ಪಂ ನೌಕರರನ್ನು ಸಮೀಕ್ಷೆಯಿಂದ ಕೈಬಿಡಲು ಒತ್ತಾಯ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ

BREAKING : ಕ್ರಿಸ್ ಮಸ್ ದಿನವೇ ರಾಜ್ಯದಲ್ಲಿ ಘೋರ ದುರಂತ : ಭೀಕರ ಅಪಘಾತದಲ್ಲಿ 17 ಕ್ಕೂ ಹೆಚ್ಚು ಮಂದಿ ದುರ್ಮರಣ

ಚಿತ್ರದುರ್ಗ : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 17 ಕ್ಕೂ ಹೆಚ್ಚು

ಬ್ರಿಲಿಯಂಟ್ ಕಲಾವೈಭವದಲ್ಲಿ ಗಮನ ಸೆಳೆದ ಭವ್ಯ ವೇದಿಕೆ; ಮನಸ್ಸಿಗೆ ಮುದ ನೀಡಿದ ಮಕ್ಕಳ ಸಾಂಸ್ಕೃತಿಕ ವೈಭವ

ಬ್ರಿಲಿಯಂಟ್ ಕಲಾವೈಭವದಲ್ಲಿ ಗಮನ ಸೆಳೆದ ಭವ್ಯ ವೇದಿಕೆ; ಮನಸ್ಸಿಗೆ ಮುದ ನೀಡಿದ ಮಕ್ಕಳ ಸಾಂಸ್ಕೃತಿಕ ವೈಭವ

ತಾಳಿಕೋಟಿ : ತಾಲ್ಲೂಕಿನ ಮೈಲೇಶ್ವರ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶುಕ್ರವಾರದಿಂದ ಶಾಲೆಯಲ್ಲಿ ಎರಡು ದಿನಗಳ ಕಲಾ ವೈಭವ-2026ರ ಮೊದಲ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಬ್ರಿಲಿಯಂಟ್ ಶಾಲೆಯ 2026 ನೇ ಸಾಲಿನ ಕಲಾ ವೈಭವಕ್ಕೆಂದು ಸಿದ್ಧಪಡಿಸಿದ್ದ ಭವ್ಯ ವೇದಿಕೆ ಸಾರ್ವಜನಿಕರ,ಪಾಲಕರು,ವಿದ್ಯಾರ್ಥಿಗಳು ,ಅಧಿಕಾರಿಗಳ ಗಮನ ಸೆಳೆಯುವಂತಿತ್ತು.ಸಾಮಾನ್ಯವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ,ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಸರಕಾರಿ

ಮೈಲೇಶ್ವರದ ಬ್ರಿಲಿಯಂಟ್ ನಲ್ಲಿ ಕಲಾ ವೈಭವ:                  ಮಕ್ಕಳಲ್ಲಿ ಸಂಸ್ಕಾರ ವೃದ್ಧಿಸುವ ಕಾರ್ಯವಾಗಲಿ-ಬಿ.ಎಸ್.ಸಾವಳಗಿ

ಮೈಲೇಶ್ವರದ ಬ್ರಿಲಿಯಂಟ್ ನಲ್ಲಿ ಕಲಾ ವೈಭವ: ಮಕ್ಕಳಲ್ಲಿ ಸಂಸ್ಕಾರ ವೃದ್ಧಿಸುವ ಕಾರ್ಯವಾಗಲಿ-ಬಿ.ಎಸ್.ಸಾವಳಗಿ

ತಾಳಿಕೋಟೆ : ಮಕ್ಕಳಲ್ಲಿ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಅರಿವು ಮೂಡಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು. ತಾಲ್ಲೂಕಿನ ಮೈಲೇಶ್ವರದ ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶುಕ್ರವಾರದಿಂದ ಆರಂಭಗೊAಡ ಎರಡು ದಿನಗಳ ಬ್ರಿಲಿಯಂಟ್ ಕಲಾ ವೈಭವ-2026 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬ್ರಿಲಿಯಂಟ್ ಶಾಲೆ ನಮ್ಮ ಶೈಕ್ಷಣಿಕ ವಲಯದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಅತ್ಯುತ್ತಮ ಸಾಧನೆ ತೋರುತ್ತಿದೆ.