ಮುದ್ದೇಬಿಹಾಳ : ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ತಾವು ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ತಮ್ಮ ಬಗ್ಗೆ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ದಲಿತ ಸಂಘರ್ಷ ಸಮೀತಿ ಜಿಲ್ಲಾ ಸಂಚಾಲಕ ಹರೀಶ ನಾಟೀಕಾರ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮದೇವತೆ ಜಾತ್ರಾ ಕಮೀಟಿಯಲ್ಲಿ ಇದ್ದವರು ಯಾರು ಎಂಬುದೇ ನನಗೆ ಗೊತ್ತಿಲ್ಲ. ಇವರ ಬಳಿ ಹಣ ಕೇಳಿದ್ದೇನೆ ಎಂಬುದಕ್ಕೆ ಬಹಿರಂಗವಾಗಿ ಸಾಕ್ಷಿಗಳನ್ನು ಇಡಬೇಕು. ಅದು ಬಿಟ್ಟು ಬೇಜವಾಬ್ದಾರಿಯುತ ಹೇಳಿಕೆಗಳನ್ನು ಕೊಟ್ಟರೆ ಹೋರಾಟಗಾರರ ಆತ್ಮಸ್ತೈರ್ಯ ಕುಂದುವುದಿಲ್ಲ. ಪುರಸಭೆ ಅಧ್ಯಕ್ಷರು ಜಾತಿವಾದಿಗಳಾಗಿದ್ದಾರೆ. ಕೆರೆ ದಂಡೆಯಲ್ಲಿದ್ದ ತಮ್ಮ ಜನಾಂಗದವರ ಅಂಗಡಿ, ಮನೆಗಳನ್ನು ತೆರವು ಮಾಡದೇ ಮೃದು ಧೋರಣೆ ಅನುಸರಿಸಿದ್ದು ಇತರೆ ಜನಾಂಗದವರಿಗೆ ಅನ್ಯಾಯ ಮಾಡಿದ್ದಾರೆ.
ಎಸ್.ಸಿ., ಎಸ್ಟಿ ಜನಾಂಗದವರ ಮನೆಗಳನ್ನು ಒಡೆದು ಹಾಕಿದ್ದಾರೆ ಎಂದು ಆರೋಪಿಸಿದರು.
ನನ್ಮ 35 ವರ್ಷದ ಹೋರಾಟದ ಬದುಕಿನಲ್ಲಿ ಯಾರ ಬಳಿಯೂ ಕೈಚಾಚಿಲ್ಲ. ನನ್ನ ಗುತ್ತಿಗೆದಾರಿಕೆ ಕೆಲಸದಿಂದ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇನೆ. ಪುರಸಭೆ ಅಧ್ಯಕ್ಷರು ಯಾರೊಬ್ಬರ ಬಗ್ಗೆ ಮಾತನಾಡಬೇಕಾದರೆ ವಿಚಾರಿಸಿ ಎಲ್ಲ ಸಂಗತಿಗಳನ್ನು ತಿಳಿದುಕೊಂಡು ಮಾತನಾಡಬೇಕಿತ್ತು. ಆದರೆ, ಇವರೊಬ್ಬ ಜಾತಿವಾದಿ ಎಂದು ಆರೋಪಿಸಿದರು.
ಪುರಸಭೆಯಲ್ಲಿ ದಲಿತ ಸಮಾಜದ ನೌಕರರನ್ನು ಹಗುರವಾಗಿ ಮಾತನಾಡಿಸುತ್ತಾರೆ.ಜಾತಿ ಎತ್ತಿ ಮಾತನಾಡುತ್ತಾರೆ. ಮಾಡಿದ ಆರೋಪ ಸಾಬೀತು ಮಾಡದಿದ್ದರೆ ಅಧ್ಯಕ್ಷರ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದವರು ಎಂದು ದೂರಿದರು. ಆರೋಪ ಸಾಬೀತಾಗದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.