ಕೊಪ್ಪಳ: ಯಾದಗಿರಿಯಲ್ಲಿ ಸಾವನ್ನಪ್ಪಿದ ಪಿಎಸ್ಐ ಪರಶುರಾಮ ಮನೆಗೆ ಗೃಹ ಸಚಿವರ ಭೇಟಿಗೆ ಕುಟುಂಭಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಪರಶುರಾಮ್ ಸಾವಿಗೆ ಕಾರಣರಾದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗನ ಬಂಧನ ಮಾಡದೆ ಸಚಿವರು ತಮ್ಮ ಮನೆಗೆ ಬರೋದು ಬೇಡ. ಒಂದು ವೇಳೆ ಬಂಧಿಸದ ಬಂದರೆ, ಗೃಹ ಸಚಿವರಿಗೇ ಘೇರಾವ್ ಹಾಕ್ತಿವಿ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
ಪರಶುರಾಮ ಸಾವಿಗೆ ಕಾರಣವಾದವರನ್ನ ರಕ್ಷಣೆ ಮಾಡಿ ನಮಗೆ ಸಾಂತ್ವನ ಹೇಳೋದು ಬೇಡ. ಅವರನ್ನ ಬಂಧನ ಮಾಡಿ ನಮ್ಮ ಮನೆಗೆ ಬರೋದಾದ್ರೆ ಬರಲಿ. ಸಿಐಡಿ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಸಿಬಿಐಗೆ ಪ್ರಕರಣ ನೀಡಬೇಕು. ನಾವು ಯಾರೂ ಸಿಬಿಐ ತನಿಖೆ ಮಾಡಿ ಅಂತ ಹೇಳಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.