IND vs SA: ಕಿಂಗ್ ಕೊಹ್ಲಿ ಸಲಹೆ ಲೆಕ್ಕಿಸದ ಕನ್ನಡಿಗ ರಾಹುಲ್; ರೋಹಿತ್ ರಿಯಾಕ್ಷನ್ ವೈರಲ್

IND vs SA: ಕಿಂಗ್ ಕೊಹ್ಲಿ ಸಲಹೆ ಲೆಕ್ಕಿಸದ ಕನ್ನಡಿಗ ರಾಹುಲ್; ರೋಹಿತ್ ರಿಯಾಕ್ಷನ್ ವೈರಲ್

ವಿಶಾಖಪಟ್ಟಣ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat kohli) ಅವರು ಮೈದಾನದಲ್ಲಿ ಕ್ಷೇತ್ರರಕ್ಷಣೆಯ ವೇಳೆ ಸದಾ ಸಕ್ರಿಯರಾಗಿಯೇ ಇರುತ್ತಾರೆ ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ಸಂಗತಿ. ಹಾಗೇ ಓರ್ವ ಅನುಭವಿ ಆಟಗಾರನಾಗಿ ನಾಯಕರೊಂದಿಗೆ ತಮ್ಮ ಸಲಹೆ ಸೂಚನೆಗಳನ್ನು ಹಂಚಿಕೊಳ್ಳಲು ಎಂದಿಗೂ ಹಿಂಜರಿಯುವುದಿಲ್ಲ. IND vs SA Match

ಹೌದು, ಪ್ರಸ್ತುತ ವಿಶಾಖಪಟ್ಟಣದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಇಂತಹದೊಂದು ಘಟನೆ ನಡೆಯಿತು. ಈ ವೇಳೆ ರೋಹಿತ್ ರಿಯಾಕ್ಷನ್ ಭಾರಿ ವೈರಲ್ ಆಗುತ್ತಿದೆ.

ಇದಕ್ಕೆ ಕಾರಣ ಕೊಹ್ಲಿ ಅವರ ಸಲಹೆಯನ್ನು ಕ್ಯಾಪ್ಟನ್ ಕೆ.ಎಲ್. ರಾಹುಲ್ ಒಪ್ಪಲಿಲ್ಲ. ಈ ವೇಳೆ ಮಗದೋರ್ವ ಮಾಜಿ ನಾಯಕ ರೋಹಿತ್ ಶರ್ಮಾ ಅವರ ರಿಯಾಕ್ಷನ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.

ಏನಿದು ಅಂಥ ಘಟನೆ?

ಭಾರತದ ಕ್ಷೇತ್ರರಕ್ಷಣೆ ವೇಳೆ ಈ ಘಟನೆ ನಡೆದಿತ್ತು. ಸ್ಲಿಪ್‌ನಲ್ಲಿ ಎರಡು ಫೀಲ್ಡರ್‌ಗಳನ್ನು ಇರಿಸುವಂತೆ ಕೊಹ್ಲಿ ಸಲಹೆ ನೀಡುತ್ತಾರೆ. ಆದರೆ ಕೊಹ್ಲಿ ಸಲಹೆ ನಿರಾಕರಿಸಿದ ರಾಹುಲ್, ತಮ್ಮ ಸ್ಥಾನಕ್ಕೆ ಮರಳುವಂತೆ ಸೂಚಿಸುತ್ತಾರೆ. ಬಳಿಕ ಬಲಗಡೆ ತಿರುಗಿ ರೋಹಿತ್ ಅವರಲ್ಲಿ ಮುಂದೆ ಬರುವಂತೆ ಸನ್ನೆ ಮಾಡುತ್ತಾರೆ. ಅಲ್ಲೆ ಹತ್ತಿರದಲ್ಲಿ ಇವನ್ನೆಲ್ಲ ಗಮನಿಸುತ್ತಲೇ ಇದ್ದ ರೋಹಿತ್ ಶರ್ಮಾ ನಗುಮುಖದಿಂದಲೇ ಕಾಣಿಸುತ್ತಾರೆ.

ಅಂದ ಹಾಗೆ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿದ ಭಾರತ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿದೆ.

Latest News

ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಕದನಕ್ಕೆ ಮಹೂರ್ತ ಫಿಕ್ಸ್..

ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಕದನಕ್ಕೆ ಮಹೂರ್ತ ಫಿಕ್ಸ್..

ಬೆಂಗಳೂರು: ರಾಜ್ಯದಲ್ಲಿ ಇಬ್ಬರು ಶಾಸಕರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ

ಟಗರಿನ ಕಾಳಗ ಪ್ರಮುಖ ಆಕರ್ಷಣೆ:                              ಮುದ್ದೇಬಿಹಾಳ : ಮಾ.18 ರಂದು ಪಿಲೇಕೆಮ್ಮ ದೇವಿ ಜಾತ್ರಾ ಮಹೋತ್ಸವ

ಟಗರಿನ ಕಾಳಗ ಪ್ರಮುಖ ಆಕರ್ಷಣೆ: ಮುದ್ದೇಬಿಹಾಳ : ಮಾ.18 ರಂದು ಪಿಲೇಕೆಮ್ಮ ದೇವಿ ಜಾತ್ರಾ ಮಹೋತ್ಸವ

ಮುದ್ದೇಬಿಹಾಳ : ಪಟ್ಟಣದ ಪಿಲೇಕೆಮ್ಮ ನಗರದಲ್ಲಿರುವ ಪಿಲೇಕೆಮ್ಮ ದೇವಿ ಜಾತ್ರಾಮಹೋತ್ಸವ ಮಾ.18 ಹಾಗೂ 19ರಂದು

ಮಾ.15 ರಂದು ಕಾಶಿನಕುಂಟಿಯಲ್ಲಿ ಇಫ್ತಾರಕೂಟ

ಮಾ.15 ರಂದು ಕಾಶಿನಕುಂಟಿಯಲ್ಲಿ ಇಫ್ತಾರಕೂಟ

ಮುದ್ದೇಬಿಹಾಳ : ರಂಜಾನ್ ಹಬ್ಬದ ನಿಮಿತ್ಯ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಮಾ.15 ರಂದು ಸಂಜೆ

ಮುದ್ದೇಬಿಹಾಳ : ಬಸ್ ನಿಲ್ದಾಣದ ಪಕ್ಕದಲ್ಲೇ ಪೊಲೀಸ್ ಠಾಣೆ ಆರಂಭ-ನಾಡಗೌಡ

ಮುದ್ದೇಬಿಹಾಳ : ಬಸ್ ನಿಲ್ದಾಣದ ಪಕ್ಕದಲ್ಲೇ ಪೊಲೀಸ್ ಠಾಣೆ ಆರಂಭ-ನಾಡಗೌಡ

ಮುದ್ದೇಬಿಹಾಳ : ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹಳೇ ಸಿಪಿಐ ಕ್ವಾಟರ‍್ಸ್ನಲ್ಲಿ ಪೊಲೀಸ್ ಠಾಣೆಯನ್ನು

ಜನ್ಮದಿನದ ಆಚರಣೆಗಳ ನೆಪದಲ್ಲಿ ದುಂದುವೆಚ್ಚ ಬೇಡ-ಕಾಶೀಬಾಯಿ ರಾಂಪೂರ

ಜನ್ಮದಿನದ ಆಚರಣೆಗಳ ನೆಪದಲ್ಲಿ ದುಂದುವೆಚ್ಚ ಬೇಡ-ಕಾಶೀಬಾಯಿ ರಾಂಪೂರ

ಮುದ್ದೇಬಿಹಾಳ : ಜನ್ಮದಿನ,ಮದುವೆ ವಾರ್ಷಿಕೋತ್ಸವ ಹಾಗೂ ಇನ್ನೀತರ ವಯಕ್ತಿಕ ಶುಭ ಸಂದರ್ಭಗಳಲ್ಲಿ ದುಂದುವೆಚ್ಚ ಮಾಡದೇ ನಾಲ್ಕು ಜನ ಹಸಿದವರಿಗೆ ಅನ್ನದಾನ ಮಾಡಿದರೆ ಅವರಿಗೆ ಹೊಟ್ಟೆ ತುಂಬಿಸಿದ ಪುಣ್ಯ ನಮಗೆ ದೊರಕುತ್ತದೆ ಎಂದು ಬಿಜೆಪಿ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಕಾಶೀಬಾಯಿ ಎಸ್.ರಾಂಪೂರ ಹೇಳಿದರು. ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಗುರುವಾರ ಲಯನ್ಸ್ ಕ್ಲಬ್ ಸಹಯೋಗದಲ್ಲಿ ತಮ್ಮ ಜನ್ಮದಿನದ ನಿಮಿತ್ಯ ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳು, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕೈಗೊಂಡು ಅವರು ಮಾತನಾಡಿರು.ಹಬ್ಬ ಹಾಗೂ

ಮುದ್ದೇಬಿಹಾಳ : ಮಾ.15 ರಂದು ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್

ಮುದ್ದೇಬಿಹಾಳ : ಮಾ.15 ರಂದು ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್

ಮುದ್ದೇಬಿಹಾಳ : ಪಟ್ಟಣದ ವಿದ್ಯಾನಗರದ ಶಿರವಾಳ ಲೇಔಟ್‌ದಲ್ಲಿರುವ ಪ್ರಗತಿ ಜೆಸಿ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಚಿನ್ಮಯ ಜೆಸಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಇದೇ ಪ್ರಥಮ ಬಾರಿಗೆ ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ-2026-27 ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಅಧ್ಯಕ್ಷ ಡಾ.ವೀರೇಶ ಪಾಟೀಲ ಹೇಳಿದರು. ಪಟ್ಟಣದ ಚಿನ್ಮಯ ಜೆಸಿ ಶಾಲೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.4-9 ತರಗತಿ ಮಕ್ಕಳಿಗಾಗಿ ಮಾ.15 ರಂದು ಬೆಳಗ್ಗೆ 11 ರಿಂದ 12.30ರವರೆಗೆ