ಮುದ್ದೇಬಿಹಾಳ : ತಾಲ್ಲೂಕಿನ ಇಂಗಳಗೇರಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಪ್ರಕಾಶ ಮಾಲಗತ್ತಿ ಒಂದು ಮತದ ಅಂತರದಿAದ ಪೀರಣ್ಣಿ ಕೆಳಗಿನಮನಿ ಅವರ ವಿರುದ್ಧ ಜಯಸಾಧಿಸಿದರು.
ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಚುನಾವಣೆ ಪ್ರಕ್ರಿಯೆಲ್ಲಿ 15 ಸದಸ್ಯ ಬಲದಲ್ಲಿ ಎಲ್ಲ ಸದಸ್ಯರು ಹಾಜರಾಗಿದ್ದರು.ಎರಡೂ ಬಣದವರು ಕಾಂಗ್ರೆಸ್ ಪಕ್ಷದ ಬೆಂಬಲಿತರೇ ಆಗಿದ್ದರೂ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಮಾಲಗತ್ತಿ, ಪಿರಣ್ಣಿ ಕೆಳಗಿನಮನಿ ನಾಮಪತ್ರ ಸಲ್ಲಿಸಿದ್ದರು.ಅದರಲ್ಲಿ ಚುನಾವಣಾಧಿಕಾರಿಯೂ ಆಗಿದ್ದ ತಾಪಂ ಇಒ ವೆಂಕಟೇಶ ವಂದಾಲ, ಸದಸ್ಯರ ಸಹಮತದೊಂದಿಗೆ ಗೌಪ್ಯ ಮತದಾನ ಮಾಡುವ ತೀರ್ಮಾನದಂತೆ ಸದಸ್ಯರು ಗೌಪ್ಯವಾಗಿ ಮತ ಚಲಾಯಿಸಿದರು.ಅದರಲ್ಲಿ ಪ್ರಕಾಶ ಮಾಲಗತ್ತಿ ಅವರಿಗೆ 8, ಪೀರಣ್ಣಿ ಕೆಳಗಿನಮನಿ ಅವರಿಗೆ 7 ಮತಗಳು ಲಭಿಸಿ ಸೋಲನುಭವಿಸಿದರು.
ಉಪಾಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿದ್ದರಿಂದ ಶೀಲವಂತಿ ಮಾದರ ಒಬ್ಬರೇ ಸದಸ್ಯೆಯಾಗಿದ್ದು ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.ಚುನಾವಣಾ ಕಾರ್ಯಕ್ಕೆ ಪಿಡಿಒ ಮುಕ್ಕಣ್ಣ ನಾಯಕ,ಕಾರ್ಯದರ್ಶಿ ಜಿ.ಎಲ್.ಬಿರಾದಾರ,ಸಿಬ್ಬಂದಿ ಎಸ್.ಆಯ್.ಹೆಬ್ಬಾಳ,ಬಿ.ಎಲ್.ಮಾದರ,ಸಿ.ಎಸ್.ಬೇವಿನಗಿಡ,ಸಂಗಪ್ಪ ತಳವಾರ,ಕಾಶೀನಾಥ ಮಾದರ ಸಹಕಾರ ನೀಡಿದರು.
ಚುನಾವಾಣಾಧಿಕಾರಿಯೊಂದಿಗೆ ವಾಗ್ವಾದ :
ಪರಾಜಿತ ಅಭ್ಯರ್ಥಿ ಪಿರಣ್ಣಿ ಕೆಳಗಿನಮನಿ ಚುನಾವಣೆಯಲ್ಲಿ ತಮ್ಮ ಜೊತೆಗೆ ಗುರುತಿಸಿಕೊಂಡಿದ್ದ ಸದಸ್ಯರೊಬ್ಬರನ್ನು ಹೈಜಾಕ್ ಮಾಡಲಾಗಿದೆ ಎಂದು ಆರೋಪಿಸಿ ಗೌಪ್ಯ ಮತದಾನದ ವೇಳೆ ದಾರಿ ತಪ್ಪಿಸಲಾಗಿದೆ ಎಂದು ಚುನಾವಣಾಧಿಕಾರಿ ವೆಂಕಟೇಶ ವಂದಾಲ ಅವರೊಂದಿಗೆ ವಾಗ್ವಾದ ನಡೆಸಿದರು.ಚುನಾವಣಾಧಿಕಾರಿ ವಂದಾಲ ಚುನಾವಣಾ ಪ್ರಕ್ರಿಯೆಗಳ ಕುರಿತು ಆಕ್ರೋಶಗೊಂಡಿದ್ದ ಕೆಳಗಿನಮನಿ ಬೆಂಬಲಿಗರಿಗೆ ಮನವರಿಕೆ ಮಾಡಿದ ಬಳಿಕ ಪ್ರತಿಭಟಿಸಲು ಮುಂದಾದವರು ಸಮಾಧಾನಗೊಂಡರು.ಪಿಎಸೈ ಜ್ಯೋತಿ ಖೋತ ,ಎ.ಎಸ್.ಐ ಪಿ.ಬಿ.ದೊಡಮನಿ, ಸಿಬ್ಬಂದಿ ಬಿಗಿ ಬಂದೋಬಸ್ತ್ ವಹಿಸಿದ್ದರು.







