ಯಾವುದೇ ಕಾರ್ಯ ಮಾಡುವದು ಅಸಾಧ್ಯವಾದುದಲ್ಲ

ಯಾವುದೇ ಕಾರ್ಯ ಮಾಡುವದು ಅಸಾಧ್ಯವಾದುದಲ್ಲ

ಬೀಳಗಿ: ಜಗತ್ತಿನಲ್ಲಿ ಸಮಾಜದ ಒಳತಿಗಾಗಿ ಸತ್ಕಾರ್ಯ ಮಾಡುವ ಮನಸ್ಸು ಸದ್ಭಕ್ತರು ಶ್ರದ್ಧಾ ಭಕ್ತಿಯಿಂದ ಸಂಕಲ್ಪ ಮಾಡಿ ಭಕ್ತರ ಭಕ್ತಿ, ಭಗವಂತನ ಶಕ್ತಿ ಒಂದಾದರೇ ಯಾವುದೇ ಕಾರ್ಯ ಮಾಡುವದು ಅಸಾಧ್ಯವಾದುದಲ್ಲ ಎಂದು ಜಮಖಂಡಿ ಕಲ್ಯಾಣ ಹಿರೇಮಠದ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ತಾಲೂಕಿನ ನಾಗರಾಳ ಗ್ರಾಮದಲ್ಲಿ ಯಾವುದೇ ರಾಜಕಾರಣಿಗಳಿಂದ ಹಾಗೂ ಸರಕಾರದಿಂದ ವಂತಿಗೆ ಸ್ವೀಕರಿಸದೆ ದಿಗಂಭರೇಶ್ವರಮಠದ ಸದ್ಭಕ್ತರು ಸ್ವಂತ ದೇಣಿಗೆ ಸಂಗ್ರಹಿಸಿ 50 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಿದ ಕಪ್ಪರ ಪಡಿಯಮ್ಮ ತಾಯಿ ಸಭಾ ಭವನವನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ನಾವು ಯಾವುದೇ ಆಸ್ತಿಪಾಸ್ತಿ ಗಳಿಸಿದರೂ ನಮ್ಮ ಅಂತ್ಯವಾದಾಗ ನಮ್ಮ ಹಿಂದೆ ಬರುವದಿಲ್ಲ ಆದರೇ ನಾವು ಸಮಾಜದ ಅಭಿವೃದ್ದಿಗಾಗಿ, ಧಾನ ಧರ್ಮ ಸತ್ಕಾರ್ಯಗಳು, ಪರೋಪಕಾರ ಸೇವೆ ಮಾಡಿದರೇ, ಅದೇ ಸೇವೆ ಭಗವಂತನಿಗೆ ಅರ್ಪಿತವಾಗುತ್ತದೆ ಇದಕ್ಕೆ ಸಾಕ್ಷಿ ನಾಗರಾಳದ ದಿಗಂಬರೇಶ್ವರ ಮಠದ ಸದ್ಭಕರ ಸೇವೆ ಎಂದರು.

ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಾತ್ಮರು, ಶರಣರು, ಸಂತರು, ಶಿವಯೋಗಿಗಳು ಯಾವ ಕ್ಷೇತ್ರದಲ್ಲಿ ತಮ್ಮ ಪಾದಸ್ಪರ್ಶ ಮಾಡುತ್ತಾರೊ ಅದು ಪುಣ್ಯಕ್ಷೇತ್ರವಾಗುತ್ತದೆ.ಇಂದಿನ ಜಗತ್ತಿನಲ್ಲಿ ಕ್ಷಣ ಕ್ಷಣಕ್ಕೂ ನಾವೆಲ್ಲ ಜನರು ಅರಿತು ಅರಿಯದೇ ಮಾಡಿದ ತಪ್ಪುಗಳನ್ನು ಇಂತಹ ಪುಣ್ಯ ಕ್ಷೇತ್ರಗಳಗೆ ಆಗಮಿಸಿ ಪುಣ್ಯ ಕಾರ್ಯಗಳನ್ನು ಮಾಡಿ ಕಳೆದುಕೊಳ್ಳಬೇಕು ಎಂದರು.

ನಾಗರಾಳ ವಿಗಂಬರೇಶ್ವರ ಮಠ ತನ್ನದೆಯಾದ ದೈವಿಕ ಶಕ್ತಿಯನ್ನು ಹೊಂದಿದೆ. ಸಿದ್ದಿ ಪುರುಷರಾಗಿರುವಂತ ದಿಗಂಬರೇಶ್ವರರು ಸಿದ್ಧಸಾಧಕರಾಗಿದ್ದರು ಈಗಿನ ಶ್ರೀ ಮಠದ ಪೀಠಾಧಿಕಾರಿ ಶೇಷಪ್ಪಯ್ಯ ಸ್ವಾಮಿಗಳು ಭಕ್ರರಿಂದ ಯಾವುದೇ ಫಲಾಪೇಕ್ಷೆ ಬಯಸದೇ ಶ್ರೀ ಮಠ ಇದು ಭಕ್ತರ ಮಠ ನಾನು ಭಗವಂತನ ಸೇವಕ ಎಂದು ತ್ಯಾಗ ಮನೋಭಾವನೆಯುಳ್ಳವರಾಗಿದ್ದು ಸದ್ಭಕ್ತರಿಗೆ ಸದಾ ಒಳಿತನ್ನು ಬಯಸುತ್ತಾರೆ ಎಂದು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯರು ಹೇಳಿದರು.

ಈ ಸಂದರ್ಭದಲ್ಲಿ ಇಂಗಳೇಶ್ವರದ ವಿರಕ್ತಮಠದ ಚನ್ನಬಸವ ಸ್ವಾಮೀಜಿ,ಬೀಳಗಿ ಸೋಮಪ್ಪಯ್ಯನ ಮಠದ ಚನ್ನಬಸವ ಸ್ವಾಮೀಜಿ,ಬನಹಟ್ಟಿ ಹಿರೇಮಠ ಶರಣಬಸವ ಶಿವಾಚಾರ್ಯ ಸ್ವಾಮೀಜಿ,, ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ,ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯ ನಾಗರಾಳ ದಿಗಂಬರೇಶ್ವರ ಮಠದ ಶೇಷಪ್ಪಯ್ಯ ಗುರುನಿಂಗಪ್ಪಯ್ಯ ಸ್ವಾಮೀಜಿ, ನಿಂಗಪ್ಪಯ್ಯ ಗುರುಶೇಷಪ್ಪಯ್ಯ ಸ್ವಾಮೀಜಿ ಸುನಗದ ಅನ್ನಪೂರ್ಣೇಶ್ವರಿ ಬೃಹನ್ಮಠ ಶಿವಾನಂದ ಸ್ವಾಮೀಜಿ, ಬೀಳಗಿ ಹುಚ್ಚಪ್ಪಯ್ಯನ ಮಠದ ಫಕೀರಯ್ಯ ಸ್ವಾಮೀಜಿ, ಸಿದ್ದಾಪೂರ ಮಾನಪ್ಪಯ್ಯ ಹುಚ್ಚಪ್ಪಯ್ಯ ಸ್ವಾಮೀಜಿ,ಮತ್ತು ನಾಗರಾಳ ಸಕಲ ಸದ್ಭಕ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕಿಂತ ಮೊದಲು ಕಪ್ಪರ ಪಡಿಯಮ್ಮಗೆ ರುದ್ರಾಭಿಷೇಕ, ಹೋಮ-ಹವನ, ಸಕಲ ಧಾರ್ಮಿಕ ವಿಧಿವಿಧಾನಗಳು ನಡೆದವು. ನಂತರ ಸಕಲ ವಾಧ್ಯವೃಂದದೊಂದಿಗೆ 501 ಸುಮಂಗಲಿಯರಿಂದ ಕುಂಭ ಮೇಳ ಹಾಗೂ ನಾಡದೇವಿ ಮೂರ್ತಿಯ ಭವ್ಯ ಮರುವಣಿಗೆಯು ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಮಠದ ಆವರಣಕ್ಕೆ ಆಗಮಿಸಿತು. 1001 ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

Latest News

JavaScript isn’t montys millions slot free spins readily available

ArticlesTotally free Revolves | montys millions slot free spinsTrendy Fruits Slot

ಕೆಲವು ಸ್ವಾಮೀಜಿಗಳು ಮಾತನಾಡಿದಂತೆ ನಡೆದುಕೊಳ್ಳುವುದಿಲ್ಲ-ಮಹಾಂತೇಶ ಬಿರಾದಾರ

ಕೆಲವು ಸ್ವಾಮೀಜಿಗಳು ಮಾತನಾಡಿದಂತೆ ನಡೆದುಕೊಳ್ಳುವುದಿಲ್ಲ-ಮಹಾಂತೇಶ ಬಿರಾದಾರ

ಮುದ್ದೇಬಿಹಾಳ : ಕೆಲವು ಸ್ವಾಮೀಜಿಗಳಿರುತ್ತಾರೆ.ಜನರಿಗೆ ತಾವು ಯೂಟ್ಯೂಬ್ , ಸೋಷಿಯಲ್ ಮೀಡಿಯಾದಲ್ಲಿ ಪುಕ್ಕಟೆ ಉಪದೇಶ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ಮುದ್ದೇಬಿಹಾಳ : ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಪಾಲಿಸಬೇಕು ಎಂದು ಪಿಎಸ್‌ಐ ಸಂಜಯ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದಿಂದ ಘಾಳಪೂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಆಂಧ್ರಪ್ರದೇಶದಿAದ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಮುದ್ದೇಬಿಹಾಳ : ಸಿರಿವಂತರು ಸಿರಿವಂತಿಕೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಬಡವರ ಕುರಿತು ಮಾತನಾಡುವುದು ಅಪರೂಪ.ಆದರೆ ಬಡವನ ಸ್ನೇಹ ಮಾಡಿದರೆ ಆತ ಬದುಕಿನ ಅನುಭವದ ಪಾಠ ಹೇಳುತ್ತಾನೆ ಎಂದು ಹಿರಿಯ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಹೇಳಿದರು. ಪಟ್ಟಣದ ಗಣೇಶ ನಗರದಲ್ಲಿ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಅವರ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದಾಶಿವ ಮಠ ಹಾಗೂ ಮೊಹ್ಮದ ರಫೀಕ ಶಿರೋಳ ಅವರ ತಂದೆಯವರು ನನಗೆ ಆಪ್ತರು.ಅವರ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಮುದ್ದೇಬಿಹಾಳ : ಮೂಲತಃ ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರು ತಾಂಡಾದ ಡಾ.ಮೋತಿಲಾಲ ರೂ.ಚವ್ಹಾಣ ಅವರನ್ನು ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ಡಾ. ಎ.ಆರ್. ಗೋವಿಂದಸ್ವಾಮಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ತೆರವಾಗಿದ್ದ ಸ್ಥಾನಕ್ಕೆ ಡಾ. ಮೋತಿಲಾಲ ಚವ್ಹಾಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಡಾ. ಮೋತಿಲಾಲ ರೂ. ಚವ್ಹಾಣ