DKSvsHDK: ಕುಮಾರಸ್ವಾಮಿಯ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ: ಡಿಕೆ ಶಿವಕುಮಾರ್

DKSvsHDK: ಕುಮಾರಸ್ವಾಮಿಯ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ: ಡಿಕೆ ಶಿವಕುಮಾರ್

ಕನಕಪುರ, (ಆಗಸ್ಟ್.11); ಕುಮಾರಸ್ವಾಮಿ ನನ್ನ ಬಗ್ಗೆ ಏನೆಲ್ಲಾ ಹೇಳಿದರು? ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಅವರ ಜತೆ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ನಾನು ಬಹಳ ತಾಳ್ಮೆಯಿಂದ ಇದ್ದೆ. ಅವರನ್ನು ಅಣ್ಣ ಎಂದು ಸ್ವೀಕರಿಸಿದ್ದೆ, ಅವರು ಈ ರೀತಿ ಮಾತನಾಡಿದರೆ ನಾನು ಹೆದರಿ ಕುಳಿತುಕೊಳ್ಳಲು ಸಾಧ್ಯವೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಕನಕಪುರದ ನಿವಾಸದಲ್ಲಿ ಕನಕಪುರ, ರಾಮನಗರ, ಚನ್ನಪಟ್ಟಣ ಜನರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಜಿಲ್ಲೆಯ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ನನ್ನ ನೋಡಲು ಬೆಂಗಳೂರಿಗೆ ಬರುವುದನ್ನು ತಪ್ಪಿಸುವ ಸಲುವಾಗಿ ಇನ್ನು ಮುಂದೆ ತಿಂಗಳಲ್ಲಿ ಪ್ರತಿ ಎರಡು ಮತ್ತು ಮೂರನೇ ಶನಿವಾರ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಈ ವೇಳೆ ಕುಮಾರಸ್ವಾಮಿ ಹಾಗೂ ನಿಮ್ಮ ನಡುವೆ ವೈಯಕ್ತಿಕ ನಿಂದನೆಗಳು ಹೆಚ್ಚುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಇದನ್ನು ಆರಂಭಿಸಿದ್ದು ಯಾರು?, ಕುಮಾರಸ್ವಾಮಿಯ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಗುಡುಗಿದರು.

ಕಳೆದ 2-3 ವರ್ಷಗಳಿಂದ ಕುಮಾರಸ್ವಾಮಿಯಟೀಕೆಗಳನ್ನು ಸಹಿಸಿಕೊಂಡಿದ್ದೆ. ಮಗನ ಸೋಲಿನ ನಂತರ ಅವರ ಮಾತು ಮಿತಿಮೀರಿದ್ದು ನಾನು ಎಷ್ಟು ದಿನ ಸಹಿಸಲಿ, ಅವರ ಹೇಳಿಕೆಗಳಿಗೆ ನಾನು ಉತ್ತರ ನೀಡಿದ್ದೇನೆ, ನನ್ನ ವಿರುದ್ಧ ಅವರ ಬಳಿ ಇರುವ ದಾಖಲೆಗಳನ್ನ ಆದಷ್ಟು ಬೇಗ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.

ಸದನದಲ್ಲಿ ಚರ್ಚೆ ಮಾಡಲಿ ನನ್ನ ವಿರುದ್ದ ಇಲ್ಲ- ಸಲ್ಲದ ಆರೋಪಗಳನ್ನು ಹಾದಿ-ಬೀದಿಯಲ್ಲಿ ಮಾಡುತ್ತಾ ಕಾಲ ಕಳೆಯುವ ಬದಲು ಸದನದಲ್ಲಿ ಚರ್ಚೆ ಮಾಡಲಿ, ಎಸ್‌.ಎಂ ಕೃಷ್ಣ ಅವರ ಅಳಿಯನ ಸಾವಿಗೆ ಯಾರು ಕಾರಣ ಎಂದು ಮೈಸೂರಿನಲ್ಲಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ನಾನು ಅವರ ತಂದೆ ದೇವೇಗೌಡರ ವಿರುದ್ಧ 1985ರಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಬಂಗಾರಪ್ಪನವರ ಸಂಪುಟದಲ್ಲಿ ಸಚಿವನಾಗಿದ್ದೆ, ನನ್ನ ಹಾಗೂಎಸ್.ಎಂ ಕೃಷ್ಣ ಅವರ ನಡುವಣ ಸಂಬಂಧ ಏನು ಎಂದು ಕುಮಾರಸ್ವಾಮಿಗೇನು ಗೊತ್ತು? ಅವರಿಗೆ ಹುಚ್ಚು ಹಿಡಿದಿದೆ ಎಂದು ನನಗೆ ಅನಿಸುತ್ತಿದ್ದು ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಅವರ ಪಕ್ಷದ ನಾಯಕರಿಗೆ, ಹಿತೈಷಿಗಳಿಗೆ ಹೇಳೋಣ ಎಂದು ಹೇಳಿದರು.

ನನ್ನ ವಿರುದ್ಧ ಇರುವ ದಾಖಲೆಗಳನ್ನು ಬಿಚ್ಚಿಡಲಿ, ನಾನು ವಿಧವೆಯರಿಗೆ ಗನ್ ಪಾಯಿಂಟ್ ಇಟ್ಟು ಆಸ್ತಿ ಬರೆಸ ಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪಿಸಿದ್ದು ಅವರನ್ನು ಕರೆದುಕೊಂಡು ಬಂದು ನನ್ನ ವಿರುದ್ದ ಎಫ್‌ಐ ಆರ್‌ದಾಖಲಿಸಲಿ ಎಂದು ಸವಾಲೆಸೆದರು.

ನಾನು ಯಾರಿಗೆ ಗನ್ ಪಾಯಿಂಟ್ ಇಟ್ಟು ಆಸ್ತಿ ಬರೆಸಿ ಕೊಂಡಿದ್ದೇನೆ ಹೇಳಲಿ, ಕುಮಾರಸ್ವಾಮಿ ಕೇತಗಾನಹಳ್ಳಿಯಲ್ಲಿ ದಲಿತರ ಭೂಮಿ ಲೂಟಿ ಮಾಡಿದ್ದಾರೆ ಎಂದು ಯೋಗೇಶ್ವ‌ರ್ ಮಾತನಾಡಿದ್ದಾರೆ. ಅಲ್ಲಂ ವೀರಭದ್ರಪ್ಪ ಖರೀದಿ ಮಾಡಿದ್ದ ಆಸ್ತಿಯನ್ನು ನನ್ನ ಮಗಳು ಖರೀದಿ ಮಾಡಿದ್ದಾಳೆ. ನನ್ನ ಸಾಮರ್ಥಕ್ಕೆ ಅನುಸಾರವಾಗಿ ನಾನು ಆಸ್ತಿ ಖರೀದಿ ಮಾಡುತ್ತೇನೆ, ಇನ್ನು ಮಾರಟವಾಗಲು ಸಿದ್ಧವಿರುವ ಜಾಗಗಳಿದ್ದರೆ ಹೇಳಿ ಖರೀದಿಸುತ್ತೇನೆ.

ಅವರು ಈ ಹಿಂದೆ ಏನು ಮಾತನಾಡಿದ್ದಾರೆ ಒಮ್ಮೆ ನೋಡಿ, ನನ್ನನ್ನು ಮಿಲಿಟರಿ ಬಂದು ಕರೆದುಕೊಂಡು ಹೋಗುತ್ತೆ ಎಂದು ಹೇಳಿದ್ದಾರೆ, ಅಂದರೆ ನಾನು ಮತ್ತೆ ಜೈಲಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ನಾನು ಜೈಲು ನೋಡಿರುವವನು, ನಾನು ಜೈಲಲ್ಲಿದ್ದಾಗ ಬಂದು ನನ್ನ ನೋಡಿದ್ದರು, ಜೈಲಿನ ಒಳಗೆ ನಾನು ಎಷ್ಟು ಶಕ್ತಿಯಲ್ಲಿದ್ದೆ ಎಂದು ನೋಡಿದ್ದಾರೆ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ನನ್ನ ಮೇಲೆ, ನನ್ನ ಸಹೋದರ, ತಂಗಿ, ಪತ್ನಿ ಮೇಲೆ ಅದಿರು ಕಳ್ಳತನದ ಸುಳ್ಳು ಎಫ್‌ಐಆರ್‌ದಾಖಲಿಸಿದ್ದರು. ಅದೆಲ್ಲವನ್ನು ಮರೆತು ಅವರುಮುಖ್ಯಮಂತ್ರಿಯಾಗಲು ನೆರವಾಗಿದ್ದೆ, ಆನಂತರ ನಡೆದ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ ಎಂದರು.

ನಾನು ಪ್ರಧಾನಿ, ಮುಖ್ಯಮಂತ್ರಿಯ ಮಗನಾಗಿ ರಾಜಕೀಯಕ್ಕೆ ಬಂದಿಲ್ಲ. ನಾನು ಬಡವನಲ್ಲದಿದ್ದರೂ ಮಧ್ಯಮ ವರ್ಗದ ರೈತ ಕುಟುಂಬದಿಂದ ಬಂದವನು. ನನ್ನ ಆಸ್ತಿ ಮಾಹಿತಿ ತೆರೆದ ಪುಸ್ತಕದಂತೆ. ನಾನು ಬದುಕಲು ಸಾಧ್ಯವಾಗದಂತಹ ದಾಖಲೆ ಏನಿದೆಯೋ ಅದನ್ನು ಬಿಚ್ಚಿಡಲಿ. ನಾನು ಮಾಡಬಾರದ ತಪ್ಪು ಏನುಮಾಡಿದ್ದೇನೆ ತಿಳಿಸಲಿ. ನೀನು ದೆಹಲಿಯಲ್ಲಿ ನನ್ನ ವಿರುದ್ಧ ಯಾರಿಗೆ ಯಾವ ಪತ್ರ ನೀಡಿದ್ದೀರಿ ಎಂದು ನನಗೆ ಗೊತ್ತಿದೆ. ನಿಮ್ಮ ತಂದೆ ಏನೇನು ಬರೆದಿದ್ದೀರಿ ಎಂದು ನನಗೆ ಮಾಹಿತಿ ಇದೆ,

ನನ್ನ ವಿರುದ್ಧ ದೆಹಲಿಯಲ್ಲಿ ಏನೆಲ್ಲಾ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದಿದೆ. ನಾನು ಹಾಸನದಲ್ಲಿ ಪೆನ್‌ಡ್ರೈವ್ ಹಂಚಿದ್ದೇನೆ ಎಂದು ಕುಮಾರಸ್ವಾಮಿ ಯಾವ ಆಧಾರದಲ್ಲಿ ಆರೋಪ ಮಾಡಿದರು? ನಾನು ಅಂತಹ ಕೆಲಸ ಮಾಡಲು ಮೂರ್ಖನಲ್ಲ, ನಾನು ಅದನ್ನು ಚುನಾವಣೆಗೆ ಬಳಸಿಕೊಳ್ಳುವುದಾದರೆ ನೇರವಾಗಿಯೇ ಬಳಸಿಕೊಳ್ಳುತ್ತಿದ್ದೆ ಎಂದರು.

Latest News

ಮುದ್ದೇಬಿಹಾಳ : ಜ.6 ರಂದು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಮುದ್ದೇಬಿಹಾಳ : ಜ.6 ರಂದು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಮುದ್ದೇಬಿಹಾಳ : ತಾಲ್ಲೂಕಿನ 220-110ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಬಸರಕೋಡದಿಂದ ಹಾಲಿ ಇರುವ 110

ಕೆಕೆಆರ್‌ಟಿಸಿ ನೂತನ ಘಟಕ ವ್ಯವಸ್ಥಾಪಕರಾಗಿ ಅಶೋಕಕುಮಾರ ಭೋವಿ ಅಧಿಕಾರ ಸ್ವೀಕಾರ

ಕೆಕೆಆರ್‌ಟಿಸಿ ನೂತನ ಘಟಕ ವ್ಯವಸ್ಥಾಪಕರಾಗಿ ಅಶೋಕಕುಮಾರ ಭೋವಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮುದ್ದೇಬಿಹಾಳ ಘಟಕಕ್ಕೆ

ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಚುನಾವಣೆ;                                                                                          ಠೇವಣಿ ಕಳೆದುಕೊಂಡ ಮಂಜೇಗೌಡ, ಭರ್ಜರಿ ಗೆಲುವು ಸಾಧಿಸಿದ ಆನಂದಗೌಡ

ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಚುನಾವಣೆ; ಠೇವಣಿ ಕಳೆದುಕೊಂಡ ಮಂಜೇಗೌಡ, ಭರ್ಜರಿ ಗೆಲುವು ಸಾಧಿಸಿದ ಆನಂದಗೌಡ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ ಬೆಂಗಳೂರು ಈ

ಹೆಬ್ಬಾಳ ಪಬ್ಲಿಸಿಟಿ-ಜನರಕೂಗು ನ್ಯೂಸ್ ಕ್ಯಾಲೆಂಡರ್ ಬಿಡುಗಡೆ:                                                                               ಸತ್ಯ ಸಂಗತಿಗಳಿಗೆ ಮಾಧ್ಯಮ ಧ್ವನಿಯಾಲಿ-ಸಿದ್ಧಲಿಂಗ ದೇವರು

ಹೆಬ್ಬಾಳ ಪಬ್ಲಿಸಿಟಿ-ಜನರಕೂಗು ನ್ಯೂಸ್ ಕ್ಯಾಲೆಂಡರ್ ಬಿಡುಗಡೆ: ಸತ್ಯ ಸಂಗತಿಗಳಿಗೆ ಮಾಧ್ಯಮ ಧ್ವನಿಯಾಲಿ-ಸಿದ್ಧಲಿಂಗ ದೇವರು

ತಾಳಿಕೋಟಿ : ಮಾಧ್ಯಮಗಳು ಸಮಾಜದಲ್ಲಿ ನಡೆದಿರುವ ಸತ್ಯ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದು

ಮಡಿಕೇಶ್ವರದ ಹಾಲುಮತದ ಹಿರಿಯ ಜೀವಿ ಮಲ್ಲಮ್ಮ ರೂಡಗಿ ನಿಧನ

ಮಡಿಕೇಶ್ವರದ ಹಾಲುಮತದ ಹಿರಿಯ ಜೀವಿ ಮಲ್ಲಮ್ಮ ರೂಡಗಿ ನಿಧನ

ಮುದ್ದೇಬಿಹಾಳ : ತಾಲ್ಲೂಕಿನ ಮಡಿಕೇಶ್ವರ ಗ್ರಾಮದ ನಿವಾಸಿ ಮಲ್ಲಮ್ಮ ಬಸಪ್ಪ ರೂಡಗಿ ಶುಕ್ರವಾರ ನಿಧನರಾದರು. ಅಂತ್ಯಕ್ರಿಯೆ ಜ.3 ರಂದು ಮದ್ಯಾಹ್ನ 3 ಕ್ಕೆ ಮಡಿಕೇಶ್ವರದಲ್ಲಿ ನಡೆಯಲಿದೆ. ಮೃತರು ಮುದ್ದೇಬಿಹಾಳ ಬಿಇಒ ಕಚೇರಿ ಅಧೀಕ್ಷಕಿ ಎನ್.ಬಿ.ರೂಡಗಿ,ಹಾರ್ವರ್ಡ್ ಪಿಯು ಕಾಲೇಜಿನ ಪ್ರಾಚಾರ್ಯೆ ಆರ್.ಬಿ.ರೂಡಗಿ ಅವರ ತಾಯಿಯವರು ಹಾಗೂ ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಎಂ.ನೆರಬೆಂಚಿ,ಹಿರಿಯ ವಕೀಲ ಎಸ್.ಬಿ.ಬಾಚಿಹಾಳ ಅವರ ಅತ್ತೆಯವರಾಗಿದ್ದಾರೆ. .

ಆಧಾರ ರಹಿತ ಆರೋಪಗಳಿಗೆ ಬೆಲೆ ಇಲ್ಲ:                                               ಮುದ್ದೇಬಿಹಾಳ : ಅಂಜುಮನ್ ಕಮೀಟಿಯಲ್ಲಿ ಅವ್ಯವಹಾರ ನಡೆದಿಲ್ಲ-ನಾಯ್ಕೋಡಿ

ಆಧಾರ ರಹಿತ ಆರೋಪಗಳಿಗೆ ಬೆಲೆ ಇಲ್ಲ: ಮುದ್ದೇಬಿಹಾಳ : ಅಂಜುಮನ್ ಕಮೀಟಿಯಲ್ಲಿ ಅವ್ಯವಹಾರ ನಡೆದಿಲ್ಲ-ನಾಯ್ಕೋಡಿ

ಮುದ್ದೇಬಿಹಾಳ : ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿಯ ಅಧಿಕಾರ ವಹಿಸಿಕೊಂಡ ಅವಧಿಯಿಂದ ಮುಕ್ತಾಯದ ಅವಧಿಯವರೆಗೆ ನಾವು ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದೇವೆ ಹೊರತು ಒಂದು ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿಲ್ಲ.ಅAಜುಮನ್ ಸಂಸ್ಥೆಯ ಹಿತಚಿಂತಕರು ಈಚೇಗೆ ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ನಿರಾಧಾರ ಎಂದು ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಅಧ್ಯಕ್ಷ ಅಲ್ಲಾಭಕ್ಷö್ಯ ನಾಯ್ಕೋಡಿ ಹೇಳಿದರು.ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯಲ್ಲಿ ನಡೆದಿರುವ ವ್ಯವಹಾರಗಳ ಲೆಕ್ಕಪತ್ರಗಳನ್ನು ಬಿಚ್ಚಿಟ್ಟರು. ನಮ್ಮ ಅವಧಿ ಆರಂಭವಾಗಿದ್ದೇ