It is our merit to have performed duty where Basavanna walked: CPI Sunil Savadi

ಬಸವಣ್ಣನವರು ನಡೆದಾಡಿದ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಿದ್ದು ನಮ್ಮ ಪುಣ್ಯ: ಸಿಪಿಐ ಸುನಿಲ್ ಸವದಿ

ಬಸವಣ್ಣನವರು ನಡೆದಾಡಿದ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಿದ್ದು ನಮ್ಮ ಪುಣ್ಯ: ಸಿಪಿಐ ಸುನಿಲ್ ಸವದಿ

ಹುನಗುಂದ: ಜಗಜ್ಯೋತಿ ಅಣ್ಣ ಬಸವಣ್ಣನವರು ನಡೆದಾಡಿದ ಮತ್ತು ಚಾಲುಕ್ಯರ  ಸಾಮ್ರಾಜ್ಯದ ವೀರ ಪುಲಕೇಶಿಯ ಅವರ ಪುಣ್ಯಭೂಮಿಯಲ್ಲಿ ಯಶಸ್ವಿಯಾಗಿ ಎರಡು ವರ್ಷ ಕರ್ತವ್ಯ ನಿರ್ವಹಿಸಿದ್ದು ಭಾಗ್ಯ ನಮ್ಮದು ಎಂದು ಹುನಗುಂದ ಸಿಪಿಐ ಸುನೀಲ್ ಸವದಿ ಹೇಳಿದರು.

ಪಟ್ಟಣದ ಗುರು ಭವನದಲ್ಲಿ ಗುರವಾರ ನಡೆದ ಹುನಗುಂದ ಡಿವೈಎಸ್ಪಿ  ಹಾಗೂ ಸಿಪಿಐ  ಅವರನ್ನು ಬೀಳ್ಕೋಡಿಗೆ ಸಮಾರಂಭ ಹಾಗೂ ನೂತನ ಡಿವೃಎಸ್ಪಿ ಸ್ವಾಗತ  ಕಾರ್ಯಕ್ರಮದಲ್ಲಿ ಮಾತನಾಡಿದರು. ಪೋಲೀಸ್ ಇಲಾಖೆಯು ಇದೀಗ ಪೂರ್ತಿಯಾಗಿ ಜನಸ್ನೇಹಿ ಪೋಲಿಸ್ ಆಗಿದೆ. ಸಂವಿಧಾನದ ಹಾಗೂ ಕಾನೂನಿನ ನಿಯಮಾವಳಿಯ ಚೌಕಟ್ಟಿನಲ್ಲಿ ನಾವು ಕರ್ತವ್ಯ ನಿರ್ವಹಿಸಬೇಕು. ನಮಗೆ ನಮ್ಮ ಇಲಾಖೆಯ ಮೇಲೆ ಜವಾಬ್ದಾರಿ ಬಹಳಷ್ಟು ಇರುತ್ತದೆ. ಪೋಲಿಸ್ ರು ನೊಂದವರ, ಬಡವರಿಗೆ ನ್ಯಾಯ ಕೊಡುಸುವ ಕೆಲಸ ಮಾಡಬೇಕು.
ಹೆಂಡತಿ- ಮಕ್ಕಳ ಹೊಟ್ಟೆಗಾಗಿ ಹಾಗೂ ಕುಟುಂಭದ ಉದ್ದಾರದ ಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ. ಅದು ವ್ಯರ್ಥ, ನಮಗಿರುವ ಶಕ್ತಿಯನ್ನು ವೈಯಕ್ತಿಕ ಬಳಸಿಕೊಳ್ಳದೆ, ಸಮಾಜ ಶಾಂತಿ ಸುವ್ಯವಸ್ಥೆಗೆ ಬಳಕೆ ಮಾಡಿದರೆ ಈ ಹುದ್ದೆಗೆ ಸೇರಿದ್ದು ಸಾರ್ಥಕವಾಗುತ್ತದೆ. ಸೇವೆಗೆ ಅವಕಾಶ ನೀಡಿದ ಹುನಗುಂದ ಇಲಕಲ್ಲ, ಅಮೀನಗಡದ ಭಾಗದ ಎಲ್ಲ ಸಾರ್ವಜನಿಕರಿಗೆ ನಮ್ಮ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದು ತಿಳಿಸಿದರು.

ಹುನಗುಂದ ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಮಾತನಾಡಿ, ಕಳೆದ ಎರಡು ವರ್ಷ ಅವಧಿಯಲ್ಲಿ ಹುನಗುಂದ ಉಪವಿಭಾಗ ನನಗೆ ಅತ್ಯಂತ ಖುಷಿ ತಂದಿದೆ. ಆದರೆ ನಾವು ಹೇಗೆ ಕೆಲಸ ಮಾಡುತ್ತೇವೆ, ಅಧಿಕಾರ ಬಳಸುವುದರ  ಮೂಲಕ ನಮ್ಮ ಕೆಲಸ ಮುಖ್ಯವಾಗುತ್ತದೆ.  ಸಾರ್ವಜನಿಕರು, ರಾಜಕೀಯ ಮುಖಂಡರು, ಮಾಧ್ಯಮ ಮಿತ್ರರರು ಎಲ್ಲ ಸಹಕಾರದಿಂದಲೇ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು. ಸರ್ಕಾರಿ ಸೇವೆಯಲ್ಲಿ ಬದಲಾವಣೆಯೂ ಸಹಜ ಆದರೆ ಸರ್ಕಾರ ನಿಯಮಗಳ ಮೂಲಕ ಪೋಲಿಸ್ ಇಲಾಖೆಯೂ ಬದಲಾವಣೆಯಾಗುತ್ತಿದ್ದಂತೆ ಅದರಂತೆ ನಾವು ಬದಲಾಗಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು. ನಮ್ಮ ಕೆಲಸವನ್ನು ಶ್ರದ್ದೆಯಿಂದ ಮಾಡಿದರೆ ನಮ್ಮ ಕೆಲಸ ಸಾರ್ಥಕವಾಗುತ್ತದೆ. ನಮ್ಮ ಮೇಲಾಧಿಕಾರಿಗಳು ಸಹಕಾರದಿಂದ ಎರಡು ವರ್ಷ ಉತ್ತಮ ಕೆಲಸ ಮಾಡಿದ್ದೇವೆ. ಉತ್ತಮ‌ ಸಮಾಜ ನಿರ್ಮಾಣದಲ್ಲಿ  ಪೋಲಿಸ ಇಲಾಖೆಯ ಪಾತ್ರವು ಮಹತ್ವವಿದೆ ಎಂದರು.

ನೂತನ ಡಿವೈಎಸ್ಪಿ ಸಂತೋಷ ಬನ್ನಿಟ್ಟಿ ಮಾತನಾಡಿ, ಎಲ್ಲರೂ ಮೊದಲಿನಂತೆ ನಮಗೂ ಸಹಕಾರಿ ನೀಡಿ ಸಾರ್ವಜನಿಕರ ಯಾವುದೇ ಸಮಸ್ಯೆಗೆ ಪರಿಹಾರಕ್ಕೆ ನಮ್ಮ ಇಲಾಖೆಯೂ ಸ್ಪಂದಿಸುತ್ತದೆ ಎಂದು ತಿಳಿಸಿದರು.

ಕಾನಿಪ ಅಧ್ಯಕ್ಷ ಅಮರೇಶ ನಾಗೂರ, ಕಾರ್ಯದರ್ಶಿ‌ ಮಲ್ಲಿಕಾರ್ಜುನ ಹೊಸಮನಿ, ಮಾಜಿ ಸೈನಿಕ ವಿಜಯ ದಳವಾಯಿ, ಇಳಕಲ್ಲ ಪಿಎಸ್ ಐ ಎಸ್.ಆರ್.ನಾಯಕ ಮಾತನಾಡಿದರು.

ಬದಾಮಿ ಸಿಪಿಐ  ಕರಿಯಪ್ಪ ಬನ್ನಿ , ಹುನಗುಂದ ಪಿಎಸ್ಐ ಎಸ್. ಜಿ. ಆಲದಕಟ್ಟಿ , ಅಮೀನಗಡ ಪಿಎಸ್ ಐ ಜ್ಯೋತಿ ವಾಲೀಕಾರ, ಮಂಜುನಾಥ ಪಾಟೀಲ್, ಸೇರಿದಂತೆ ಇತರರು ಇದ್ದರು.

Latest News

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಉಡುಪಿ ಅಕ್ಟೋಬರ್ ೧೦: ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಿತ ರಕ್ಷಣೆಗೆ ನಮ್ಮ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ಬೆಂಗಳೂರು : ಋತುಚಕ್ರ ರಜೆ ನೀತಿ - 2025ಕ್ಕೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮದ ರೈತ ಸಂಗಪ್ಪ ಗೌಡರ ಸಾಲದ ಬಾಧೆ ತಾಳದೇ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಮುದ್ದೇಬಿಹಾಳ : ಪಟ್ಟಣದ ಹುಡ್ಕೋಗೆ ತೆರಳುವ ದ್ವಾರದಲ್ಲಿ ಸ್ಥಾಪಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತದ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ತುಮಕೂರು, ಅ.8: ಅಸಂಘಟಿತ ವಲಯದಲ್ಲಿ ದುರ್ಬಲರಾಗಿರುವ ಕಾರ್ಮಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಆಶಾ ದೀಪ ಯೋಜನೆ, ಗಿಗ್ ಕಾರ್ಮಿಕರ ವಿಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಹೇಳಿದರು. ನಗರ ಹೊರವಲಯದ ಶ್ರೀ ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ʼತುಮಕೂರು ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ;                             ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ; ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

** ಹೆಬ್ಬಾಳ** ಮುದ್ದೇಬಿಹಾಳ : ಆಗಷ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಹಲವಾರು ಬೆಳೆಗಳು ನೀರಲ್ಲಿ ನಿಂತಿದ್ದು ಅನ್ನದಾತ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿ ಭಾಗದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬಹುತೇಕ ಎಲ್ಲ ಬೆಳೆಗಳು ಕೊಳೆತಿವೆ. ಉಳ್ಳಾಗಡ್ಡಿ, ಹತ್ತಿ, ತೊಗರಿ,ಮೆಕ್ಕೆಜೋಳ,ದ್ರಾಕ್ಷಿ,ಬಾಳೆ,ಟೊಮ್ಯಾಟೋ ಅತಿವೃಷ್ಟಿಯಿಂದ ಹೊಲದಲ್ಲಿಯೇ ಹಾಳಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ರೈತ ಬಸವರಾಜ ಕುಂಟೋಜಿ, ಅತೀವೃಷ್ಟಿಯಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ.ಮಳೆ