ಕಲಬುರಗಿ: ಅಮಾಯಕ ಯುವತಿಯರನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಪರಿಚಯಿಸಿಕೊಂಡು ಕಲಬುರಗಿಯಲ್ಲಿನ ಸರಕಾರಿ ಅಧಿಕಾರಿಗಳ, ಉದ್ಯಮಿಗಳಿಗೆ ಹನಿಟ್ರ್ಯಾಪ್ ಮಾಡಿ ಲಕ್ಷ ಲಕ್ಷ ಹಣ ವಸೂಲಿ ಮಾಡುವ ದಂಧೆ ಎಗ್ಗಿಲ್ಲದೆ ಸಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
10ಕ್ಕೂ ಅಧಿಕ ಅಮಾಯಕ ಯುವತಿಯರನ್ನು ಬಳಸಿಕೊಂಡು ಹನಿಟ್ರಾಪ್ ದಂಧೆ ಮಾಡುತ್ತಿರುವ ಗ್ಯಾಂಗ್‌ನ ರಾಜು ಲೇಂಗಟಿ ಸೇರಿದಂತೆ 4 ಜನರ ವಿರುದ್ಧ ಇದೀಗ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನುಳಿದ, ಗ್ಯಾಂಗ್ ನ ಸದಸ್ಯರ ಹುಡುಕಾಟಕ್ಕಾಗಿ ಪೊಲೀಸರು ತಮ್ಮ ಜಾಲವನ್ನು ಬಿಸಾಡಿದ್ದಾರೆ.
ದಲಿತ ಸೇನೆಯ ಮುಖಂಡನ ಬಂಧನ:
ಯುವತಿಯರನ್ನು ಬಳಸಿಕೊಂಡು ಸರಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಆರೋಪದ ಹಿನ್ನಲೆಯಲ್ಲಿ ದಲಿತ ಸೇನೆಯ ಮುಖಂಡ ರಾಜು ಲೇಂಗಟಿ ಅವರನ್ನು ಇದೀಗ ಪೊಲೀ ಸರು ಬಂಧನ ಮಾಡಿದ್ದಾರೆ.
ಆಡಿಯೊ ಬಿಡುಗಡೆ:
ಕಲಬುರಿಗಿಯಲ್ಲಿ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ರಾಜು ಬೇಂಗಟಿ ಹಾಗೂ ಸಂತ್ರಸ್ತ ಯುವತಿಯ ನಡುವಿನ ಮಾತುಕತೆಯ ಅಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉದ್ಯಮಿಯೊಬ್ಬರ ಬಳಿ ಪಡೆದಿರುವ ಹಣದ ಕುರಿತಾಗಿ ಆರೋಪಿ ರಾಜು ಲೇಂಗಟಿ ಆಡಿಯೋದಲ್ಲಿ ಮಾತನಾಡಿದ್ದು, ಇದೀಗ ಬಹಿರಂಗವಾಗಿದೆ. 40 ಲಕ್ಷ ಡೀಲ್ ನಲ್ಲಿ ಹಣದ ಬಗ್ಗೆ ಗೊಂದಲವನ್ನು ಸೃಷ್ಟಿ ಮಾಡಿಕೊಂಡಿರುವ ಹನಿಟ್ರಾಪ್ ಗ್ಯಾಂಗ್, ಆಡಿಯೊದಲ್ಲಿ ಎಲ್ಲವೂ ಮಾತನಾಡಿರುವುದು ಬೆಳಕಿಗೆ ಬಂದಿದೆ.
ಯುವತಿಯ ಜೊತೆಗೆ ಮಾತನಾಡುವಾಗಲೇ ಉದ್ಯಮಿಗೆ ಕರೆ ಮಾಡಿ ಡೀಲ್ ಹಣದ ಸ್ಪಷ್ಟತೆಯನ್ನು ಆರೋಪಿ ರಾಜು ಲೇಂಗಟಿ ನೀಡಿದ್ದಾನೆ. 40 ಲಕ್ಷ ಹಣ ಡೀಲ ಆಗಿದೆ. ಹತ್ತು ಲಕ ಹಣ ಈಗಾಗಲೇ ಕೊಟ್ಟಿದ್ದು, ಉಳಿದ ಹಣವನ್ನು ಆಮೇಲೆ ನೀಡುವುದಾಗಿ ಹೇಳಿದ್ದಾರೆ. ಎಲ್ಲರಿಗೂ ಎರಡು ಎರಡು ಲಕ್ಷ ಹಂಚಿಕೊಳ್ಳುವುದಾಗಿ ಅಂತ ಆಡಿಯೋದಲ್ಲಿ ರಾಜು ಮಾತನಾಡಿದ್ದು, ಪ್ರಭು ಹಿರೇಮಠ ನಿಮಗೆ ಗೊಂದಲ ಸೃಷ್ಟಿ ಮಾಡುತ್ತಿದ್ದಾನೆ ಎಂದು ಆಡಿಯೋ ಮಾಡಿ ಇದೀಗ ವಿವರಣೆ ನೀಡಿದೆ.
ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ:
ಅಮಾಯಕ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ
ಕರಾಳ ದಂಧೆಯ ಮುಖವಾಡ ಬಗೆದಷ್ಟೂ ಬಯಲಾಗುತ್ತಿದೆ. ಹನಿಟ್ರಾಪ್ ಪ್ರಕರಣದ ಆರೋಪಿ ಪ್ರಭು ಸ್ವಾಮಿ ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ್ದಾನೆ. ವಿಡಿಯೊ ಬಿಡುಗಡೆ ಮಾಡಿ, ಉದ್ಯಮಿಯಿಂದ ರಾಜು ಬೇಂಗತಿ ಅವರು 6 ಲಕ್ಷ ಹಣವನ್ನು ಪಡೆದು ನನ್ನ ಖಾತೆಗೆ ಆರ್ ಟಿ ಜಿ ಎಸ್ ಮೂಲಕ ಹಾಕಿದ್ದರು.
ಇದನ್ನೂ ಓದಿ: Shocking news: ಪತ್ನಿಯ ಹೆರಿಗೆ ಬಿಲ್ ಪಾವತಿಸಲು ಮಗನನ್ನೇ ಮಾರಲು ಮುಂದಾದ ತಂದೆ!
ಅದಾದ ಬಳಿಕ ನಮ್ಮ ಮಾವನ ಖಾತೆಗೆ 8 ಲಕ್ಷ ಹಣವನ್ನು ಪುನಃ ನೆಫ್ಟ್, ಆರ್‌ಟಿಜಿಎಸ್ ಮೂಲಕ ಹಾಕಿದ್ದಾರೆ. ಹೀಗೆ ನನ್ನ ಹಾಗೂ ನನ್ನ ಮಾವನ ಖಾತೆಗೆ ಹಾಕಿದ ಹಣವನ್ನು ರಾಜು ಲೇಂಗಟಿ ಅವರು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಯಾರಿಗೋ ಕೊಡಬೇಕು ಅಂತ ಹೇಳಿ ನನ್ನ ಹಾಗೂ ನನ್ನ ಮಾವನ ಖಾತೆಗೆ ಹಾಕಿಸಿದ್ದು, ಹಣ ಹಾಕಿದ ಬಳಿಕ ಅವರೇ ವಿತ್ ಡ್ರಾ ಮಾಡಿಕೊಂಡಿದ್ದಾರೆ.ರಾಜು ಲೇಂಗಟಿ ಅವರನ್ನು ಕೇಳಿದಾಗ ಸಂಘಟನೆಯವರಿಗೆ ಕೊಡಬೇಕು ಎಂದು ಹೇಳಿದ್ದರು. ಸಾಲದಂತೆ ಹಣದ ವಿಚಾರದಲ್ಲಿ ಗಲಾಟೆ ಮಾಡಿ ನನ್ನ ಮೇಲೆ ಕೇಸ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಪ್ರಕರಣದ ಆರೋಪಿ ಪ್ರಭುಸ್ವಾಮಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾನೆ.