ನಾಲತವಾಡ : ನವೆಂಬರ್ 1ರಂದು ಎ.ಎಸ್.ಎನ್. ಕಾನೂನು ಮಾಹಾವಿದ್ಯಾಲಯ ನಾಲತವಾಡದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ರಶ್ಮಿ ಕುಲಕರಣಿ ಅವರು, ನಾವೆಲ್ಲರೂ ಇಂದು 70ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಪ್ರತಿ ವರ್ಷವೂ ನವೆಂಬರ್ 1ರಂದು ರಾಜ್ಯದ ಎಲ್ಲೆಡೆ ಜಾತಿ-ಧರ್ಮದ ಭೇದವಿಲ್ಲದೇ ಕನ್ನಡದ ಕಂಪನ್ನು ಪಸರಿಸಲಾಗುತ್ತದೆ. ಈಗ ಕರ್ನಾಟಕ ಎಂದು ನಾವೆಲ್ಲರೂ ಖುಷಿಯಿಂದ ಕರೆಯುವ ನಮ್ಮ ರಾಜ್ಯದ ಹೆಸರು ಮೊದಲು ಮೈಸೂರು ರಾಜ್ಯವಾಗಿತ್ತು. 1956ರ ನವೆಂಬರ್ 1ರಂದು ಮೈಸೂರು ರಾಜ್ಯ ನಿರ್ಮಾಣವಾಯಿತು. ಇದರ ನೆನಪಿಗಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.
ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಮದ್ರಾಸ್ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದ ಕನ್ನಡ ನಾಡು ಈ ದಿನ ರಾಜಕೀಯವಾಗಿ ಒಂದಾಯಿತು. ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವ ಎಲ್ಲ ಪ್ರದೇಶಗಳನ್ನು ವಿಲೀನಗೊಲೀಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ಈ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಪಿ.ಬಿ. ಚೌಡಿಕೇರಿ, ಮನೋಹರ .ಬಿ. ಪಾಟೀಲ್, ರವಿ ನಾಲತವಾಡ, ಬಸವರಾಜ, ಹೆಚ್. ಎಲ್. ಸರೂರ, ವಿರೇಶ್ ಕತ್ತಿ, ಭಾಗ್ಯಶ್ರೀ, ನಿರೂಪಣೆ ರೇಖಾ. ಸಿ. ಕಡೂರ್, ಸ್ವಾಗತ ಶೀಲಾ ನಾಯಕ್, ವಂದನಾರ್ಪಣೆ ಅನ್ನಪೂರ್ಣ ಕಡೂರ್, ಪ್ರಾರ್ಥನ ಗೀತೆ ಹಾಡಿದವರು ಅಂಬಿಕಾ ಹಾಗೂ ಅನ್ನಪೂರ್ಣ , ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿ ಉಪಸ್ಥಿತರಿದ್ದರು.







