ಮುದ್ದೇಬಿಹಾಳ : ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಯಮನೂರಪ್ಪ ದೇವಸ್ಥಾನದ ಜಾಗೆ ಅತಿಕ್ರಮಿಸಿ ಅಂಗಡಿ ಹಾಕಿಕೊಂಡಿದ್ದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕೋಳೂರು ಪಂಚಾಯಿತಿ ಆವರಣದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ದಲಿತಪರ ಸಂಘಟನೆ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಧರಣಿ ನಡೆಸಿದರು.
ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಂಗರಾಜು ಬಿ.ಆರ್. ದೇವಸ್ಥಾನದ ಜಾಗೆ ಅತಿಕ್ರಮಿಸಿ ಅಂಗಡಿ ಹಾಕಿಕೊಂಡಿರುವ ವ್ಯಕ್ತಿಗೆ ಗ್ರಾಮ ಪಂಚಾಯಿತಿಯಿAದ ನೋಟಿಸ್ ನೀಡಲಾಗಿದ್ದು ನಾಲ್ಕು ದಿನಗಳಲ್ಲಿ ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ತಿಳಿಸಲಾಗಿದೆ.ಇಲ್ಲದಿದ್ದರೆ ಅಂಗಡಿಯನ್ನು ಪಂಚಾಯಿತಿಯಿAದಲೇ ತೆರವುಗೊಳಿಸಿ ಅದರ ಖರ್ಚನ್ನು ಅಂಗಡಿ ಹಾಕಿರುವ ಮಲ್ಲಿಕಾರ್ಜುನ ಬಗಲಿ ಅವರಿಂದ ವಸೂಲಿ ಮಾಡಿ ಪಂಚಾಯಿತಿಗೆ ಜಮಾ ಮಾಡಲಾಗುವುದು ಎಂದು ಲಿಖಿತ ಉತ್ತರ ನೀಡಿದ್ದರಿಂದ ಧರಣಿಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಮುತ್ತು ಚಲವಾದಿ ಹೇಳಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ಪ್ರಕಾಶ ಕಾಳೆ, ಶೇಖು ಆಲೂರ,ದೇವರಾಜ ಹಂಗರಗಿ,ಪ್ರತಾಪ ಚಲವಾದಿ ಇದ್ದರು.







