DKS vs HDK: ಕುಮಾರಸ್ವಾಮಿ ಒಬ್ಬರೇ ಗಂಡಸ್ಸಾ; ಡಿಕೆ ಶಿವಕುಮಾರ್ ವಾಗ್ದಾಳಿ

DKS vs HDK: ಕುಮಾರಸ್ವಾಮಿ ಒಬ್ಬರೇ ಗಂಡಸ್ಸಾ; ಡಿಕೆ ಶಿವಕುಮಾರ್ ವಾಗ್ದಾಳಿ

ಬೆಂಗಳೂರು, (ಆಗಸ್ಟ್ 10); ಮೂಡಾ ಹಗರಣದ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (DKS vs HDK) ಅವರ ರಾಜೀನಾಮೆಗೆ ಆಗ್ರಹಿಸಿ ಕಮಲ-ದಳ ದೋಸ್ತಿಗಳು ಬೆಂಗಳೂರಿನಿಂದ ಮೈಸೂರು ವರೆಗೆ ನಡೆಸಿದ ಪಾದಯಾತ್ರೆ ಇಂದಯ ಸಮಾರೋಪ ಕಂಡಿದೆ.

Jion Our Telegram: https://t.me/dcgkannada

ಈ ಪಾದಯಾತ್ರೆ ಆರಂಭವಾದ ಉದ್ದೇಶ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಆದ್ರೂ, ಶರಪರ ಕಿತ್ತಾಡಿದ್ದು ಮಾತ್ರ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ. (DKS vs HDK) ಇವರ ನಡುವೆ ವಾಗ್ದಾಳಿ ಯಾವ ಮಟ್ಟಕ್ಕಿತ್ತೆಂದರೆ ಪಾದಯಾತ್ರೆಯ ಉದ್ದೇಶವೇ ಮರೆತು ಹೋಗಿದೆ.

ನಿನ್ನೆ ನವದೆಹಲಿಯಲ್ಲಿ ‘ಹುಷಾರು ಶಿವಕುಮಾರ್. ಗಂಡಸ್ತನದ ರಾಜಕಾರಣ ಮಾಡಿ’ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಖಡಕ್ ಆಗಿಯೇ ಟಾಂಗ್ ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಇಂದು ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಕುಮಾರಸ್ವಾಮಿ ಒಬ್ಬರೇ ಗಂಡಸ್ಸಾ ಎಂದು ಪ್ರಶ್ನಿಸಿ, ಇತ್ತೀಚೆಗೆ ಅವರು ಏನು ಮಾತನಾಡಿದ್ದಾರೆ ಒಮ್ಮೆ ನೆನಪಿಸಿಕೊಳ್ಳಲಿ. ನನ್ನನ್ನು ಮಿಲಿಟರಿ ಬಂದು ಕರೆದುಕೊಂಡು ಹೋಗುತ್ತದೆ ಎಂದಿದ್ದರು. ಅದರ ಅರ್ಥ ನನ್ನನ್ನು ಮತ್ತೆ ಜೈಲಿಗೆ ಕಳುಹಿಸುತ್ತೇನೆ ಎಂಬ ಎಚ್ಚರಿಕೇನಾ ಎಂದು ತಿವಿದಿದ್ದಾರೆ.

ಇದನ್ನೂ ಓದಿ: BJP-JDS ಪಾದಯಾತ್ರೆ ಸಮಾರೋಪಕ್ಕೂ ಮುನ್ನ ಚಾಮುಂಡಿ ಮೊರೆ ಹೋದ‌ ಸಿಎಂ ಸಿದ್ದರಾಮಯ್ಯ‌

ನಾನು ಈಗಾಗಲೇ ಜೈಲು ಕಂಡಿರೋನು. ಅದಲ್ಲದೇ ನಾನು ಜೈಲಲ್ಲಿ ಇದ್ದಾಗ ಅವರೂ ಬಂದು ನೋಡಿದ್ದರು. ಜೈಲಿನ ಒಳಗೆ ನಾನು ಎಷ್ಟು ಶಕ್ತಿಶಾಲಿಯಾಗಿದ್ದೆ ಅಂತಾ ಖುದ್ದು ಕುಮಾರಸ್ವಾಮಿ ಕಣ್ಣಾರೇ ನೋಡಿದ್ದಾರೆ ಎಂದು ತಿರುಗೇಟು ನೀಡಿದ್ದು ಕುಮಾರಸ್ವಾಮಿ ಬೆದರಿಕೆಗಳಿಗೆ ಹೆದರುವ ರಕ್ತ ನನ್ನದಲ್ಲ ಎಂದು ಡಿಕೆಶಿ ಅವರು ಮಾತಿನಲ್ಲೇ ಡಿಚ್ಚಿ ಕೊಟ್ಟಿದ್ದಾರೆ.

Latest News

ಐದು ದಿನಗಳ ಹೋರಾಟ ಅಂತ್ಯ:                                    ನಾಲ್ಕು ತಿಂಗಳ ಅವಧಿಯಲ್ಲಿ ಉತಾರೆ ನೀಡಲು ಕ್ರಮ

ಐದು ದಿನಗಳ ಹೋರಾಟ ಅಂತ್ಯ: ನಾಲ್ಕು ತಿಂಗಳ ಅವಧಿಯಲ್ಲಿ ಉತಾರೆ ನೀಡಲು ಕ್ರಮ

ಮುದ್ದೇಬಿಹಾಳ : ಇಂದಿರಾ ನಗರ ನಿವಾಸಿಗಳಿಗೆ ಕಂಪ್ಯೂಟರ್ ಉತಾರೆ ಪೂರೈಸಬೇಕು ಎಂದು ಆಗ್ರಹಿಸಿ ಅಲ್ಲಿನ

ಪೊಲೀಸ್ ಠಾಣೆಯಲ್ಲಿ ಜಾಗೃತಿ ಸಭೆ:                               ಆಭರಣ ಅಂಗಡಿಗಳಲ್ಲಿ ಸುರಕ್ಷತೆ ಹೆಚ್ಚಿಸಿ-PSI ಸಂಜಯ ತಿಪರೆಡ್ಡಿ

ಪೊಲೀಸ್ ಠಾಣೆಯಲ್ಲಿ ಜಾಗೃತಿ ಸಭೆ: ಆಭರಣ ಅಂಗಡಿಗಳಲ್ಲಿ ಸುರಕ್ಷತೆ ಹೆಚ್ಚಿಸಿ-PSI ಸಂಜಯ ತಿಪರೆಡ್ಡಿ

ಮುದ್ದೇಬಿಹಾಳ : ಈಚೇಗೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಚಿನ್ನದ ಅಂಗಡಿ ಕಳ್ಳತನ ಪ್ರಕರಣ ವರದಿಯಾದ

ALERT : ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್ : ಪದೇ ಪದೇ ಟೀ’ ಬಿಸಿ ಮಾಡಿ ಕುಡಿಯುವುದು ವಿಷಕ್ಕೆ ಸಮ!

ALERT : ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್ : ಪದೇ ಪದೇ ಟೀ’ ಬಿಸಿ ಮಾಡಿ ಕುಡಿಯುವುದು ವಿಷಕ್ಕೆ ಸಮ!

ಬೆಂಗಳೂರು: ಇತ್ತೀಚಿನ ಅಧ್ಯಯನಗಳ ಪ್ರಕಾರ, ಚಹಾ ಕುಡಿದ 15 ರಿಂದ 20 ನಿಮಿಷಗಳ ಒಳಗೆ

2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ;          ಮುದ್ದೇಬಿಹಾಳ : ಹಸಿರು ತೋರಣ ಗೆಳೆಯರ ಬಳಗಕ್ಕೆ ಗೂಳಿ ಅಧ್ಯಕ್ಷ

2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ; ಮುದ್ದೇಬಿಹಾಳ : ಹಸಿರು ತೋರಣ ಗೆಳೆಯರ ಬಳಗಕ್ಕೆ ಗೂಳಿ ಅಧ್ಯಕ್ಷ

ಮುದ್ದೇಬಿಹಾಳ : ಪಟ್ಟಣದ ಹಸಿರು ತೋರಣ ಗೆಳೆಯರ ಬಳಗದ 2026 ನೇ ಸಾಲಿನ ನೂತನ

ಮುದ್ದೇಬಿಹಾಳ : ಡಿ.30 ರಿಂದ ಜ.5ರವರೆಗೆ ಬನಶಂಕರಿ ದೇವಿ ಜಾತ್ರೋತ್ಸವ

ಮುದ್ದೇಬಿಹಾಳ : ಡಿ.30 ರಿಂದ ಜ.5ರವರೆಗೆ ಬನಶಂಕರಿ ದೇವಿ ಜಾತ್ರೋತ್ಸವ

ಮುದ್ದೇಬಿಹಾಳ : ಪಟ್ಟಣದ ಬನಶಂಕರಿ ದೇವಿ ಜಾತ್ರೆ ಡಿ.30 ರಿಂದ ಜ.5ರವರೆಗೆ ನಡೆಯಲಿದೆ.ಡಿ.30ರಂದು ಬೆಳಗ್ಗೆ 8ಕ್ಕೆ ಗೋಮಾತಾ ಪೂಜೆ,ಸಂಜೆ 5.30ಕ್ಕೆ ಹುಚ್ಚಯ್ಯನ ಕಳಸವು ಲೇಶಪ್ಪ ಪ್ಯಾಟಿಗೌಡರ ಮನೆಯಿಂದ ಬನಶಂಕರಿ ದೇವಸ್ಥಾನಕ್ಕೆ ಕರೆತರಲಾಗುವುದು. ರಾತ್ರಿ 7ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ,7.30ಕ್ಕೆ ಸಾಧಕರಿಗೆ ದಾನಿಗಳಿಗೆ ಸನ್ಮಾನ ಹಾಗೂ ವೀಣಾವಾಣಿ ಸಂಗೀತ ವಿದ್ಯಾಲಯದ ಚೈತ್ರಾ ಡಂಬಳ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಡಿ.31 ರಂದು ಬಳೆ ಉತ್ಸವ,ಮುಂಜಾನೆ 7ಕ್ಕೆ ಬಳೆಗಳ ಅಲಂಕಾರ,ಮದ್ಯಾಹ್ನ 12.30ಕ್ಕೆ ಎತ್ತು

ಇನಾಂವೀರಾಪೂರದ ಗರ್ಭಿಣಿ ಹತ್ಯೆ : ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಇನಾಂವೀರಾಪೂರದ ಗರ್ಭಿಣಿ ಹತ್ಯೆ : ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಮುದ್ದೇಬಿಹಾಳ : ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ಏಳು ತಿಂಗಳ ಗರ್ಭಿಣಿ ಹತ್ಯೆಗೈದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಡಿಎಸ್‌ಎಸ್ ಕಾದ್ರೋಳ್ಳಿ ಬಣದ ಕಾರ್ಯಕರ್ತರು ಸೋಮವಾರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ಸಂಘಟನೆ ಮುಖಂಡರು ಶಿರಸ್ತೇದಾರ ಎ.ಬಿ.ಬಾಗೇವಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು ಎಂಬ ಕಾರಣಕ್ಕೆ ಆಕೆಯ ತಂದೆ ಹಾಗೂ ಇತರರು ಸೇರಿ ಗರ್ಭಿಣಿಯನ್ನು ಹತ್ಯೆ ಮಾಡಿದ