ಮುದ್ದೇಬಿಹಾಳ : ಕೆಲವು ಸರ್ವೆಗಳ ಜಮೀನಿನ ಮೇಲೆ ದಾಖಲಾಗಿರುವ ವಕ್ಭ್ ಮಂಡಳಿ, ಕರ್ನಾಟಕ ಸರ್ಕಾರ ಹೆಸರನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಕುಂಟೋಜಿ, ಬಿದರಕುಂದಿ ಗ್ರಾಮದ ರೈತರು ರೈತಪರ ಸಂಘಟನೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಹಾಯ್ದು ತಹಶೀಲ್ದಾರ್ ಕಚೇರಿ ಆವರಣಕ್ಕೆ ಆಗಮಿಸಿದರು.ಈ ವೇಳೆ ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸೈನಿಕ ನಾಗಲಿಂಗಯ್ಯ ಮಠ ಮಾತನಾಡಿ, ಕುಂಟೋಜಿ ಸರ್ವೆ ನಂಬರ್ 277, 278,279,289, 290,291, 300,301, 303, 304, 305, 311, 312, 313, 466/2ರಲ್ಲಿ ಅಂದಾಜು 380 ಎಕರೆ ಜಮೀನುಗಳನ್ನು ಕೆಲವರು ಖರೀದಿ ಮಾಡಿದ್ದು ಇನ್ನು ಕೆಲವರ ಆಸ್ತಿಗಳು ಪಿತ್ರಾರ್ಜಿತ ಆಸ್ತಿಗಳಿವೆ. ಈ ರೀತಿಯ ಜಮೀನುಗಳಲ್ಲಿ 2019 ಜನವೇರಿಯಲ್ಲಿ ವಕ್ಬ್ ಆಸ್ತಿ ಕರ್ನಾಟಕ ಸರಕಾರ ಅಂತ 11ನೇ ಕಾಲಂನಲ್ಲಿ ನಮೂದಿಸಲಾಗಿದೆ.ಇದರಿಂದ ಸರ್ಕಾರ ಯಾವುದೇ ಸೌಲಭ್ಯ, ಸಾಲ ಪಡೆದುಕೊಳ್ಳುವುದಕ್ಕೆ ನಮಗೆ ತೊಂದರೆಯಾಗಿದ್ದು 1973ರ ಗೆಜೆಟ್‌ನಲ್ಲಿ ನಮೂದಿಸಿರುವ ವಕ್ಭ್ ಆಸ್ತಿ ಹಾಗೂ ಪಹಣಿಗಳಲ್ಲಿನ ವಕ್ಭ್ ಮಂಡಳಿ ಕರ್ನಾಟಕ ಸರ್ಕಾರ ತಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಮುಖಂಡ ಸಿದ್ದು ಹೆಬ್ಬಾಳ ಮಾತನಾಡಿ, ರೈತರ ಜಮೀನುಗಳು ಇನಾಮು ಜಮೀನುಗಳಾಗಿದ್ದು 1961ರಲ್ಲೇ ಇವುಗಳ ಉತಾರೆಯಲ್ಲಿದ್ದ ಸರ್ಕಾರವನ್ನು ವಜಾಗೊಳಿಸಲಾಗಿದೆ.ತಕ್ಷಣ ರೈತರ ಜಮೀನುಗಳ ಮೇಲೆ ಇರುವ ವಕ್ಭ್ ಬೋರ್ಡ್ ಪದವನ್ನು ತಗೆದುಹಾಕಬೇಕು.ಇಲ್ಲದಿದ್ದರೆ ತಹಶೀಲ್ದಾರ್ ಕಚೇರಿ ಎದುರಿಗೆ ನ.6 ರಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ. ರೈತರಿಗೆ ತೊಂದರೆಯಾದಾಗ ಎಲ್ಲ ಹೋರಾಟಗಾರರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಆತನೊಂದಿಗೆ ನಿಲ್ಲಬೇಕು ಎಂದು ತಿಳಿಸಿದರು.
ಪ್ರಗತಿಪರ ರೈತ ಭೀಮಸಿ ಹೂಗಾರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಓಡಾಡಿ ಓಟು ಹಾಕಿಸಿಕೊಂಡವರು ಇಂದು ರೈತರಿಗೆ ತೊಂದರೆಯಾಗಿರುವುದರ ಬಗ್ಗೆ ಧ್ವನಿ ಎತ್ತಬೇಕು.ಕ್ಷೇತ್ರದ ಶಾಸಕರು ಈ ವಿಷಯದ ಕುರಿತು ಧ್ವನಿ ಎತ್ತಬೇಕು.ಕೇವಲ ಹಿಂದೂಗಳಷ್ಟೇ ಅಲ್ಲದೇ ಮುಸ್ಲಿಂರ ಜಮೀನುಗಳಲ್ಲೂ ವಕ್ಭ್ ಬೋರ್ಡ್ ಪದ ಸೇರ್ಪಡೆಯಾಗಿದ್ದು ಅದನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರಲ್ಲದೇ ವಕ್ಬ್ ಕಾನೂನು ಸಂವಿಧಾನಕ್ಕಿಂತ ದೊಡ್ಡದಲ್ಲ ಎಂದು ಹೇಳಿದರು.
ರೈತ ಸಂಘದ ಮುಖಂಡ ಸಂಗಣ್ಣ ಬಾಗೇವಾಡಿ ಮಾತನಾಡಿದರು.ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ, , ಸಂತೋಷಗೌಡ ಬಿರಾದಾರ , ಗುರುಪಾದ ಹೆಬ್ಬಾಳ , ಮಂಜು ಅಬ್ಬಿಹಾಳಮಠ ಮಲ್ಲಿಕಾರ್ಜುನ ನಾಟಿಕಾರ , ಸಚೀನ ಚಿನ್ನಾಪೂರ , ಈರಣ್ಣ ಹೂಗಾರ , ಸಂಗಣ್ಣ ಕುಂಬಾರ , ದುರ್ಗಪ್ಪ ಕವಡಿಮಟ್ಟಿ ಸೇರಿದಂತೆ ಕುಂಟೋಜಿ ಹಾಗೂ ಬಿದರಕುಂದಿ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಇದ್ದರು.ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿ, ಮೇಲಧಿಕಾರಿಗಳಿಂದ ಬರುವ ನಿರ್ದೇಶನದಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಕುಂಟೋಜಿ,ಬಿದರಕುಂದಿ ರೈತರಿಂದ ಪ್ರತಿಭಟನೆ: 380 ಎಕರೆ ಜಮೀನಿನ ಮೇಲೆ ವಕ್ಭ್ ಬೋರ್ಡ್ ಹೆಸರು ದಾಖಲು
ಕುಂಟೋಜಿ,ಬಿದರಕುಂದಿ ರೈತರಿಂದ ಪ್ರತಿಭಟನೆ: 380 ಎಕರೆ ಜಮೀನಿನ ಮೇಲೆ ವಕ್ಭ್ ಬೋರ್ಡ್ ಹೆಸರು ದಾಖಲು
Latest News
ಮುದ್ದೇಬಿಹಾಳ : TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ
ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ
ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ : ಕರ್ನಾಟಕ ತಂಡಕ್ಕೆ ಮುದ್ದೇಬಿಹಾಳದ ಮೂವರು ಆಟಗಾರರ ಆಯ್ಕೆ
ಮುದ್ದೇಬಿಹಾಳ : ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ
ಗುಡಿಮನಿಗೆ ಕರ್ನಾಟಕ ವಾಲ್ಮೀಕಿ ರತ್ನ ಪ್ರಶಸ್ತಿ
ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯಿತಿ ನೌಕರ ಎಂ.ಕೆ.ಗುಡಿಮನಿ ಅವರಿಗೆ 2025ನೇ ಸಾಲಿನ
ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ: 2026ಕ್ಕೆ 200 ಮೆಡಿಕಲ್ ಸೀಟು ಆಯ್ಕೆಯ ಗುರಿ-ಅಮೀತಗೌಡ ಪಾಟೀಲ್
ಮುದ್ದೇಬಿಹಾಳ : ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಮೆಡಿಕಲ್ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಹಿರಿಮೆ
ರಾಯಚೂರು: ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ
ರಾಯಚೂರು ಅಕ್ಟೋಬರ್ 15: ಇ- ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವ ಖಾಸಗಿ ಉದ್ಯೋಗದಾತರಿಗೆ ಮರುಪಾವತಿಯ ಆಶಾದೀಪ ಹಾಗೂ ಕರ್ನಾಟಕ ಸಿನೆಮಾ ಮತ್ತು ಸಾಂಸ್ಮೃತಿಕ ಚಟುವಟಿಕೆಯಲ್ಲಿ ತೊಡಗಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಲು ಹೊಸದಾಗಿ ಸಿನೇಮಾ ಕಾರ್ಮಿಕರ ಸುಂಕ ಅಧಿನಿಯಮ ಜಾರಿಯಂತಹ ವಿನೂತನ ಯೋಜನೆಗಳನ್ನು ರಾಜ್ಯ ಕಾರ್ಮಿಕ ಇಲಾಖೆಯು ರೂಪಿಸಿ ಇಡೀ ದೇಶವೇ ಕರ್ನಾಟಕ
ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಹಲವು ಕ್ರಮ: ಸಚಿವ ಲಾಡ್
ಯಾದಗಿರಿ, ಅಕ್ಟೋಬರ್.15: ರಾಜ್ಯದ ಅಸಂಘಟಿತ ವಲಯದ ಎಲ್ಲ ವರ್ಗಗಳ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ಗುರುತಿಸಿರುವ 101 ಅಸಂಘಟಿತ ಕಾರ್ಮಿಕ ವರ್ಗಗಳ ಕಾರ್ಮಿಕರು ತಕ್ಷಣ ನೋಂದಣಿ ಮಾಡಿಕೊಂಡು ಸ್ಮಾರ್ಟ್ ಕಾರ್ಡ್ ಮೂಲಕ ಸವಲತ್ತುಗಳ ಲಾಭ ಪಡೆದುಕೊಳ್ಳುವಂತೆ ರಾಜ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರು ಹೇಳಿದರು. ನಗರದ ಶುಭಂ ಪೆಟ್ರೋಲ್ ಪಂಪ್ ಹಿಂಭಾಗದ, ಪಾಟೀಲ್ ಕನ್ವೆನ್ಷನ್







