ಇಳಕಲ್: ನಗರಸಭೆಯ ಎರಡನೇ ಅವಧಿಗೆ ಮೀಸಲಾತಿ ಪ್ರಕಟಗೊಂಡಿದ್ದು, ಹಲವು ತಿಂಗಳಿಂದ ಇದಕ್ಕಾಗಿ ಆಕಾಂಕ್ಷಿಗಳು ಕಾಯುತ್ತಿದ್ದರು.
ಇದರನ್ವಯ ಇಳಕಲ್ ನಗರಸಭೆ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಬಿ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಾಹಿಳೆ ಕ್ಷೇತ್ರಕ್ಕೆ ಮೀಸಲಿಡಲಾಗಿದೆ.
ಕರ್ನಾಟಕ ಪುರಸಭೆಗಳ ಕಾಯಿದೆ, 1964ರ ಸೆಕ್ಷನ್ 42ರ ಪ್ರಕಾರ ಮತ್ತು ಕರ್ನಾಟಕದ ನಿಯಮ 13-ಎ ಮತ್ತು 13ರ ಅಡಿಯಲ್ಲಿ ಕರ್ನಾಟಕದ 44 ನಗರ/ ಪುರಸಭೆಯ ಕೌನ್ಸಿಲ್‌ಗೆ ಸಂಬಂಧಿಸಿದಂತೆ ಹತ್ತನೇ ಅವಧಿಗೆ ವಿವಿಧ ವರ್ಗಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಿ ಚುನಾವಣೆ (ತಿದ್ದುಪಡಿ) ನಿಯಮಗಳು, 2024ರ ಆದೇಶ ಸಂಖ್ಯೆ UDD 10 MLR 2024ರ ಪ್ರಕಾರ ಆದೇಶ ಹೊರಡಿಸಿದೆ.
61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ.