ಮುದ್ದೇಬಿಹಾಳ : ಸ್ವ ಉದ್ಯೋಗದಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಶಿವಾನಂದ ಪಿ., ಹೇಳಿದರು.
ಪಟ್ಟಣದ ವಿದ್ಯಾನಗರದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುದ್ದೇಬಿಹಾಳ ಯೋಜನಾ ಕಚೇರಿಯಲ್ಲಿ ಸ್ವ ಉದ್ಯೋಗ ಆಧಾರಿತ ಫಲಾನುಭವಿಗಳಿಗೆ ಸಿಡ್ಬಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ಬಡತನ ನಿರ್ಮೂಲನೆ ಉದ್ದೇಶದಿಂದ ಆಸಕ್ತರಿಗೆ ಸ್ವ ಉದ್ಯೋಗ ತರಬೇತಿ ನೀಡಲು ರುಡ್‌ಸಟ್ ಸಂಸ್ಥೆ ಪ್ರಾರಂಭಿಸಿದರು.
ಯೋಜನೆಯ ಸದಸ್ಯರಿಗೆ ಕಿರು ಉದ್ಯೋಗ ಆರಂಭಿಸಲು ಬ್ಯಾಂಕಿನ ಮೂಲಕ ಸಿಡ್ಬಿ ಪ್ರಯಾಸ್ ಸಂಸ್ಥೆಯೊAದಿಗೆ ಜಂಟಿಯಾಗಿ ಸಾಲ ನೀಡಲಾಗುತ್ತದೆ. ಸ್ವ ಉದ್ಯೋಗದಿಂದ ಹಲವು ಕುಟುಂಬಗಳು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದರು.
ಯೋಜನಾ ಕಚೇರಿಯ ಹಣಕಾಸು ಪ್ರಬಂಧಕ ಅಣ್ಣರಾವ್ ಸಿಡ್ಬಿ ಸಾಲದ ಬೇಡಿಕೆ ಇಡುವಾಗ ಸದಸ್ಯರು ಕೊಡಬೇಕಾದ ದಾಖಲಾತಿಗಳ ಕುರಿತು ಬಡ್ಡಿಯ ಕುರಿತು ಮಾಹಿತಿ ನೀಡಿದರು.ಕಚೇರಿ ಸಹಾಯಕ ಶ್ರೀಮತಿ ನಂದಿನಿ, ಮಾರುತಿ ನಗರ ಸೇವಾಪ್ರತಿನಿಧಿ ಶ್ರೀಮತಿ ಸರಿತಾ ಇದ್ದರು. 84 ಮಂದಿ ಸ್ವ ಉದ್ಯೋಗ ಫಲಾನುಭವಿಗಳು ಭಾಗವಹಿಸಿದರು..







