ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ ಬೆಂಗಳೂರು ಈ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯಿಂದ ಜಿಒಸಿಸಿ ಬ್ಯಾಂಕ್ ಅಧ್ಯಕ್ಷ ಆನಂದಗೌಡ ಎನ್ ಬಿರಾದಾರ ಭಾನುವಾರ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಕಚೇರಿಯಲ್ಲಿ ಭಾನುವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಆನಂದಗೌಡರ ಪ್ರತಿಸ್ಪರ್ಧಿ ಮೈಸೂರಿನ ಮಂಜೇಗೌಡ ಒಂದೂ ಮತಗಳನ್ನು ಪಡೆದುಕೊಳ್ಳದೇ ಠೇವಣಿ ನಷ್ಟ ಕಳೆದುಕೊಂಡರಲ್ಲದೇ ಅವರ ಮತವನ್ನೂ ಆನಂದಗೌಡರಿಗೆ ಚಲಾಯಿಸಿದ್ದರಿಂದ ೭೩ ಮತಗಳನ್ನು ಪಡೆದುಕೊಂಡು ಆನಂದಗೌಡ ಬಿರಾದಾರ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಗೆಲುವು ಕಂಡಿರುತ್ತಾರೆ. ವಿಜಯೋತ್ಸವದಲ್ಲಿ ಜಿಒಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಹೂಗಾರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ, ಜಿಒಸಿಸಿ ಬ್ಯಾಂಕ್ ನಿರ್ದೇಶಕ ಅರ್ಜುನ್ ಲಮಾಣಿ, ಹಣಮಂತ ಕೊಣದಿ, ಪ್ರಶಾಂತ ಚನಗೊಂಡ, ಅಶೋಕ ಚನ್ನಬಸುಗೋಳ, ಮಲಕಪ್ಪ ಟಕ್ಕಳಕಿ, ನೌಕರರ ಬಾಂಧವರು ಹಾಜರಿದ್ದರು.
ಆನಂದಗೌಡ ಗೆಳೆಯರ ಬಳಗದ ಸದಸ್ಯರಾದ ವ್ಹಿ.ವ್ಹಿ.ಪವಾಡಶೆಟ್ಟಿ, ಸಿ.ಎಸ್.ಜಾರೆಡ್ಡಿ, ಟಿ.ಎಚ್.ಲಮಾಣಿ, ಯಲ್ಲಪ್ಪ ಚಲವಾದಿ, ಎಂ.ಎಸ್.ಗೌಡರ,ಸAತೋಷ ಅಂಗಡಗೇರಿ, ವಿಠ್ಠಲ ಕಿಲಾರಟ್ಟಿ, ಸತೀಶ ಕುಲಕರ್ಣಿ, ಸಂತೋಷ ಯರಗಲ್ಲ, ಜಗದೀಶ ಸೋಮನಕಟ್ಟಿ, ಸುಬಾಷ ಕುಂಬಾರ, ಎನ್.ಎಸ್.ಸಂಗಮ, ಶರಣಗೌಡ ಕೊಣ್ಣೂರ, ಎಂ.ಬಿ.ಬಾಗವಾನ, ಸಚಿನ್ ರಾಠೋಡಮ ಯಲಗೂರೇಶ ತೊನಶ್ಯಾಳ, ಚೇತನ್ ಕಲುಂಡಿ, ಬಸವರಾಜ್ ಬಡಿಗೇರ ಹಾಗೂ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಗೆಳೆಯರ ಬಳಗದ ನೌಕರರ ಬಾಂಧವರು ಹರ್ಷ ವ್ಯಕ್ತಪಡಿಸಿದ್ದಾರೆ.





