Massive tractor protest led by BJP state vice-president Raju Gaudru

ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ರಾಜುಗೌಡ್ರು ನೇತೃತ್ವದಲ್ಲಿ ಬೃಹತ್ ಟ್ಯಾಕ್ಟರ್ ಪ್ರತಿಭಟನೆ

ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ರಾಜುಗೌಡ್ರು ನೇತೃತ್ವದಲ್ಲಿ ಬೃಹತ್ ಟ್ಯಾಕ್ಟರ್ ಪ್ರತಿಭಟನೆ

ಶಿವು ರಾಠೋಡ, ಹುಣಸಗಿ : ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಏ.10 ರವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ನರಸಿಂಹ ನಾಯಕ (ರಾಜುಗೌಡ್ರು) ನೇತೃತ್ವದಲ್ಲಿ ಬೃಹತ್ ಟ್ಯಾಕ್ಟರ್ ಪ್ರತಿಭಟನೆ.

ಹುಣಸಗಿ ಪಟ್ಟಣದಿಂದ ನಾರಾಯಣಪುರು ಮುಖ್ಯಇಂಜಿನಿಯರ್ ಆಫೀಸ್ ವರೆಗೆ ಪ್ರತಿಭಟನೆ. ಈ ಪ್ರತಿಭಟನೆಯು ಬೆಳಗ್ಗೆ 10.30 ಗಂಟೆಗೆ ಪ್ರಾರಂಭಿಸಿದರು.

ರಾಜ್ಯ ಸರಕಾರದ ರೈತ ವಿರೋಧಿ ನೀತಿಗಳ ಬಗ್ಗೆ ಘೋಷಣೆ ಕೂಗಿದರು. ಬೇಕೆ ಬೇಕು ಏ.10 ರವರೆಗೆ ಕಾಲುವೆಗೆ ನೀರು ಬೇಕು… ಎಂಬ ಘೋಷಣೆ ಮೊಳಗಿತು. ಬಳಿಕ ಪ್ರತಿಭಟನೆಯಲ್ಲಿ ರೈತ ಮುಖಂಡರು ಮಾತನಾಡಿ, ನಾರಾಯಣಪುರ ಎಡದಂಡೆ ಕಾಲುವೆಯ ಅವಲಂಬಾನೆಯ ರೈತರಿಗೆ ಅನ್ಯಾಯ ಮಾಡಬೇಡಿ ನಿಮ್ಮನ ನಂಬಿ ರೈತರರು ಶೇಂಗಾ, ಸಜ್ಜೆ, ಸೂರ್ಯಕಾಂತಿ, ಭತ್ತ ಸೇರಿ ಇನ್ನಿತರ ಬೆಳೆಗಳು ಇನ್ನೂ 20 ರಿಂದ25 ದಿನಗಳಲ್ಲಿ ಕೈಗೆ ಬರುತ್ತವೆ. ಆದರೆ ತೆನೆ ಬರುವ ಸಂದರ್ಭದಲ್ಲಿ ಏಕಾಏಕಿ ಕಾಲುವೆ ನೀರು ನಿಂತು ಹೋದರೆ ರೈತರ ಲಕ್ಷಾಂತರ ಮೊತ್ತದ ಬೆಳೆ ನಷ್ಟವಾಗಿ ಅವರ ಬಾಳು ಕೂಡ ಹಾಳಾಗುತ್ತದೆ ಎಂದು ಹೇಳಿದರು.

ಕೃಷಿ ಇಲಾಖೆಯು ಬೆಳೆಗಳ ವಾಸ್ತವ ಸ್ಥಿತಿಯನ್ನು ಸರಕಾರಕ್ಕೆ ವರದಿ ಮಾಡಿದೆ. ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಸಂಗ್ರಹವಿದ್ದ ಅದೇಷ್ಟೋ ಟಿಎಂಸಿ ನೀರು ನದಿಗೆ ಹೋಗಿದೆ ಎಂದು ಆಕ್ರೋಶ ಹೊರ ಹಾಕಿದರು. ನೀರಾವರಿ ಸಲಹಾ ಸಮಿತಿಯವರ ಅವೈಜ್ಞಾನಿಕ ತಿರ್ಮಾನ, ತೆಲಂಗಾಣ ರಾಜ್ಯಕ್ಕೆ ರಾತೋರಾತ್ರಿ ನೀರು ಹರಿಸಿರುವುದು ಸರಿಯಾದ ಕ್ರಮವಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ನರಸಿಂಹ ನಾಯಕ (ರಾಜುಗೌಡ್ರು) ಹರಿ ಹಾಯ್ದರು.

ಏ.10 ರವರೆಗೆ ಕಾಲುವೆಗೆ ನೀರು ಹರಿಸದಿದ್ದರೆ ರೈತರು ಬೆಳೆ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸರಕಾರವೇ ಜವಾಬ್ದಾರಿಯಾಗುತ್ತದೆ ಮತ್ತು ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಕಾರಣ ಸರಕಾರ ರೈತರ ಹಿತ ಕಾಪಾಡಬೇಕಾಗಿರುವುದು ಅಗತ್ಯವಾಗಿದೆ.

ಈಗ ರೈತರಿಗೆ ಬಂದಿರುವ ಸಂಕಷ್ಟ ನಿವಾರಿಸಬೇಕು. ಕುಡಿಯಲು ಅವಶ್ಯವಿರುವ 24 ಟಿಎಂಸಿ ನೀರು ಇದೆ. ಹಾಗಾಗಿ ಏ.10 ವರೆಗೆ ಕಾಲುವೆಗೆ ನೀರು ಹರಿಸಿ ರೈತರ ಬೆಳೆ, ಬಾಳು ಉಳಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಬ್ಲುಗೌಡ, ಅಮಿನ ರೆಡ್ಡಿ ಯಾಳಗಿ, ಬಸನಗೌಡ, ಹನಮಂತ ನಾಯಕ್ ತಾತಾ, ಹೆಚ್ ಸಿ ಪಾಟೀಲ್, ಯಲ್ಲಪ್ಪ ಕುರಕುಂಡಿ, ಶೇಖರ್ ಎಸ್ ನಾಯಕ, ತಿರುಪತಿ ಹೆಚ್ ನಾಯಕ, ಸಂಗಣ್ಣ ವೈಲಿ, ವೆಂಕಟೇಶ ಸಾಹುಕಾರ್, ಶಿವಣ್ಣ ಮಂಗಿಹಾಳ್, ರಮೇಶ ಕೋಲೂರು, ಶಿವು ಬಿರಾದಾರ, ಅನೇಕ ಸಂಘಟನೆಪರ ಹೋರಾಟಗಾರರು , ರೈತರ ಪರ ಹೊರಟಗಾರರು ಉಪಸ್ಥಿತರಿದ್ದರು.

Latest News

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

ಮುದ್ದೇಬಿಹಾಳದ ಶಕುಂತಲಾಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ ಮುದ್ದೇಬಿಹಾಳ : ಕೊಪ್ಪಳ ಜಿಲ್ಲಾ ಹನುಮಸಾಗರ

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ಧಾರವಾಡ, ಜೂ.30: ನಗರದ ಸ್ವಚ್ಛತೆ ಪಾಲಿಕೆ, ನಗರ ಸಭೆ ಕೆಲಸ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನೂತನ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ

ಸಚಿವ ಲಾಡ್ ಅವರಿಂದ ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ

ಸಚಿವ ಲಾಡ್ ಅವರಿಂದ ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ

ಬೆಂಗಳೂರು, ಜೂನ್‌ 26: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ವಿವಿಧ ಕಾರ್ಖಾನೆಗಳು ಹಾಗೂ ಮನೆ ಕೆಲಸದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ಚರ್ಚಿಸಿದರು. ನುವೋಕೋ ವಿನ್ವಾಸ್ ಕಾರ್ಪೊರೇಷನ್ ಕಾರ್ಮಿಕರ ಸಮಸ್ಯೆ ಚರ್ಚೆ:ಕರ್ನಾಟಕ ಜನರಲ್ ಲೇಬರ್ ಯೂನಿಯನ್ ಬೆಂಗಳೂರು ಇವರ ಮನವಿ ಮೇರೆಗೆ ಮೆ. ನುವೋಕೋ ವಿನ್ವಾಸ್ ಕಾರ್ಪೊರೇಷನ್ ಲಿಮಿಟೆಡ್.. ಕಾರ್ಮಿಕರ ಸಮಸ್ಯೆಗಳ ಕುರಿತು ಸಭೆ ನಡೆಸಿ ಚರ್ಚಿಸಿದರು.

ಶಾಂತಿಸಭೆ : ಪಿಎಸ್‌ಐ ತಿಪರೆಡ್ಡಿ ಸಲಹೆಶಾಂತಿಯುತವಾಗಿ ಮೊಹರಂ ಆಚರಿಸಿ

ಶಾಂತಿಸಭೆ : ಪಿಎಸ್‌ಐ ತಿಪರೆಡ್ಡಿ ಸಲಹೆಶಾಂತಿಯುತವಾಗಿ ಮೊಹರಂ ಆಚರಿಸಿ

ಮುದ್ದೇಬಿಹಾಳ : ಜೂ.27 ರಿಂದ ಮೊಹರಂ ಹಬ್ಬದ ಆಚರಣೆ ಆರಂಭಗೊಳ್ಳಲಿದ್ದು ಶಾಂತಿಯುತವಾಗಿ ಆಚರಿಸುವಂತೆ ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೊಹರಂ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಜೂ.27 ರಂದು ಮೊಹರಂ ಹಬ್ಬದ ಆಚರಣೆ ಆರಂಭಗೊಂಡು 29 ರಂದು ದಫನ್ ಮಾಡಲಾಗುತ್ತದೆ. ಈ ಸಮಯದಲ್ಲಿ ಅಲಾಯ್ ದೇವರುಗಳನ್ನು ಪ್ರತಿಷ್ಠಾಪಿಸುವ ಸಮಿತಿಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಮೊಹರಂ ಹಬ್ಬ ಭಾವೈಕ್ಯತೆಯ ಸಂಕೇತವಾಗಿದ್ದು ಉಭಯ