Meeting of Headmasters of Zonal Area Schools

ವಲಯ ವ್ಯಾಪ್ತಿ ಶಾಲೆಗಳ ಮುಖ್ಯಶಿಕ್ಷಕರ ಸಭೆ

ವಲಯ ವ್ಯಾಪ್ತಿ ಶಾಲೆಗಳ ಮುಖ್ಯಶಿಕ್ಷಕರ ಸಭೆ

ನಾರಾಯಣಪುರ: ಕೊಡೇಕಲ್ ಪಟ್ಟಣದ ಸರರ್ಕಾರಿ ಪ್ರೌಢಶಾಲೆಯಲ್ಲಿ ವಲಯ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರ ಸಭೆ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸುರುಪುರ ಬಿಇಒ ಯಲ್ಲಪ್ಪ ಕಾಡ್ಲೂರ ಮಾತನಾಡಿ ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತವರಣ ನಿರ್ಮಾಣದ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವದು ಹಾಗೂ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಸೇರಿ ಅನುದಾನಿತ ಶಾಲೆಗಳಲ್ಲಿ ಸಿಗುವ ಬಿಸಿಯೂಟ, ಸಮವಸ್ತ್ರ ಪಠ್ಯಪುಸ್ತಕಗಳ ವಿತರಣೆ ಸೇರಿ ಇತರೆ ಸೌಲಭ್ಯಗಳ ಸಂಪೂರ್ಣ ಮಾಹಿತಿಯನ್ನು ಪಾಲಕರಿಗೆ ತಿಳಿಸಬೇಕು ಈ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ ಹೆಚ್ಚಿಸುವ ಬಗ್ಗೆ ಸಭೆಯಲ್ಲಿದ್ದ ಪ್ರಧಾನ ಗುರುಗಳಿಗೆ ಮಾಹಿತಿ ನೀಡಲಾಯಿತು, ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಳ್ಳಬೇಕಾದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಶಿಕ್ಷಣ ಸಂಯೋಜಕ ಶರಣಬಸವ ಗಚ್ಚಿನಮನಿ, ಬಿ.ಆರ್.ಪಿ ಮಹಮದ್ ರಫೀಕ್ ಮಳ್ಳಿಕರ್, ಮುಖ್ಯಶಿಕ್ಷಕ ಶರಣಪ್ಪ, ಕೊಟ್ರೇಶ್ ಕೋಳೂರು, ಹಸನಸಾ ಚೌದ್ರಿ, ಗದ್ಯಪ್ಪ ನಾಯಕ್, ತಿಪ್ಪಮ್ಮ ಗೊರೆಬಾಳ, ಬಿ.ಇ.ಆರ್.ಟಿ ಓಂಪ್ರಕಾಶ್, ಸಿಆರ್‌ಪಿ ಪರಶುರಾಮ ಸೇರಿ ವಲಯ ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಕೊಡೇಕಲ್ ವಲಯದ ಸಿಆರ್‌ಪಿಗಳು ಉಪಸ್ಥಿತರಿದ್ದರು.

Latest News

PSI ಪತ್ನಿ ಆತ್ಮಹತ್ಯೆ!

PSI ಪತ್ನಿ ಆತ್ಮಹತ್ಯೆ!

ಬಳ್ಳಾರಿ: PSI ಪತಿ ಹಾಗೂ ಇಬ್ಬರು ಮಕ್ಕಳನ್ನ ರೆಡಿ ಮಾಡಿ, ಧ್ವಜಾರೋಹಣಕ್ಕೆ ಕಳಿಸಿದ ಬಳಿಕ

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಬೆಂಗಳೂರು: ಮಹಿಳೆಯ ಗರ್ಭಕೋಶದಿಂದ ಮಹತ್ವದ ಶಸ್ತ್ರ ಚಿಕಿತ್ಸೆ ನಡೆಸಿದ ರಾಜಾಜಿನಗರದ ಇಎಸ್‌ಐಸಿ, ಎಂಸಿ ಪಿಜಿಐಎಂಎಸ್‌ಆರ್

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ನಾರಾಯಣಪುರ : ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕೊಡೇಕಲ್ ಉಪತಶೀಲ್ದಾರ ಕಲ್ಲಪ್ಪ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ

ಪಹಲ್ಗಾಮ್ ದಾಳಿಗೆ ಭಾರತದ ಸಮರ್ಥ ಪ್ರತ್ಯುತ್ತರ : ಶಾಸಕ ನಾಡಗೌಡ

ಪಹಲ್ಗಾಮ್ ದಾಳಿಗೆ ಭಾರತದ ಸಮರ್ಥ ಪ್ರತ್ಯುತ್ತರ : ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮಲ್ಲಿರುವ ಆಂತರಿಕ ಭಿನ್ನಭಿಪ್ರಾಯವೇ ದೇಶದ ನಾಗರಿಕರ ಮೇಲಿನ ದಾಳಿಗಳಂತಹ ಘಟನೆಗಳಿಗೆ ವೈರಿ ರಾಷ್ಟ್ರಗಳು ಕೈ ಹಾಕುತ್ತಿವೆ. ನಾವೆಲ್ಲ ಭಾರತ ಅಖಂಡವಾಗಿ ಉಳಿಯುವ ಸಂಕಲ್ಪವನ್ನು ಮಾಡಬೇಕಾಗಿದೆ. ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರ ಮೂಲಕ ಸಮರ್ಥವಾಗಿ ಭಾರತದ ಸೇನಾಶಕ್ತಿ ಪ್ರತ್ಯುತ್ತರ ಕೊಟ್ಟಿದೆ ಎಂದು ಮೆಲಕು ಹಾಕಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ತಾಲ್ಲೂಕು ಆಡಳಿತ ಸೌಧ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಧಾರವಾಡ, ಆ.15: ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಧನ್ಯವಾದ ಹೇಳಲು ಮತ್ತು ಅವರ ಮೌಲ್ಯಗಳನ್ನು ನೆನಪಿಸಿಕೊಳ್ಳಲು ಒಂದು ಅವಕಾಶ. ನಮ್ಮ ಧ್ವಜವನ್ನು ಹಾರಿಸುವುದು, ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವುದು ಮತ್ತು ಏಕತೆಯ ಮನೋಭಾವವನ್ನು ರೂಢಿಸಿಕೊಳ್ಳುವ ದಿನವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ್ ಅವರು ಹೇಳಿದರು. ಧಾರವಾಡ ಜಿಲ್ಲಾಡಳಿತವು ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ