ಮುದ್ದೇಬಿಹಾಳ : ರಾಜ್ಯ ಸರ್ಕಾರ ಎರಡು ದಿನಗಳ ಹಿಂದಷ್ಟೇ ರಾಜ್ಯದ ಸರ್ಕಾರಿ,ಖಾಸಗಿ.ಗುತ್ತಿಗೆ,ಹೊರಗುತ್ತಿಗೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನೌಕರರಿಗೆ, ಕಾರ್ಮಿಕರಿಗೆ ಋತುಚಕ್ರದ ಅವಧಿಯಲ್ಲಿ ಒಂದು ದಿನದ ವೇತನ ಸಹಿತ ರಜೆ ನೀಡುವ ಸಂಬAಧ ಹೊರಡಿಸಿರುವ ಆದೇಶ ಸರ್ಕಾರದ ಮಾನವೀಯ ಸಂವೇದನೆಯ ಆದೇಶ ಎಂದು ಐಎನ್‌ಬಿಸಿಡಬ್ಲೂö್ಯಎಫ್ ಸಂಘಟನೆ ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಸಂಗೀತಾ ನಾಡಗೌಡ ಬಣ್ಣಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರಕಾರದ ಈ ನಿರ್ಧಾರವನ್ನು ನಾನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ.ಮಹಿಳೆಯರಿಗೆ ಋತುಚಕ್ರವೆಂಬುದು ಒಂದು ನೈಸರ್ಗಿಕ ಪ್ರಕ್ರಿಯೆ. ಈ ಅವಧಿಯಲ್ಲಿ ಮಹಿಳೆಯರಿಗೆ ಮಾನಸಿಕ ಶಾಂತಿ, ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಎಲ್ಲ ಮಹಿಳೆಯರಿಗೂ ಇದೊಂದು ಅತ್ಯಂತ ಸೂಕ್ಷ್ಮ ಸಮಯವಾಗಿದೆ.
ಹೀಗಾಗಿ ಕೆಲಸ ಮಾಡುವ ಮಹಿಳೆಯರಿಗಂತೂ ಇಂತಹ ಅವಧಿಯಲ್ಲಿ ವಿಶ್ರಾಂತಿ, ನೆಮ್ಮದಿಯ ಅವಶ್ಯಕತೆ ಇದ್ದು ಇದನ್ನು ಮನಗಂಡಿರುವ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲೀನಿ ರಜನೀಶ್ ಅವರಿಗೆ ಮಹಿಳಾ ಕಾರ್ಮಿಕರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದ್ದಾರೆ.







